ಶ್ರೀನಗರ: ಇಲ್ಲಿನ ಹೊರವಲಯದಲ್ಲಿ ಪಿಡಿಪಿ ಸರಪಂಚ್ ಓರ್ವರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಬುಧವಾರ ಈ ಘಟನೆ ನಡೆದಿದೆ.
ಕನ್ನೂಹ್ ನಲ್ಲಿ ಸರಪಂಚ್ ಸಮೀರ್ ಅಹಮದ್ ಭಟ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಅವರ ನಿವಾಸದ ಬಳಿಯೇ ಈ ಘಟನೆ ನಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರನ್ನು ನಿಧನರಾದರು ಎಂದು ಕಾಶ್ಮೀರ ಐಜಿಪಿ ಹೇಳಿದ್ದಾರೆ. ದಾಳಿಕೋರರನ್ನು ಹಿಡಿಯಲು ಪ್ರದೇಶವನ್ನು ಶೋಧಿಸಲಾಗುತ್ತಿದೆ” ಎಂದು ಅವರು ಹೇಳಿದರು
ಭಾನುವಾರ ಭಯೋತ್ಪಾದಕರು ನಡೆಸಿದ ಅಮೀರಾ ಕಡಲ್ ನಲ್ಲಿ ಗ್ರೆನೇಡ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದರೆ, 35 ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಿಸಿದ ದ್ವಿಚಕ್ರ ವಾಹನವನ್ನೂ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಬಲೂನ್ ಮಾರುತ್ತಿದ್ದ ಹುಡುಗಿ ಈಗ ಮಾಡೆಲ್!
ಬಂಧಿತ ಆರೋಪಿಗಳು ಕಾಶ್ಮೀರ ಕಣಿವೆಯಲ್ಲಿ ಕಾರ್ಯಾಚರಿಸುತ್ತಿರುವ ಸಕ್ರಿಯ ಭಯೋತ್ಪಾದಕರ ನಿರ್ದೇಶನದ ಮೇರೆಗೆ ಭಯೋತ್ಪಾದಕ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಕಾಶ್ಮೀರ ಡಿಐಜಿ ಹೇಳಿದ್ದಾರೆ.
ಇದೇ ವೇಳೆಯಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪೊಲೀಸರು ಮೂವರು ಲಷ್ಕರ್ ಎ ತೋಯ್ಬಾ ಉಗ್ರರನ್ನು ಬಂಧಿಸಿದ್ದಾರೆ.