Advertisement

ಸರ್ಕಟನ್‌ ನಾಲೆ ಪರಿಶೀಲಿಸಿದ ಅಧಿಕಾರಿಗಳು

10:10 PM May 15, 2019 | Team Udayavani |

ಕೊಳ್ಳೇಗಾಲ: ನಗರದ ಹೃದಯ ಭಾಗದಲ್ಲಿರುವ ಸರ್ಕಟನ್‌ ನಾಲೆ ಕಾಮಗಾರಿ ಆರಂಭಗೊಂಡು ವರ್ಷವೇ ಪೂರೈಸಿದ್ದರೂ ಕಾಮಗಾರಿ ಪೂರ್ಣಗೊಳ್ಳದೆ ನಾಲೆ ಅಕ್ರಮ ಒತ್ತುವರಿಗೆ ಸಿಲುಕಿ ಗಬ್ಬುನಾರುತ್ತಿದೆ ಎಂದು ಉದಯವಾಣಿ ದಿನಪತ್ರಿಕೆಯಲ್ಲಿ ವಿಶೇಷ ವರದಿ ಹಿನ್ನೆಲೆಯಲ್ಲಿ ನಾಲೆಗೆ ಉನ್ನತ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ನಗರದ ಹೃದಯಭಾಗದಿಂದ ಆರಂಭಿಸಬೇಕಾಗಿದ್ದ ಸರ್ಕಟನ್‌ ನಾಲೆಯ ಕಾಮಗಾರಿಯನ್ನು ಅಧಿಕಾರಿಗಳು ಕೊನೆಯ ಭಾಗದಿಂದ ಆರಂಭಿಸಿ ಕಾಮಗಾರಿ ಸಂಪೂರ್ಣ ನನೆಗುದಿಗೆ ಬಿದ್ದಿರುವ ವರದಿಯನ್ನು ಕಳೆದ ಏ.22 ರಂದು ಉದಯವಾಣಿ ಪ್ರಕಟಿಸಿದ ಹಿನ್ನೆಲೆ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು, ಕಾಮಗಾರಿ ಕೂಡಲೇ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮೈಸೂರಿನ ಕಬಿನಿ ನಾಲಾ ವಿಭಾಗದ ಸೂಪರಿಟೆಂಡೆಂಟ್‌ ಇಂಜಿನಿಯರ್‌ ಶ್ರೀಕಂಠ ಪ್ರಸಾದ್‌ ಸೂಚನೆ ನೀಡಿದರು.

ತಾಂತ್ರಿ ಕಾರಣದಿಂದ ಸಮಸ್ಯೆ: ಇದೇ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಇಂಜಿನಿಯರ್‌ ಶ್ರೀಕಂಠ ಪ್ರಸಾದ್‌, ಸರ್ಕಟನ್‌ ನಾಲೆ, ಕುಪ್ಪಮ್ಮ ಕಾಲುವೆ, ಹಂಪಾಪುರ ಕೆರೆಯ ನಾಲೆ ದುರಸ್ತಿಗೆ 20.30 ಕೋಟಿ ರೂ. ವೆಚ್ಚದಲ್ಲಿ ಅನುದಾನ ಬಿಡುಗಡೆಯಾಗಿದ್ದು, ಕುಪ್ಪಮ್ಮ ಕಾಲುವೆ ಕಾಮಗಾರಿ ಪ್ರಾರಂಭವಾಗಿದ್ದು, ಸರ್ಕಟನ್‌ ನಾಲೆಯಲ್ಲಿ ಹೂಳೆತ್ತಿಸಿದ ಅಧಿಕಾರಿಗಳು, ತಾಂತ್ರಿಕ ಕಾರಣದಿಂದ ನಂತರ ಕಾಮಗಾರಿ ಸಂಪೂರ್ಣ ನನೆಗುದಿಗೆ ಬಂದಿದೆ ಎಂದರು.

4 ತಿಂಗಳಲ್ಲಿ ಕಾಮಗಾರಿ ಪೂರ್ಣ: ನಾಲೆಯ ಕಾಮಗಾರಿಯನ್ನು 4 ತಿಂಗಳ ಒಳಗಾಗಿ ಪೂರ್ಣಗೊಳಿಸಲಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಚಿಕ್ಕರಂಗನಾಥ ಕೆರೆಯ ಕೋಡಿಯಿಂದ ಕೊಂಗಳಕೆರೆವರೆಗೂ ಸುಮಾರು 1600 ಮೀ. ಉದ್ದ, 7.5 ಮೀ. ಅಗಲದಲ್ಲಿ ಬಾಕ್ಸ್‌ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದು. ಚರಂಡಿ ಮಧ್ಯಭಾಗದಲ್ಲಿ ಗಟ್ಟಿ ಮಣ್ಣು ಸಿಗುವವರೆಗೂ ನಾಲೆಯ ಹಳೆಯ ಮಣ್ಣುಗಳನ್ನು ಹೊರ ತೆಗೆಯಲಾಗುವುದು. ನಂತರ ರೋಲ್‌ ಮಾಡಿ ಎರಡು ಕಡೆ ಗೋಡೆಗಳನ್ನು ನಿರ್ಮಾಣ ಮಾಡಿ, ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಇಲಾಖೆಗಳ ಗುದ್ದಾಟ: ನಾಲೆಯ ಉದ್ದಕ್ಕೂ ಇದ್ದ ಮರಗಳನ್ನು ಅರಣ್ಯ ಇಲಾಖೆಯವರು ತೆರವು ಮಾಡುವಲ್ಲಿ ಮೆದು ಧೋರಣೆ ತೋರಿದರು ಮತ್ತು ನಾಲೆಯ ಎರಡು ಬದಿಯಲ್ಲಿ ಅಕ್ರಮ ಒತ್ತುವರಿ ಸ್ಥಳವವನ್ನು ತೆರವು ಮಾಡುವಲ್ಲಿ ನಗರಸಭೆ ಅಧಿಕಾರಿಗಳು ಸಹಕಾರ ನೀಡದ ಪ್ರತಿಫ‌ಲವಾಗಿ ಕಾಮಗಾರಿ ವಿಳಂಬವಾಗಬೇಕಾಯಿತು ಎಂದು ಇಲಾಖೆಗಳ ಒಳಗಿನ ಗುದ್ದಾಟವನ್ನು ಹೊರ ಹಾಕಿದರು.

Advertisement

ವಿನ್ಯಾಸ ಶಾಖೆಯ ಎಇಇ ಚಂದ್ರಶೇಖರ, ನಿವೃತ್ತ ಸೂಪರಿಟೆಂಡೆಂಟ್‌ ಎಂಜಿನಿಯರ ಸಂಪತ್‌ ಕುಮಾರ್‌, ಕಬಿನಿ ನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಉಮೇಶ್‌ ಮತ್ತು ಸಿಬ್ಬಂದಿ ವರ್ಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next