ಮೈಸೂರು: ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ನಮ್ಮ ಸಂಸ್ಕೃತಿ ಹಾಗೂ ಕಲೆ ಉಳಿವಿಗೆ ಮಹಿಳೆಯರು ಪಣತೊಡಬೇಕು ಎಂದು ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲೆ ಡಾ.ಧರಣಿದೇವಿ ಮಾಲಗತ್ತಿ ಹೇಳಿದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದಲ್ಲಿ ಭಾನುವಾರ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಆಯೋಜಿಸಿದ್ದ ತಮ್ಮ 3ನೇ ವರ್ಷದ ಸ್ಯಾರಿ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.
ವಿಶ್ವ ಮಹಿಳಾ ದಿನದ ಅಂಗವಾಗಿ ಸ್ಯಾರಿ ವಾಕಥಾನ್ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ. ಈ ಹಿನ್ನೆಲೆಯಲ್ಲಿ ಯುವತಿಯರು ಮತ್ತು ಮಹಿಳೆಯರು ಸೀರೆ ಧರಿಸು ವುದಕ್ಕೆ ಈ ಕಾರ್ಯಕ್ರಮ ಪ್ರೇರಣೆಯಾಗಲಿದೆ. ಜತೆಗೆ ಅರಿವು ಮೂಡಿಸದಂತಾಗುತ್ತದೆ ಎಂದರು. ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂದು ಬರುತ್ತಿದ್ದಾರೆ. ಅದೇ ರೀತಿ ಅವರು ಇನ್ನಷ್ಟು ಹೇಳಿಗೆ ಸಾಧಿಸುವ ಜೊತೆಗೆ ಸ್ವಾವಂಬಿ ಜೀವನ ನಡೆಸ ಬೇಕು. ನಮ್ಮ ಸಂಸ್ಕೃತಿ ಕಲೆಯನ್ನು ಉಳಿವಿಗೆ ಪಣ ತೊಡಬೇಕು ಎಂದು ಸಲಹೆ ನೀಡಿದರು.
ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್‌ಸಂಸ್ಥೆಯ ಅಧ್ಯಕ್ಷೆ ಕವಿತಾ ವಿನೋದ್ ಮಾತನಾಡಿ, ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಮ್ಮ ಸಂಸ್ಥೆಯು 3ನೇ ವರ್ಷದ ಸ್ಯಾರಿ ವಾಕಥಾನ್ ಆಯೋಜಿಸಿದೆ. ಲಾಕ್‌ಡೌನ್ ಬಳಿಕ ಇದೊಂದು ಮಹಿಳೆಯರಿಗೆ ಚೈತನ್ಯ ತುಂಬುವ ದೊಡ್ಡ ಕಾರ್ಯಕ್ರಮವಾಗಿದ್ದು, ಮಹಿಳೆಯರನ್ನು ಪ್ರೇರೇಪಿಸಲು ಸ್ಯಾರಿ ವಾಕಥಾನ್ ಆಯೋಜಿಸಲಾಗಿದೆ ಎಂದರು.
ವಾಕಥಾನ್‌ನಲ್ಲಿ 18 ರಿಂದ 70 ವರ್ಷದವರೆಗಿನ ಮಹಿಳೆಯರು ವಿವಿಧ ವಿನ್ಯಾಸದ ಸೀರೆ ಧರಿಸಿ ಗಮನ ಸೆಳೆದರು. ಸ್ಯಾರಿ ವಾಕಥಾನ್ ಸ್ಪರ್ಧೆಯಲ್ಲಿ 50 ವರ್ಷದೊಳಗಿನ ವಿಭಾಗದಲ್ಲಿ ಶುಭ ರೈ (ಪ್ರ), ವಿ.ಲಲಿತಾ (ದ್ವಿ) ರಂಜಿತಾ (ತೃ) ರೇವಾತಿ ಸಮಾಧನಕರ ಬಹುಮಾನ ಪಡೆದರು. 50 ವರ್ಷಮೇಲ್ಪಟವರ ವಿಭಾಗದಲ್ಲಿ ಡಾ.ಬಿ.ಮಲ್ಲಿಕಾ(ಪ್ರ), ಆಶಾ ಎಸ್.ರಾವ್ (ದ್ವಿ) ಎಂ.ಎನ್.ಪ್ರೇಮ(ತೃ) ನಿರ್ಮಾಲ ಪ್ರಭು, ಕುಸುಮಾ ಮೂರ್ತಿ ಸಮಾಧನಕರ ಬಹುಮಾನ ಪಡೆದರು. ಲಕ್ಕಿ ಲೇಡಿ ಬಹುಮಾನಕ್ಕೆ ಭಾಜನರಾದ ಟಿ.ಎಸ್. ಪೂರ್ಣಿಮಾ ಅವರಿಗೆ ಐದು ಸಾವಿರ ರೂ. ಗಿಫ್ಟ್ ವೋಚರ್ ನೀಡಲಾಯಿತು.
ಪುರಭವನದ ಆವರಣದಲ್ಲಿ ಆರಂಭವಾದ ಸ್ಯಾರಿ ವಾಕಥಾನ್ ಶ್ರೀಹರ್ಷ ರಸ್ತೆ, ಬಿ.ಎನ್.ರಸ್ತೆ, ಮಲೆ ಮಹದೇಶ್ವರ (ಛತ್ರಿಮರದ ರಸ್ತೆ), ಹೇಮಚಂದ್ರ ವೃತ್ತ, ಕುಪ್ಪಣ್ಣ ಪಾರ್ಕ್, ಹಾರ್ಡಿಂಚ್ ವೃತ್ತ, ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನ ಆವರಣ ಬಳಸಿಕೊಂಡು ಪುರಭವನ ಬಳಿ ವಾಕಥಾನ್ ಮುಕ್ತಾಯ: ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀ ಅರುಣ್, ಸಂಯೋಜಕಿ ಅನಿತಾ ಸುರೇಶ್ ಇದ್ದರು.