ಬಹಳ ದುಃಖದ ಸಂಗತಿಯಾದರೆ ಕಿತ್ತೂರು ಸಂಸ್ಥಾನದಲ್ಲಿ ಬೆಳಕಿಗೆ ಬಾರದೇ ಅನೇಕ ಅಂಶಗಳು ಮುಚ್ಚಿ ಹೋಗಿರುವುದು ಅಷ್ಟೇ ಖೇದಕರ ಸಂಗತಿ.
Advertisement
ದೇಶದ ಮೊದಲ ಹುತಾತ್ಮ: 1852ರಲ್ಲಿ ಮಂಗಲ್ ಪಾಂಡೆ ಬ್ರಿಟಿಷ್ ಸೈನಿಕ ಹಂದಿ ಮತ್ತು ಹಸುವಿನ ಕೊಬ್ಬು ಸವರಿದ ಮದ್ದು ಗುಂಡು ಬಳಕೆ ಮಾಡಲು ನಿರಾಕರಿಸಿದ್ದು, ಆಗ ಮಂಗಲ್ ಪಾಂಡೆಗೆ ಬ್ರಿಟಿಷ್ ಅಧಿ ಕಾರಿ ಗಲ್ಲು ಶಿಕ್ಷೆ ವಿಧಿ ಸಿದ್ದನ್ನು ನಾವೆಲ್ಲರೂ ಇತಿಹಾಸದ ಪುಟಗಳಲ್ಲಿ ಓದಿದ್ದೇವೆ. ಆದರೆ ಅದಕ್ಕೂ 30 ವರ್ಷ ಮೊದಲೇ ಕಿತ್ತೂರು ಸಂಸ್ಥಾನದ ಸೇನಾ ದಂಡನಾಯಕ, ಸಂಸ್ಥಾನದ ಮಹಾ ಪ್ರಧಾನಿ, ದೇಶದ ಮೊದಲ ಹುತಾತ್ಮ ಇವತ್ತಿನ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದ ಸರದಾರ ಗುರುಸಿದ್ದಪ್ಪನವರು ಎಂಬ ಸಂಗತಿ ನಾಡಿನ ಮಹಾ ಜನತೆಗೆ ಗೂತ್ತಿಲ್ಲದೇ ಇರುವುದು ಖೇದಕರ ವಿಷಯ.
ಸನ್ನದ್ಧವಾಗುವ ಪೂರ್ವದಲ್ಲಿ ಅಂತಿಮವಾಗಿ ಸರದಾರ ಗುರುಸಿದ್ದಪ್ಪನವರಿಂದ ಸಲಹೆ ಕೇಳಿದರು.
Related Articles
ಗುರುಸಿದ್ದಪ್ಪನವರು. ಯುದ್ಧದ ರಣತಂತ್ರ ರೂಪಿಸಿದ್ದು ಮತ್ತು ಬ್ರಿಟಿಷ್ ಸಹನೆ ಕೆಣಕುವಂತೆ ಮಾಡಿ ಅವರನ್ನು ರೊಚ್ಚಿಗೆಬ್ಬಿಸಿದ್ದು ಇದೇ ಸರದಾರ ಗುರುಸಿದ್ದಪ್ಪನವರು.
Advertisement
ಅಕ್ಟೋಬರ್ 21ರಂದು ಬ್ರಿಟಿಷ್ ಅಧಿಕಾರಿಗಳು ಕಿತ್ತೂರು ಖಜಾನೆ ಒಪ್ಪಂದಕ್ಕೆ ಸಹಿ ಹಾಕಲು ಮತ್ತು ಕಿತ್ತೂರು ಕೋಟೆಯ ದ್ವಾರದಸೈನಿಕರ ಬದಲಾವಣೆಗೆ ಬ್ರಿಟಿಷ್ ಅಧಿ ಕಾರಿಗಳಾದ ಸ್ಟೀವನ್ಸನ್ ಮತ್ತು ಇಲಿಯಟ್ ಸ್ಪಷ್ಟವಾಗಿ ನಿರಾಕರಿಸಿ ಥ್ಯಾಕರೆಯ ದಬ್ಟಾಳಿಕೆಯನ್ನು ಪ್ರಶ್ನಿಸಿದ ಮೊದಲ ವ್ಯಕ್ತಿ ಸರದಾರ ಗುರುಸಿದ್ದಪ್ಪನವರು.ಇದರ ಸಿಟ್ಟನ್ನು ಮನಸಿನಲ್ಲಿಟ್ಟುಕೊಂಡು ದಗದಗಿಸುತ್ತಿದ್ದ ಬ್ರಿಟಿಷರು 1824 ಡಿ.3 ರಿಂದ 5ರವರೆಗೆ ಕಿತ್ತೂರಿನಲ್ಲಿ ನಡೆದ ಎರಡನೇ ಯುದ್ಧದಲ್ಲಿ 25 ಸಾವಿರ ಸೈನಿಕರನ್ನು
ಕೂಡಿಸಿ ಕಿತ್ತೂರು ಸಂಸ್ಥಾನದ ಮೇಲೆ ಯುದ್ಧ ಸಾರಿದರು. 1824 ಡಿ. 4 ಮತ್ತು 5ರಂದು ಗಡಾದ ಮರಡಿ ವಶಪಡಿಸಿಕೊಳ್ಳುವ ಸಮಯದಲ್ಲಿ ಸರದಾರ ಗುರುಸಿದ್ದಪ್ಪ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಮತ್ತಿತರರನ್ನು ಸೆರೆ ಹಿಡಿದರು. ನಂತರ ಇವರನ್ನು ಬಂಧಿಸಿ ಬೆಳಗಾವಿ ಜೈಲಿನಲ್ಲಿ ಇಟ್ಟರು. ಒಂದು ವರ್ಷದ ನಂತರ ಅಂದರೆ 1825 ರಲ್ಲಿ ಅಮಟೂರ ಬಾಳಪ್ಪ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಇತರರನ್ನು ಬ್ರಿಟಿಷ್ ಸರಕಾರ ಜಾಮೀನು ನೀಡಿ ಬಿಡುಗಡೆ ಮಾಡಿತು. ಆದರೆ ಸರದಾರ ಗುರುಸಿದ್ದಪ್ಪನವರಿಗೆ ಜಾಮೀನು ನೀಡದೆ ಅವರನ್ನು ಜೈಲಿನಲ್ಲಿ ಉಳಿಸಿಕೊಂಡು ಚಿತ್ರಹಿಂಸೆ ನೀಡಿದರು. ಸರದಾರ ಗುರುಸಿದ್ದಪ್ಪನವರನ್ನು ಬಿಡುಗಡೆ ಮಾಡಿದರೆ ಬ್ರಿಟಿಷ್ ಸರಕಾರಕ್ಕೆ ಆತಂಕ ಇದೆ ಎಂದು ಬ್ರಿಟಿಷ್ ಅಧಿಕಾರಿಗಳು ಪತ್ರ ವಿನಿಮಯ ಮಾಡಿಕೊಂಡ ದಾಖಲೆಗಳು ಈಗಲೂ ಲಭ್ಯವಿದೆ ಎಂದರೆ ಸರದಾರ ಗುರುಸಿದ್ದಪ್ಪನವರ ಕುರಿತು ಬ್ರಿಟಿಷ್ ಸಾಮ್ರಾಜ್ಯಷಾಹಿಗೆ ಇರುವ ಆತಂಕ ಅರಿವಾಗುತ್ತದೆ. ಸರದಾರ ಗುರುಸಿದ್ದಪ್ಪನವರನ್ನು ಬದುಕಲು ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎಂದರಿತು ಬ್ರಿಟಿಷ್ ಅಧಿಕಾರಿಗಳು ಬೆಳಗಾವಿಯಲ್ಲಿ ಅವರನ್ನು ಗಲ್ಲು ಹಾಕಿ ಅವರ ಶವವನ್ನು ಹುಕ್ಕೇರಿ ತಾಲೂಕಿನ ಹಂದಿಗುಂದ ಗ್ರಾಮದ ಚರಂಡಿಯಲ್ಲಿ ತುಂಡು ತುಂಡಾಗಿ ಕತ್ತರಿಸಿ ಪ್ರಾಣಿ ಪಕ್ಷಿಗಳಿಗೆ ಹಂಚಿದರು. ಈ ಹೀನ ಕೃತ್ಯದಿಂದ ಬ್ರಿಟಿಷ್ ಸರ್ಕಾರ ಮತ್ತು ಅಧಿಕಾರಿಗಳಿಗೆ ಸರದಾರ ಗುರುಸಿದ್ದಪ್ಪನವರ ಮೇಲೆ ಎಷ್ಟೊಂದು ಸಿಟ್ಟು ಇತ್ತೆಂಬುವುದು
ಅರಿವಾಗುತ್ತದೆ. ಇವತ್ತು ನಾವು ನೀವುಗಳೆಲ್ಲ ಕಿತ್ತೂರು ವಿಜಯೋತ್ಸವ ಆಚರಿಸುತ್ತಿದ್ದೇವೆ ಎಂದರೆ ಅದರಲ್ಲಿ ಕಿತ್ತೂರು ಸಂಸ್ಥಾನದ ರಾಜ-ರಾಣಿಯರ ಜತೆಗೆ ಸರದಾರ ಗುರುಸಿದ್ದಪ್ಪನವರ ಪಾತ್ರ ಬಹಳ ಮುಖ್ಯಎಂದರೆ ಅತಿಶಯೋಕ್ತಿಯಾಗಲಾರದು. ಸರದಾರ ಗುರುಸಿದ್ದಪ್ಪನವರಿಗೆ ಗಲ್ಲು ಹಾಕಿದ ನಂತರ ಅವರ ಪಾತ್ರವನ್ನು ಕಿತ್ತೂರು ಸಂಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣ, ಬಿಚ್ಚುಗತ್ತಿ ಚನ್ನಬಸಪ್ಪ, ವಡ್ಡರ ಯಲ್ಲಣ್ಣ ನಿರ್ವಹಿಸಿರುವುದು ಗಮನಾರ್ಹ. ಬ್ರಿಟಿಷ್ ಅಧಿಕಾರಿಗಳ ಕಾಗದ ಪತ್ರ ತಿಳಿದರೆ ಮಾತ್ರ ಸರದಾರ ಗುರುಸಿದ್ದಪ್ಪನವರ ಭವ್ಯ ವ್ಯಕ್ತಿತ್ವ ಅರಿವಾಗುವುದು. ಗುರುಸಿದ್ದಪ್ಪನವರ ಕುರಿತು ಇರುವ ಭಯ-ಆತಂಕಗಳನ್ನು ಬ್ರಿಟಿಷ್ ಅಧಿ ಕಾರಿಗಳು ತಮ್ಮ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.ದೇಶದ ಮೊದಲ ಹುತಾತ್ಮ ಎಂದರೆ ಸರದಾರ ಗುರುಸಿದ್ದಪ್ಪನವರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸರದಾರ ಶಿವಬಸಪ್ಪ
ಸರದಾರ ಗುರುಸಿದ್ದಪ್ಪ ಅವರ ಸಹೋದರ ಶಿವಬಸಪ್ಪ ಸರದಾರ ಅವರು ಡೋರಿ ಬೆಣಚಿಯಲ್ಲಿ ಇರುವ ಕಿತ್ತೂರು ಸಂಸ್ಥಾನದ
ಹೊಲದಿಂದ ದವಸ ಧಾನ್ಯಗಳ ರಾಶಿ ತೆಗೆದುಕೊಂಡು ಬರುವಾಗ ಬಿಡಿ ರಸ್ತೆಗೆ ಹೊಂದಿಕೊಂಡು ಇರುವ ರಾಣಿ ಚನ್ನಮ್ಮ
ಬಾಲಕಿಯರ ವಸತಿ ಶಾಲೆ ಹತ್ತಿರ ಇರುವ ಕೆರೆ ಪಕ್ಕದ ತಸ್ತೆಯಿಂದ ರಾಶಿ ತುಂಬಿದ ಹಳಬಂಡಿ ಹೊಡೆದುಕೊಂಡು ಬರುವ ವೇಳೆ ಬ್ರಿಟಿಷರ ಮತ್ತು ಸರದಾರ ಶಿವಬಸಪ್ಪನವರ ನಡುವೆ ಯುದ್ಧ ಆರಂಭವಾಗಿ ಬ್ರಿಟಿಷರ ಗುಂಡು ಶಿವಬಸಪ್ಪನವರ ದೇಹ ಹೊಕ್ಕು ಪ್ರಾಣ ತ್ಯಜಿಸಿದರು. ದೇಹ ಕೆಳಗೆ ಬೀಳದೆ ಹಳಬಂಡಿಯಲ್ಲಿ ಗುಂಡು ಹೊಡೆಯುವ ಸ್ಥಿತಿಯಲ್ಲಿ ದೇಹ ಹಾಗೆ ನಿಂತಿತ್ತು. ಇದನ್ನು
ನೋಡಿದರೆ ಅವರು ಎಂತಹ ವೀರರು ಎಂದು ಅರ್ಥವಾಗುತ್ತದೆ. ನಂತರ ಅವರ ದೇಹವನ್ನು ತೆಗೆದುಕೊಂಡು ನಿಚ್ಚಣಕಿ
ಗ್ರಾಮದ ಸರದಾರ ವಂಶಸ್ಥರಿಗೆ ಮೀಸಲಿಟ್ಟ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ಮಾಡಲಾಯಿತು. ನಂತರ ಆ ಸ್ಥಳದಲ್ಲಿ
ಶಿವಬಸಪ್ಪನವರ ಸಮಾಧಿ ಕಟ್ಟಿದ್ದಾರೆ ಅದರ ಮೇಲೆ ಕಿತ್ತೂರು ರಾಜರ ಸಮಾಧಿಗಳ ಮೇಲೆ ಇರುವಂತೆ ಕಿತ್ತೂರು ಸಂಸ್ಥಾನದ
ಲಾಂಛನವಾದ ಉತ್ತರಕ್ಕೆ ಮುಖ ಮಾಡಿ ನಂದಿ ಮತ್ತು ಈಶ್ವರನ ವಿಗ್ರಹಗಳು ಕಾಣ ಸಿಗುತ್ತವೆ. ಇಂದಿಗೂ ಶಿವಬಸಪ್ಪನವರ
ಸಮಾಧಿಯನ್ನು ನಿಚ್ಚಣಕಿ ಗ್ರಾಮದ ಸರದಾರ ವಂಶಸ್ಥರು ಸಂಪ್ರದಾಯದಂತೆ ಪೂಜೆ ಮಾಡುತ್ತಾ ಬರುತ್ತಿದ್ದಾರೆ. *ಬಸವರಾಜ ಚಿನಗುಡಿ