Advertisement

ಸಾರಥಿ ಪೋರ್ಟಲ್‌ ಸಮಸ್ಯೆ: ಪರವಾನಿಗೆ ಸಿಂಧುತ್ವ ವಿಸ್ತರಣೆ

12:50 AM Feb 21, 2024 | Team Udayavani |

ಹೊಸದಿಲ್ಲಿ: ಸಾರಥಿ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಲಿಕಾ ಪರವಾನಿಗೆ, ಚಾಲನ ಪರವಾನಿಗೆ ಮತ್ತು ಕಂಡಕ್ಟರ್‌ ಪರವಾನಿಗೆಗಳ ಸಿಂಧುತ್ವವನ್ನು ಫೆ. 29ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

Advertisement

ಜ. 31ರಿಂದ ಫೆ. 12ರ ವರೆಗೆ ಸಾರಥಿ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ ಇದ್ದು, ಪರವಾನಿಗೆಗೆ ಸಂಬಂಧಿಸಿದ ಸೇವೆಗಳನ್ನು ಪಡೆಯುವಲ್ಲಿ ಅರ್ಜಿದಾರರು ಅಡಚಣೆ ಅನುಭವಿಸಿದ್ದರು.

ಈ ಹಿನ್ನೆಲೆಯಲ್ಲಿ 2024ರ ಜ. 31ರಿಂದ ಫೆ. 15ರ ವರೆಗೆ ಅವಧಿ ಮುಗಿದಿರುವ ಪರವಾನಿಗೆಗಳನ್ನು ವಿಸ್ತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next