Advertisement

ಪುರಸಭೆ ಅಧ್ಯಕ್ಷೆಯಾಗಿ ಶರಣಮ್ಮ ಆಯ್ಕೆ

10:31 AM Feb 27, 2018 | Team Udayavani |

ಜೇವರ್ಗಿ: ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಶರಣಮ್ಮ ಯಶವಂತ್ರಾಯ ಕೋಳಕೂರ ಅವಿರೋಧ ಆಯ್ಕೆಯಾಗಿದ್ದಾರೆ.

Advertisement

ಪುರಸಭೆಯಲ್ಲಿ ಒಟ್ಟು 20 ಜನ ಸದಸ್ಯರಲ್ಲಿ ಕಾಂಗ್ರೆಸ್‌-8, ಬಿಜೆಪಿ-3, ಜೆಡಿಎಸ್‌-6, ಪಕ್ಷೇತರ-3 ಸದಸ್ಯರಿದ್ದು, ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಬ) ವರ್ಗಕ್ಕೆ ಮೀಸಲಾಗಿತ್ತು. ಕಾಂಗ್ರೆಸ್‌ನ ಮೂರು ಜನ ಸದಸ್ಯರಲ್ಲಿ ತಲಾ 10 ತಿಂಗಳ ಅಧಿ ಕಾರದ ಒಪ್ಪಂದ ಮಾಡಲಾಗಿತ್ತು. ಮೊದಲ 10 ತಿಂಗಳ ಅವಧಿ ಗೆ ವಾರ್ಡ್‌ 12ರ ಸದಸ್ಯೆ ಮಲ್ಲಮ್ಮ ಮಲ್ಲಣ್ಣ ಅವುಂಟಿ ಅವಿರೋಧ ಆಯ್ಕೆಯಾಗಿದ್ದರು. ಕಳೆದ ತಿಂಗಳು ಪಕ್ಷದ ಕರಾರಿನಂತೆ ಅವುಂಟಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸೋಮವಾರ ನಡೆದ ಚುನಾವಣೆಯಲ್ಲಿ ವಾರ್ಡ್‌ ನಂ.1ರ ಸದಸ್ಯೆ ಶರಣಮ್ಮ ಯಶವಂತ್ರಾಯ ಕೋಳಕೂರ ಮಾತ್ರ ನಾಮಪತ್ರ ಸಲ್ಲಿಸಿದರು. ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇದುದ್ದರಿಂದ ಕೋಳಕೂರ ಅವರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಸಹಾಯಕ ಆಯುಕ್ತ ರಾಚಪ್ಪ ಘೋಷಣೆ ಮಾಡಿದರು. ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಹಾಗೂ ಪಕ್ಷೇತರ ಸದಸ್ಯರು ಗೈರು ಹಾಜರಾಗಿದ್ದರು.

ವಿಜಯೋತ್ಸವ: ಕಾಂಗ್ರೆಸ್‌ನ ಶರಣಮ್ಮ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಶಾಸಕ ಡಾ| ಅಜಯಸಿಂಗ್‌ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ, ವಿತರಿಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಇಟಗಿ, ಮುಖಂಡರಾದ ರಾಜಶೇಖರ ಸೀರಿ, ನೀಲಕಂಠ ಅವುಂಟಿ, ಸಂಗನಗೌಡ ಗುಳಾಳ, ಸೋಮಣ್ಣ ಕಲ್ಲಾ, ರಹೇಮಾನ ಪಟೇಲ, ಬಸವರಾಜ ಲಾಡಿ, ರವಿ ಕೋಳಕೂರ, ಶರಣು ಗುತ್ತೇದಾರ, ಪ್ರಕಾಶ ಹಳಿಮನಿ, ಮಹಿಬೂಬ ಚನ್ನೂರ, ಬಸವರಾಜ ಪೂಜಾರಿ, ಕಾಂತಪ್ಪ ಪೂಜಾರಿ, ಮರೆಪ್ಪ ಸರಡಗಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next