Advertisement

ಶರಣಬಸವೇಶ್ವರ ರಥೋತ್ಸವ: ಅನ್ನಸಂತರ್ಪಣೆ

03:25 PM Mar 18, 2017 | |

ಕಲಬುರಗಿ: ಮಹಾದಾಸೋಹಿ ಶರಣಬಸವೇಶ್ವರರ 195ನೇ ಜಾತ್ರಾ ಮಹೋತ್ಸವ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಅನ್ನಸಂತರ್ಪಣೆ, ತಂಪು ಪಾನೀಯ, ಮಜ್ಜಿಗೆ ವಿತರಣೆಯಂತಹ ದಾಸೋಹ ಕಾರ್ಯಕ್ರಮಗಳನ್ನು ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದವು. 

Advertisement

ನಗರದ ರಾಮಮಂದಿರ ಬಳಿ ಸಾಯಿ ಏಕದಂತ ಯುವ ಮಂಡಳಿ ಹಾಗೂ ದಿಲೀಪ ಆರ್‌. ಪಾಟೀಲ ಅಭಿಮಾನಿ ಬಳಗದಿಂದ ಶರಣಬಸವೇಶ್ವರ ಜಾತ್ರೆ ಅಂಗವಾಗಿ ಮಾಜಿ ಉಪಮೇಯರ್‌ ಮಹೇಶ ಹೊಸೂರಕರ ಪ್ರಸಾದ ವಿತರಣೆಗೆ ಚಾಲನೆ ನೀಡಿದರು. 

ಈರಣ್ಣ ಪಾಟೀಲ ಝಳಕಿ, ಶರಣು ಸರಡಗಿ, ಶಿವು ಸ್ವಾಮಿ ಹಿರೇಮಠ, ರಾಚಣ್ಣ ಮ್ಯಾಕೇರಿ, ರವಿ ಪೂಜಾರಿ, ವಿರೇಶ ಪಡಶೆಟ್ಟಿ, ಗಿರೀಶ ಹೊನೂರಕರ, ಅಮರ ಶಿರವಾಳ, ಶಶಿಕಾಂತ, ಶರಣು ವಾರದ ಹಾಗೂ ಇತರರಿದ್ದರು. 

ನಗರದ ರಾಷ್ಟ್ರಪತಿ ಚೌಕ್‌ನಿಂದ ಶರಣಬಸವೇಶ್ವರ ಕಾಲೇಜು ಮಾರ್ಗದಲ್ಲಿನ ರಸ್ತೆ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಜಿಲ್ಲಾ ನ್ಯಾಯಾಲಯದ ರಸ್ತೆ, ನೂತನ ವಿದ್ಯಾಲಯ ಮಾರ್ಗ, ಜಗತ್‌ ವೃತ್ತ, ದೇವಸ್ಥಾನದ ಆವರಣ, ನಗರದ ಗೋವಾ ಹೋಟೆಲ್‌ ಬಳಿ ವಿವಿಧ ಸಂಘಟನೆಗಳು ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ತಂಪು ಪಾನೀಯ ವಿತರಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next