Advertisement

ರುದ್ರಪಾರಾಯಣದಿಂದ ಶರಭೇಶ್ವರನಿಗೆ ಸಂಪತ್ತು ಪ್ರಾಪ್ತಿ: ದ್ವಾರಕಾನಾಥ ಗುರೂಜಿ

09:32 PM Apr 19, 2019 | Team Udayavani |

ಪುಂಜಾಲಕಟ್ಟೆ: ಧಾರ್ಮಿಕ ಕ್ಷೇತ್ರದಲ್ಲಿ ಶರಭೇಶ್ವರನ ಸನ್ನಿಧಿಗಳು ಅಪರೂಪವಾಗಿದ್ದು, ಅದರ ಜೀರ್ಣೋದ್ಧಾರ ಕಾರ್ಯದ ಸಂಕಲ್ಪದ ಸಂದರ್ಭ ರುದ್ರಪಾರಾಯಣಕ್ಕೆ ಮಹತ್ವ ನೀಡಿದಾಗ ಸಂಪತ್ತು ಹೆಚ್ಚಿನ ಪ್ರಮಾಣದಲ್ಲಿ ಲಭ್ಯ ವಾಗುತ್ತದೆ ಎಂದು ಬೆಂಗಳೂರಿನ ಶಂಕರನಾರಾಯಣ ದ್ವಾರಕಾನಾಥ ಗುರೂಜಿ ಅಭಿಪ್ರಾಯಪಟ್ಟರು.

Advertisement

ಶುಕ್ರವಾರ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆ ಯಲ್ಲಿ ಅನುಜ್ಞಾಕಲಶ, ಬಾಲಾಲಯ ಪ್ರತಿಷ್ಠೆಯ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ, ದೇವರ ಕಾರ್ಯದಲ್ಲಿ ನಾವು ನಮ್ಮೊಳಗಿನ ಅಸೂಯೆಗಳನ್ನು ಬಿಟ್ಟು ಜತೆಯಾಗಿ ದುಡಿದಾಗ ನಮ್ಮ ನಿರ್ಧರಿತ ಕಾರ್ಯ ಶೀಘ್ರದಲ್ಲಿ ನೆರವೇರುವ ಜತೆಗೆ ಪುಣ್ಯವೂ ಪ್ರಾಪ್ತವಾಗುತ್ತದೆ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಯಾವುದೇ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯದ ಆರಂಭದಲ್ಲಿ ಜನರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಈ ಕುರಿತು ಚಿಂತಿಸದೆ ಮುನ್ನಡೆದಾಗ ದೇವರ ಅನುಗ್ರಹದಿಂದ ಭಕ್ತರು ಹೆಚ್ಚುತ್ತಾರೆ ಎಂದರು.

ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಮಾತನಾಡಿ, ಧಾರ್ಮಿಕವಾಗಿ ವಿಶೇಷ ಶಕ್ತಿ ಹೊಂದಿರುವ ಸರಪಾಡಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಸಾಂಗವಾಗಿ ನೆರವೇರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಪದ್ಮಶೇಖರ್‌ ಜೈನ್‌, ಮುಂಬಯಿಯ ಉದ್ಯಮಿ ಕುಸುಮಾಧರ ಡಿ. ಶೆಟ್ಟಿ ಚೆಲ್ಲಡ್ಕ, ವಾಸ್ತುಶಿಲ್ಪಿ ಮಹೇಶ್‌ ಭಟ್‌ ಮುನಿಯಂಗಳ, ವೈದ್ಯರಾದ ಡಾ| ಸತ್ಯಶಂಕರ್‌ ಶೆಟ್ಟಿ ಬಿ.ಸಿ. ರೋಡ್‌, ಡಾ| ಶಿವಪ್ರಸಾದ್‌ ಶೆಟ್ಟಿ ಬಿ.ಸಿ. ರೋಡ್‌, ಡಾ| ರಾಜಾರಾಮ್‌ ಕೆ.ಬಿ. ಉಪ್ಪಿನಂಗಡಿ, ಡಾ| ಭರತ್‌ ಶೆಟ್ಟಿ, ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕಿ ಉಷಾಲತಾ ಸರಪಾಡಿ, ಉದ್ಯಮಿ ಕರ್ನೂರು ಮೋಹನ್‌ ರೈ, ಗೃಹ ರಕ್ಷಕ ದಳದ ಜಿಲ್ಲಾ ಅಧೀಕ್ಷಕ ಡಾ| ಮುರಳಿಮೋಹನ್‌ ಚೂಂತಾರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎಸ್‌. ಶೆಟ್ಟಿ ಸರಪಾಡಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next