Advertisement

ಸಾರಾ ಅಬೂಬಕ್ಕರ್ ಕಾದಂಬರಿ ಆಧಾರಿತ ‘ಸಾರಾ ವಜ್ರ’ಮೇ 20 ರಂದು ತೆರೆಗೆ

02:08 PM May 15, 2022 | Team Udayavani |

ಬೆಂಗಳೂರು: ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ ಆಧಾರಿತ ‘ಸಾರಾ ವಜ್ರ’ ಚಿತ್ರ ಮೇ ೨೦ ರಂದು ಇಡುಗಡೆಯಾಗುತ್ತಿದೆ. ಸಿನಿಮಾದಲ್ಲಿ ಸಾರಾ ಪಾತ್ರದಲ್ಲಿ ಖ್ಯಾತ ನಟಿ ಅನು ಪ್ರಭಾಕರ್ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ಖ್ಯಾತ ಪತ್ರಕರ್ತ ರೆಹಮಾನ್ ಅಭಿನಯಿಸಿದ್ದಾರೆ.

Advertisement

‘ಸಾರಾ’ ವಜ್ರ ಈಗಾಗಲೇ ಅಂತಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದೆ.ಕಾಸರಗೋಡು ಪ್ರದೇಶದ ಮುಸ್ಲಿಂ ಹೆಣ್ಣೊಬ್ಬಳು ಮದುವೆಯ ಬಳಿಕ ಪಡುವ ಯಾತನೆಯ ಚಿತ್ರ ಕಥೆಯನ್ನು ಸಿನಿಮಾ ಹೊಂದಿದೆ ಎಂದು ಚಿತ್ರ ತಂಡ ಹೇಳಿದೆ.

ನನ್ನ 22 ವರ್ಷಗಳ ಚಿತ್ರರಂಗದ ಪಯಣದಲ್ಲಿ ಇದೊಂದು ವಿಭಿನ್ನ ಅನುಭವ. ಇದರಲ್ಲಿ ನಫೀಸಾ ಎಂಬ ಹೆಣ್ಣು ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಪಾತ್ರದ ಪಯಣ ಬಾಲ್ಯದಿಂದ ವೃದ್ಧಾಪ್ಯದವರೆಗೆ ಕಾಣಬಹುದು ಎಂದು ಮುಖ್ಯಭೂಮಿಕೆಯಲ್ಲಿರುವ ನಟಿ ಅನುಪ್ರಭಾಕರ್ ಅನುಭವ ಹಂಚಿಕೊಂಡಿದ್ದಾರೆ.

ಚಿತ್ರ ವನ್ನು ಆರ್ನಾ ಸಾಧ್ಯ ನಿರ್ದೇಶಿಸಿದ್ದು, ಡ್ರೀಮ್ ಹೌಸ್ ಅಡಿಯಲ್ಲಿನಿರ್ಮಾಪಕ ದೇವೇಂದ್ರ ರೆಡ್ಡಿ ನಿರ್ಮಾಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next