Advertisement

ಸಂದೇಶ್ ನಾಗರಾಜ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರಿಂದ ಹೀಗೆ ಆಗಿದೆ: ಸಾ.ರಾ. ಮಹೇಶ್  

05:45 PM Nov 23, 2021 | Team Udayavani |

ಮೈಸೂರು:  ಎಲ್ಲರೂ ಒಗ್ಗಟ್ಟಿನಿಂದ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಹೋರಾಡುತ್ತೇವೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರೇ ಹೇಳಿದಂತೆ ಕಳೆದ ಹಲವು ವರ್ಷಗಳಿಂದಲೂ ಅವರು ನಮ್ಮಿಂದ ಅಂತರ ಕಾಯ್ದು ಕೊಂಡಿದ್ದವರು. ಸಿ ಎನ್ ಮಂಜೇಗೌಡ ಈ ಮೊದಲು ಜೆಡಿಎಸ್ ನಲ್ಲಿದ್ದವರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬೇರೆ ಪಕ್ಷಕ್ಕೆ ಹೋಗಿದ್ದರು. ಇದೀಗ ಆಗಿರುವ ತಪ್ಪನ್ನು ತಿದ್ದಿಕೊಂಡು ಮುಂದುವರೆಯುವುದಾಗಿ ಹೇಳಿಕೊಂಡು ಮತ್ತೆ ಜೆಡಿಎಸ್ ಗೆ ಬಂದಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಮತ್ತು ಹೆಚ್ ಡಿ ರೇವಣ್ಣನವರು ಚರ್ಚಿಸಿ, ಬಳಿಕ ಮಂಜೇಗೌಡಗೆ ಟಿಕೆಟ್ ನೀಡಿದ್ದಾರೆ ಎಂದರು.

ಇದನ್ನೂ ಓದಿ: ಈಶ್ವರಪ್ಪನವರೇ ನಮ್ಮಲ್ಲಿ ಜನ ಇಲ್ಲ,ಎಲ್ಲ ಕಡೆ ಶಂಖ ಊದಲಿಕ್ಕೆ ನಾನೇ ಹೋಗಬೇಕು: ಎಚ್ .ಡಿ.ಕೆ

ಈ ಹಿಂದೆ ಕಾಂಗ್ರೆಸ್ ಗೆ ಮತ ನೀಡಿದ್ದ ಸದಸ್ಯರು ಈಗ ಚಿಂತನೆ ಮಾಡುತ್ತಿದ್ದಾರೆ.ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಒಂದು ಮನೆ ಕೊಟ್ಟಿಲ್ಲ. ಗ್ರಾಮ ಪಂಚಾಯತಿ ಸದಸ್ಯರು ಪಕ್ಷಾತೀತವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಮಂಜೇಗೌಡ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು.

ಪ್ರಮುಖ ನಾಯಕರು ಜೆಡಿಎಸ್ ತೊರೆದಾಗಲೂ ಅದನ್ನು ಅರಗಿಸಿಕೊಳ್ಳುವ ಶಕ್ತಿ ಪಕ್ಷಕ್ಕಿದೆ ಎಂದು ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next