Advertisement

ಚಾಮರಾಜನಗರ ಸಾವು ಪ್ರಕರಣ : ಮೈಸೂರು ಜಿಲ್ಲಾಡಳಿತದ ಸ್ಪಷ್ಟನೆ ಸುಳ್ಳು : ಸಾರಾ ಮಹೇಶ್

01:14 PM May 04, 2021 | Team Udayavani |

ಮೈಸೂರು : ಆಕ್ಸಿಜನ್ ದುರಂತಕ್ಕೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಡಳಿತವೇ ನೇರ ಹೊಣೆ. 24 ಜನರ ಸಾವಿಗೆ ಈ ಎರಡು ಜಿಲ್ಲಾಡಳಿತಗಳೇ ಕಾರಣ ಎಂದು ಮೈಸೂರಿನಲ್ಲಿ ಶಾಸಕ ಸಾರಾ ಮಹೇಶ್ ಹೇಳಿಕೆ ನೀಡಿದ್ದಾರೆ.

Advertisement

ಮೈಸೂರು ಜಿಲ್ಲಾಡಳಿತದ ಸ್ಪಷ್ಟನೆ ಸುಳ್ಳು. ರಾತ್ರಿ 2.30ಕ್ಕೆ ಸದರನ್ ಗ್ಯಾಸ್‌ನಿಂದ 90 ಸಿಲಿಂಡರ್ ಹೋಗಿದೆ. ಮೈಸೂರು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ 24 ಮಂದಿ ಮೃತಪಟ್ಟಿದ್ದಾರೆ. ಐಎಎಸ್ ಅಧಿಕಾರಿಯಿಂದ ತನಿಖೆ ಮಾಡಿಸಿದ್ರೆ ನ್ಯಾಯ ಸಿಗುತ್ತಾ ಸ್ವಾಮಿ.? ಎಂದು ಪ್ರಶ್ನೆ  ಮಾಡಿದ್ದಾರೆ.

ಯಾರ ಒತ್ತಡಕ್ಕೆ ಈ ರೀತಿ ಜಿಲ್ಲಾಧಿಕಾರಿಯನ್ನ ಇಟ್ಟುಕೊಂಡಿದ್ದೀರಿ ಗೊತ್ತಿಲ್ಲ.  ಆದರೆ ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ?. ಕೋವಿಡ್ ನಿರ್ವಹಣೆಗಾದ್ರು ಸರಿಯಾಗಿ ಒಬ್ಬ ಹಿರಿಯ ಅಧಿಕಾರಿಯನ್ನ ನೇಮಿಸಿ ಎಂದು  ಸಾರಾ ಮಹೇಶ್ ಗುಡುಗಿದ್ದಾರೆ.

ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಆಗ್ತಿದೆ. ಈ‌ ಬಗ್ಗೆ ನನಗೆ ಸಾಕಷ್ಟು ಅನುಮಾನ ಬಂದಿದೆ. 40 ಜನ ಬಿಲ್ ಮಾಡಲು ಡಿಸಿ ಆಫೀಸ್ ನಲ್ಲಿದ್ದಾರೆ. ಹೋಮ್ ಕ್ವಾರೈಂಟನ್‌ ನಲ್ಲಿರುವವರ ಹೆಸರಿನಲ್ಲಿ ಹಣ ಮಾಡಿದ್ದಾರೆ. ಬಕೆಟ್, ಮನೆ ಒರೆಸುವ ಬಟ್ಟೆ, ಹೆಸರಿನಲ್ಲಿ ಬಿಲ್ ಹಾಕಲಾಗಿದೆ. ಇದು ಒಂದೇ ಕೇಸ್ ವರ್ಕರ್ ಹೆಸರಿನಲ್ಲಿ‌ ಒಂದು ಕೋಟಿ ಬಿಲ್ ಆಗಿದೆ. ನನಗೆ ಅನುಮಾನ ಬಂದ ಬಳಿಕ ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದಿದ್ದೇನೆ. ಕಾನೂನು ಪ್ರಕಾರ ಹಣ ಕಟ್ಟಿ ನಾನು ಬಿಲ್ ಪಡೆದಿದ್ದೇನೆ. 7 ತಿಂಗಳಿಂದ ಈ‌ವರೆಗೂ ಕೂಡ ನನಗೆ ಮಾಹಿತಿ ಕೊಟ್ಟಿಲ್ಲ. 10ನೇ ತಿಂಗಳಿಂದ‌ ಇಲ್ಲಿಯವರೆಗು ಬಿಲ್ ಗಳನ್ನ ಕೊಟ್ಟಿಲ್ಲ. ಉಸ್ತುವಾರಿ ಸಚಿವರೇ ದಯವಿಟ್ಟು ಗಮನಿಸಿ ಎಂದು ಕೆಲವೊಂದು ಮಾಹಿತಿ ತೋರಿಸಿ ಸಾರಾ ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.

ಪ್ರತಿ ದಿನ ಖರ್ಚಾಗುವ ವೆಚ್ಚವನ್ನು ಜನರಿಗೆ ಮಾಹಿತಿ ನೀಡಿ. ನೀವೂ ಮಾಹಿತಿಯನ್ನ ಕೊಟ್ಟಿದ್ರೆ ನಾವ್ಯಾಕೆ ಆಯೋಗದ ಕದ ತಟ್ಟಬೇಕಿತ್ತು. ನಾವು ಮೈಸೂರಿಗೆ ಬರುವ ಯಾವ ಅಧಿಕಾರಿಯ ಬಗ್ಗೆಯು ಮಾತಾಡಲ್ಲ. ಈ‌ ಮೂವರ ಸಾವಿಗೆ ಮೈಸೂರು ಜಿಲ್ಲಾಡಳಿತ ಆಕ್ಸಿಜನ್‌ ಕೊಡಲಿಲ್ಲ ಎಂಬುದಾದ್ರೆ. ಇವರ ಮೇಲೆ 302/306 ಪ್ರಕರಣ ದಾಖಲಿಸಬೇಕು. ಮೊನ್ನೆ ಒಂದು ಕೋಟಿ ಬಿಲ್ ಆಗ್ತಿದೆ ಎಂದು ದಾಖಲೆ ಇದೆ‌. ಆಗಿದ್ರೆ ಈ‌ ಹಣ ಮೈಸೂರಿನ ನಾಗರೀಕರ ತೆರಿಗೆ ಹಣ ಲೆಕ್ಕ ಕೊಡಿ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಸಾರಾ ಮಹೇಶ್ ಹೇಳಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next