Advertisement

ಮಕ್ಕಳೊಂದಿಗೆ ಸುಶಾಂತ್ ಸಿಂಗ್ ಬರ್ತ್ ಡೇ ಆಚರಿಸಿದ ಸಾರಾ ಆಲಿ ಖಾನ್

03:27 PM Jan 22, 2023 | Team Udayavani |

ಜನವರಿ 21 ರಂದು ಎರಡು ವರ್ಷಗಳ ಹಿಂದೆ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜನ್ಮದಿನವಾಗಿತ್ತು. ಅಭಿಮಾನಿಗಳು ಮತ್ತು ಸುಶಾಂತ್ ಅವರ ಸ್ನೇಹಿತರು ದಿವಂಗತ ನಟನನ್ನು ಜನ್ಮದಿನದಂದು ನೆನೆದಿದ್ದಾರೆ.

Advertisement

ಕೇದಾರನಾಥ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಎದುರು ಬಾಲಿವುಡ್‌ ಗೆ ಪದಾರ್ಪಣೆ ಮಾಡಿದ ನಟಿ ಸಾರಾ ಅಲಿ ಖಾನ್ ಕೂಡ ಸುಶಾಂತ್ ಜನ್ಮ ದಿನವನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಆಚರಿಸಿದ್ದಾರೆ.

ಎನ್‌ಜಿಒ – ಬಾಲ್ ಆಶಾ ಟ್ರಸ್ಟ್‌ ಗೆ ಭೇಟಿ ನೀಡುವ ಮೂಲಕ ನಟಿ ಸಾರಾ, ಸುಶಾಂತ್ ಅವರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಿದರು. ಇನ್ಸ್ಟಾಗ್ರಾಮ್‌ ನಲ್ಲಿ ಸಾರಾ ಹಂಚಿಕೊಂಡ ವೀಡಿಯೊದಲ್ಲಿ, ಮೇಜಿನ ಸುತ್ತಲಿನ ಮಕ್ಕಳು ದಿವಂಗತ ನಟನ ಹುಟ್ಟುಹಬ್ಬದ ಹಾಡನ್ನು ಹಾಡುತ್ತಿರುವಾಗ ಅವರು ಕೇಕ್ ಕತ್ತರಿಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ:ಶ್ರದ್ಧಾ ವಾಲ್ಕರ್ ಪ್ರಕರಣ : 100ಕ್ಕೂ ಹೆಚ್ಚು ಸಾಕ್ಷ್ಯಗಳೊಂದಿಗೆ 3000 ಪುಟಗಳ ಆರೋಪಪಟ್ಟಿ!

“ಹ್ಯಾಪಿಯೆಸ್ಟ್ ಬರ್ತ್ ಡೇ, ಸುಶಾಂತ್. ಇತರರ ನಗು ನಿನಗೆ ಮುಖ್ಯ ಎಂದು ನನಗೆ ತಿಳಿದಿದೆ. ನಾವು ಇಂದು ನಿಮ್ಮನ್ನು ನಗುವಂತೆ ಮಾಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಜೈ ಭೋಲೆನಾಥ್” ಅವರು ಸಾರಾ ಬರೆದು ಕೊಂಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next