Advertisement

SSE – Side B: ಸದ್ದಿಲ್ಲದೆ ಓಟಿಟಿಗೆ ಲಗ್ಗೆಯಿಟ್ಟ ʼಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿʼ

01:16 PM Jan 26, 2024 | Team Udayavani |

ಬೆಂಗಳೂರು: ರಕ್ಷಿತ್‌ ಶೆಟ್ಟಿ ಅವರಿಗೆ ಹಿಟ್‌ ತಂದುಕೊಟ್ಟ ʼಸಪ್ತಸಾಗರದಾಚೆ ಎಲ್ಲೋ  ಸೈಡ್‌ -ಬಿʼ ಥಿಯೇಟರ್‌ ನಲ್ಲಿ ಸದ್ದು ಮಾಡಿದ ಬಳಿಕ ಸೈಲೆಂಟ್‌ ಆಗಿ ಓಟಿಟಿ ಅಖಾಡಕ್ಕೆ ಲಗ್ಗೆಯಿಟ್ಟಿದೆ.

Advertisement

ರಕ್ಷಿತ್ ಶೆಟ್ಟಿಯವರ ರೊಮ್ಯಾಂಟಿಕ್ ಡ್ರಾಮಾ ʼಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿʼ ಕಳೆದ ವರ್ಷ ಬಂದ ಅತ್ಯುತ್ತಮ ಕನ್ನಡ ಸಿನಿಮಾಗಳಲ್ಲಿ ಒಂದಾಗಿತ್ತು. ನವೆಂಬರ್‌ 17 ರಂದು ಥಿಯೇಟರ್‌ ನಲ್ಲಿ ರಿಲೀಸ್‌ ಆದ ಸಿನಿಮಾ ಇದೀಗ ಓಟಿಟಿಯಲ್ಲಿ ರಿಲೀಸ್‌ ಆಗಿದೆ.

ಹೇಮಂತ್ ಎಂ ರಾವ್ ನಿರ್ದೇಶನದಲ್ಲಿ ಬಂದ ಈ ಸಿನಿಮಾದ ಮೊದಲ ಭಾಗ ಅಪಾರ ಪ್ರೇಕ್ಷಕರ ಮನಗೆದ್ದಿತ್ತು. ಎರಡನೇ ಭಾಗಕ್ಕೂ ಉತ್ತಮ ಅಭಿಪ್ರಾಯ ಕೇಳಿ ಬಂದಿತ್ತು.

ʼಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿʼ ಯಲ್ಲಿ ಮನು(ರಕ್ಷಿತ್)‌ ಜೈಲಿನಿಂದ ಹೊರ ಬಳಿಕದ ಕಥೆಯನ್ನು ಹೇಳಲಾಗಿದೆ. ತನ್ನ ಕಳೆದುಹೋದ ಪ್ರೀತಿಯ ಪ್ರಿಯಾ (ರುಕ್ಮಿಣಿ ವಸಂತ್) ಅವರ ಹಿಂದೆಯೇ ಭಾವನೆಗಳ ಹುಡುಕಾಟದಲ್ಲಿ ಸಿನಿಮಾದ ಕಥೆ ಸಾಗುತ್ತದೆ.

ಇತ್ತೀಚೆಗೆ ರಕ್ಷಿತ್‌ ಶೆಟ್ಟಿ, ಶೀಘ್ರದಲ್ಲಿ ಸಿನಿಮಾ ಓಟಿಟಿಗೆ ಬರುವುದಾಗಿ ಹೇಳಿದ್ದರು. ಅದರಂತೆ ಗುರುವಾರ (ಜ. 25 ರಂದು) ರಾತ್ರಿ ಅಮೇಜಾನ್‌ ಪ್ರೈಮ್‌ ನಲ್ಲಿ ʼಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿʼ ರಿಲೀಸ್‌ ಆಗಿದೆ.

Advertisement

ಸಿನಿಮಾದಲಿ ರಕ್ಷಿತ್‌ ಜೊತೆ ರುಕ್ಮಿಣಿ ವಸಂತ್, ಚೈತ್ರ ಜೆ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಇಂದಿರಾ ಮುಂತಾದವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next