Advertisement
ಭಾಗವತರು: ಹೊಳ್ಳ, ಅಮ್ಮಣ್ಣಾಯ, ಪುಣಿಂಚಿತ್ತಾಯ, ಕನ್ನಡಿಕಟ್ಟೆ, ಪ್ರಸಾದ್ ಬಲಿಪ (ತೆಂಕು), ನಗರ, ಹಿಲ್ಲೂರು (ಬಡಗು), ಚೌಕಿಪೂಜೆ, ಅಬ್ಬರ ತಾಳದ ಬಳಿಕ ಚೆಂಡೆ ಜುಗಲ್ ಬಂದಿ- ಪೀಠಿಕೆ ಸ್ತ್ರೀವೇಷ, ಉದ್ಘಾಟನಾ ಸಮಾರಂಭ. ಆ ಬಳಿಕ ಬಹು ನಿರೀಕ್ಷಿತ ಯಕ್ಷ ಸಪ್ತಸ್ವರ. ಪುಷ್ಪರಾಜ್ ಇರಾ ಅವರ ನಿರೂಪಣೆ ಈ ಸಪ್ತಸ್ವರಕ್ಕೆ ಸಕಾಲಿಕ ಹಿನ್ನೆಲೆ ಒದಗಿಸಿತು.
Related Articles
Advertisement
ಅಪರಾಹ್ನದ ನಿರೀಕ್ಷಿತ ತಾಳಮದ್ದಲೆಯ ಪ್ರಸಂಗ ಇಂದ್ರಜಿತು ಕಾಳಗ. ಸುರೇಶ್ ಶೆಟ್ಟಿ, ಸಿರಿಬಾಗಿಲು ಅವರ ಭಾಗವತಿಕೆ. ಬೊಳಿಂಜಡ್ಕ, ವಗೆನಾಡು ಹಿಮ್ಮೇಳ. ಕಲ್ಚಾರ್, ಕುಕ್ಕುವಳ್ಳಿ, ಸದಾಶಿವ ಆಳ್ವ, ಬೊಳಂತಿಮೊಗರು, ವಿಜಯಶಂಕರ ಆಳ್ವ, ಪೆರ್ಮುದೆ ಅವರು ಅರ್ಥದಾರಿಗಳು. ಭಾಸ್ಕರ ರೈ ಅವರ ರಾಮನ ಪಾತ್ರದಲ್ಲಿ ಹೇಳಿದಂತೆ: “ಇಂದ್ರಜಿತು ಸಹಿತ ರಾಕ್ಷಸರ ಮಾಯಾ ವಿದ್ಯೆಯು ತಾಮಸಿ ಪ್ರಭಾವವನ್ನಷ್ಟೇ ಹೊಂದಿದೆ. ಇದು ಶಾಶ್ವತವಲ್ಲ. ಸಾತ್ವಿಕ ತೇಜಸ್ಸಿನ ಎದುರು ಈ ಅಸುರಶಕ್ತಿಗಳು ಸೋಲಲೇಬೇಕು’. ಇದು ಪ್ರಸಂಗ ದ ಆಶಯವೂ ಹೌದು. ಬಳಿಕ ಸಭಾ ಕಾರ್ಯಕ್ರಮ- ಡಾ| ಎಂ. ಪ್ರಭಾಕರ ಜೋಷಿ ಅವರಿಗೆ ಪಟ್ಲ ಪ್ರಶಸ್ತಿ ಪ್ರದಾನ.
ನಂತರ ಕುರುಕ್ಷೇತ್ರಕ್ಕೊಂದು ಆಯೋಗ ಎಂಬ ಯಕ್ಷರಂಗ ಪ್ರಯೋಗ. ದೇರಾಜೆ ಸೀತಾರಾಮಯ್ಯ ಅವರ ರಚನೆ. ಕದ್ರಿ ನವನೀತ ಶೆಟ್ಟಿ ಅವರ ರಂಗ ಪರಿಕಲ್ಪನೆ, ನಿರೂಪಣೆ. ಕುರುಕ್ಷೇತ್ರದ ಘಟನಾವಳಿಯ ಸಮಗ್ರ ಮರು ವಿಶ್ಲೇಷಣೆ ಈ ಪ್ರಸಂಗದ ವೈಶಿಷ್ಟ್ಯ. ಭಾಗವತಿಕೆ: ಹೊಸಮೂಲೆ, ಪೊಳಲಿ, ಬಳ್ಳಮಂಜ, ತಲಪಾಡಿ, ಕಡಂಬಳಿತ್ತಾಯ, ನೆಕ್ಕರೆ ಮೂಲೆ, ಕೌಶಿಕ್.
ಆಯೋಗದ ಮುಂದೆ: ಸೂರಿಕುಮೇರು, ವಿಟ್ಲ, ಶೆಟ್ಟಿಗಾರ್, ಸರಪಾಡಿ, ಉಜಿರೆ, ಉಬರಡ್ಕ, ದಿವಾಣ, ಪೆರ್ಮುದೆ, ಕಟೀಲು, ಗೋಣಿಬೀಡು, ಧರ್ಮಸ್ಥಳ, ಅಮ್ಮುಂಜೆ, ಕಾವಳಕಟ್ಟೆ, ಕನ್ನಡಿಕಟ್ಟೆ, ನಿಟ್ಟೆ, “ಆಯೋಗ’ದ ನ್ಯಾಯಮೂರ್ತಿಗಳಾಗಿ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ.ತಾಳಮದ್ದಲೆ ಮತ್ತು ಈ ಯಕ್ಷಗಾನದಲ್ಲಿ ಸಮಕಾಲೀನ ಪ್ರಸಿದ್ಧ ಕಲಾವಿದರ ಸಂಗಮ ಉಲ್ಲೇಖನೀಯ. ಬಳಿಕ ಕೊಳತ್ತಮಜಲು ಅವರ ಸಂಯೋಜನೆಯಲ್ಲಿ ಜರಗಿದ ಹಾಸ್ಯ ಕಾರ್ಯಕ್ರಮದಲ್ಲಿ ಬಂಟ್ವಾಳ, ಕಟೀಲು, ಉಜಿರೆ, ಕಡಬ, ಕೊಡಪದವು, ಬಂಗಾಡಿ ಅವರು ರಂಜಿಸಿದರು. – ಮನೋಹರ ಪ್ರಸಾದ್