Advertisement
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ್ ಕಾಮತ್ ಮಾತನಾಡಿ, “ಬಿಜೆಪಿ ನನ್ನ ಮೇಲೆ ವಿಶ್ವಾಸ ಇಟ್ಟು ಆವಕಾಶ ನೀಡಿದೆ. ಇದಕ್ಕೆ ಕಪ್ಪು ಚುಕ್ಕೆ ಕಳಂಕ ದ್ರೋಹ ಬಗೆಯದೆ ಜನಸಾಮಾನ್ಯನಾಗಿ ಕೆಲಸ ಮಾಡುತ್ತೇನೆ. ಮಂಗಳೂರನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯುತ್ತೇನೆ. ಈ ಹಿನ್ನೆಲೆಯಲ್ಲಿ ನನ್ನನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಹಾಗೂ ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಕೋರಿದರು.
ಶ್ರೀನಿವಾಸ ಪೂಜಾರಿ ಮಾತನಾಡಿ ಬಿಜೆಪಿಯನ್ನು ಅತ್ಯಧಿಕ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
Related Articles
Advertisement
ಮಂಗಳೂರು ಮೋದಿ ಭೇಟಿ ವೈರಲ್ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಂಗಳೂರು ನಗರಕ್ಕೆ ಆಗಮಿಸಿ ತುಳು ಭಾಷೆಯಲ್ಲಿ ಮಾತನಾಡಿರುವುದು, ಆಗಮನ ನಿರ್ಗಮನದ ವೇಳೆ ರಸ್ತೆಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿ ನಮಸ್ಕರಿಸುತ್ತಿದ್ದ ವೀಡಿಯೊ, ಫೋಟೊಗಳು, ಈ ಹಿಂದೆ ಭೇಟಿ ನೀಡಿದ್ದ ವೇಳೆ ಮಂಗಳೂರು ಜನತೆ ನೀಡಿದ್ದ ಆತಿಥ್ಯ ಸ್ಮರಿಸಿಕೊಂಡು ಆಡಿದ ಮಾತುಗಳು ಹೀಗೆ ಮೋದಿ ಅವರ ಭಾಷಣದ ತುಣುಕುಗಳು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ.
ಇನ್ನೊಂದಡೆ, ಕೇಂದ್ರ ಮೈದಾನದಲ್ಲಿ ಮೋದಿ ಅವರ ಭಾಷಣ ಕೂಡ ಫೇಸ್‌ಬುಕ್‌ನಲ್ಲಿ ಲೈವ್ ಮಾಡಲಾಗಿತ್ತು. ಇದರಿಂದ ವಿದ್ಯುತ್ ಕೈಕೊಟ್ಟ ಕಡೆಗಳಲ್ಲಿಯೂ ಮೋದಿ ಭಾಷಣ ಕೇಳಲು ಸಾಧ್ಯವಾಯಿತು ಎಂದು ತಮ್ಮ ಅಭಿಮಾನಿಗಳು ಮೋದಿ ಲೈವ್ ಪೇಜ್‌ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಬಂದವರಿಗೆ ಮಜ್ಜಿಗೆ, ನೀರು
ಮೈದಾನದಲ್ಲಿ ಸುಮಾರು 5 ಗಂಟೆಯವರೆಗೆ ಅವರಿಸಿಕೊಂಡಿದ್ದ ಬಿಸಿಲಿನ ತೀವ್ರತೆಯನ್ನು ಕಾರ್ಯಕರ್ತರು, ಮೋದಿ ಅಭಿಮಾನಿಗಳು ಎದುರಿಸಬೇಕಾಗಿತ್ತು. ಉರಿ ಬಿಸಿಲಿನ ತಾಪವನ್ನು ಮೊದಲೇ ಊಹಿಸಿಕೊಂಡಿದ್ದ ಕಾರ್ಯಕರ್ತರು ಕ್ಯಾಪ್‌ಗ್ಳನ್ನು, ಪೇಪರ್ ಹಾಳೆಗಳನ್ನು ಜತೆಗೆ ತಂದಿದ್ದರು. ಪಕ್ಷದ ವತಿಯಿಂದಲೂ ಕಾರ್ಯಕರ್ತರಿಗೆ ಕ್ಯಾಪ್‌ಗ್ಳನ್ನು ನೀಡಲಾಯಿತು. ಸಭಿಕರ ದಾಹ ತಣಿಸಲು ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಲಾಯಿತು. ಸುಮಾರು 50,000ಕ್ಕೂ ಅಧಿಕ ಮಜ್ಜಿಗೆ ಹಾಗೂ 50,000 ಅಧಿಕ ನೀರಿನ ಪ್ಯಾಕೇಟ್‌ಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ನಿರ್ಗಮನದ ವೇಳೆಯೂ ಜೈಕಾರ
ಕಾರ್ಯಕರ್ತರು “ಮೋದಿ ಮೋದಿ’ ಎಂದು ಉತ್ಸಾಹದಿಂದ ಜಯಕಾರ ಕೂಗುತ್ತಿದ್ದ ದೃಶ್ಯ ಮೋದಿ ಆಗಮನಕ್ಕೆ ಮಾತ್ರ ಸೀಮಿತವಾಗಿರದೆ ಮೋದಿ ಅವರ ನಿರ್ಗಮನದ ವೇಳೆಯೂ ಕಂಡುಬಂತು. ಮೋದಿ ಅವರು ಭಾಷಣ ಮುಗಿಸಿ ಕೇಂದ್ರ ಮೈದಾನದಿಂದ ನಿರ್ಗಮಿಸುವಾಗಲೂ ನಗರದುದ್ದಕ್ಕೂ ಅಲ್ಲಲ್ಲಿ ರಸ್ತೆಯ ಇಕ್ಕೆಡೆಗಳಲ್ಲೂ ಮತ್ತೆ “ಮೋದಿ ಮೋದಿ’ ಎಂಬ ಘೋಷಣೆ ಮೊಳಗಿಸುತ್ತ, ಅವರತ್ತ ಕೈಬೀಸುತ್ತ ಅಭಿಮಾನಿಗಳು ಅವರನ್ನು ಬೀಳ್ಕೊಟ್ಟರು. ತುಳುವಿನಲ್ಲೇ ಭಾಷಣ ಪ್ರಾರಂಭ
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಮೈದಾನದಲ್ಲಿ ತಮ್ಮ ಭಾಷಣವನ್ನು ತುಳು ಭಾಷೆಯಲ್ಲೇ ಪ್ರಾರಂಭಿಸಿದ್ದು ವಿಶೇಷವಾಗಿತ್ತು. ಮಾತು ಪ್ರಾರಂಭಿಸುತ್ತಲೇ.. “ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಲೆನ ಚರಣೊಗು ಎನ್ನ ಭಕ್ತಿದ ನಮನೊಲು… ತುಳುನಾಡª ಜನಕ್ಕುಲೆಗೆ ಎನ್ನ ಪ್ರೀತಿದ ನಮಸ್ಕಾರಲು(ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪಾದಕ್ಕೆ ನನ್ನ ಭಕ್ತಿಯ ನಮನಗಳು. ತುಳುನಾಡಿನ ಜನರಿಗೆ ನನ್ನ ಪ್ರೀತಿಯ ನಮಸ್ಕಾರಗಳು) ಎಂದರು. ಅನಂತರ ಕನ್ನಡದಲ್ಲಿ ಮಾತು ಮುಂದುವರಿಸಿದ ಮೋದಿ, “ತುಳುನಾಡಿನ ವೀರ ಸಹೋದರರಾದ ಕೋಟಿ-ಚೆನ್ನಯ, ರಾಣಿ ಅಬ್ಬಕ್ಕ, ಸಮಾಜ ಸುಧಾರಕ ಶ್ರೀ ನಾರಾಯಣ ಗುರು, ಸ್ವಾತಂತ್ರ ಸೇನಾನಿ ಕರ್ನಾಡ್ ಸದಾಶಿವ ರಾವ್, ಎಲ್ಲ ಮಹನೀಯರಿಗೆ ನನ್ನ ಸದಾ ನಮನಗಳು’ ಎಂದರು. ಮಂಗಳೂರು ನೀಡಿದ ಪ್ರೀತಿ ಮರೆಯಲಾರೆ
“ಮಂಗಳೂರು ನನಗೆ ಬಹಳಷ್ಟು ಪ್ರೀತಿಯನ್ನು ನೀಡಿದ್ದು, ಇದಕ್ಕೆ ಆಭಾರಿಯಾಗಿದ್ದೇನೆ. ಇದನ್ನು ಎಂದೂ ಮರೆಯಲಾರೆ ಮತ್ತು ಇದನ್ನು ಅಭಿವೃದ್ಧಿಯ ಮೂಲಕ ಮರಳಿಸುತ್ತೇನೆ. ಲಕ್ಷದ್ವೀಪಕ್ಕೆ ತೆರಳುವ ಹಾದಿಯಲ್ಲಿ ರಾತ್ರಿ 1 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದು ನನ್ನನ್ನು ಬರಮಾಡಿಕೊಂಡರು. ಮಂಗಳೂರಿನ ಸಕೀìಟ್ ಹೌಸ್‌ನಲ್ಲಿ ನಾನು ಸವಿದ ತುಳುನಾಡಿನ ನೀರುದೋಸೆ, ಮೂಡೆ, ಸಜ್ಜಿಗೆ ಬಜಿಲಿನ ಸವಿಯನ್ನು ಎಂದೂ ಮರೆಯಲಾರೆ’ ಎನ್ನುವ ಮೂಲಕ 2017ರ ಡಿ. 19ರಂದು ನೀಡಿದ್ದ ಆತಿಥ್ಯವನ್ನು ಪ್ರಧಾನಿ ನೆನಪಿಸಿಕೊಂಡು ಕೃತಜ್ಞತೆ ಮೆರೆದರು. ಅನುವಾದ ಬೇಡ ಎಂದ ಕಾರ್ಯಕರ್ತರು
ಮೋದಿ ಅವರು ಭಾಷಣ ಆರಂಭಿಸಿದಾಗ ಅನುವಾದಕರು ತರ್ಜುಮೆ ಆರಂಭಿಸಿದರು. ಆಗ ಮೈದಾನದಲ್ಲಿ ಸೇರಿದ್ದ ಜನಸಾಗರವು ಅನುವಾದ ಬೇಡ ಎಂದು ಕೈ ಸನ್ನೆ ಮಾಡಿತು. ಇದನ್ನರಿತ ಮೋದಿ ಅವರು ನಗು ನಗುತ್ತಾ “ಅನುವಾದ ಬೇಡವೇ?’ ಎಂದು ಜನರಲ್ಲಿಯೇ ಪ್ರಶ್ನಿಸಿದರು. “ಬೇಡ, ಬೇಡ’ ಎಂಬ ಒಕ್ಕೊರಲ ಉದ್ಗಾರ ಮತ್ತೆ ಸಭಿಕರಿಂದ ಕೇಳಿಬಂತು. 46 ನಿಮಿಷ ನಿರರ್ಗಳ ಭಾಷಣ
ಮೋದಿ ಅವರು ಮಂಗಳೂರಿಗೆ ಆಗಮಿಸುವುದಕ್ಕಿಂತಲೂ ಮುನ್ನ ರಾಜ್ಯದ ಗದಗ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಬೃಹತ್ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಮಂಗಳೂರಿನ ಕೇಂದ್ರ ಮೈದಾನಕ್ಕೆ ಬರುವಷ್ಟರಲ್ಲಿ ಸಂಜೆ 6.45 ಆಗಿತ್ತು. ಇಡೀ ದಿನ ಸುತ್ತಾಡಿ ಹಲವು ಕಡೆ ಭಾಷಣ ಮಾಡಿದ್ದರೂ ಅವರ ಹಾವ-ಭಾವದಲ್ಲಿ ಇನಿತೂ ಸುಸ್ತು ಕಾಣಿಸಲಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಅವರು 46 ನಿಮಿಷಗಳ ಕಾಲ ನಿರರ್ಗಳ ಭಾಷಣ ಮಾಡಿದರು. ಮುಖ್ಯಾಂಶ ಮೊದಲೇ ಟಿಪ್ಪಣಿ
ಮೋದಿ ಸಾಮಾನ್ಯವಾಗಿ ಸಾರ್ವಜನಿಕ ಸಭೆ ಅಥವಾ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಭಾಷಣ ಮಾಡುವಾಗ, ವೇದಿಕೆಯಲ್ಲಿ ನಿಂತು ಆಶುವಾಗಿ ಮಾತನಾಡುತ್ತಾರೆ. ಟಿಪ್ಪಣಿಗಳ ಪೂರ್ವತಯಾರಿ ಬಹಳ ಅಪರೂಪ. ಶನಿವಾರದ ಭಾಷಣದಲ್ಲಿ ಅವರು ಕಾಗದದ ಹಾಳೆಯಲ್ಲಿ ಮಾಡಿಕೊಂಡಿದ್ದ ಟಿಪ್ಪಣಿಗಳನ್ನು ಗಮನಿಸುತ್ತ, ಒಂದೊಂದಾಗಿ ವಿಷಯ ಪ್ರಸ್ತಾಪಿಸುತ್ತಿದ್ದದ್ದು ಗಮನ ಸೆಳೆಯಿತು. ಮೋದಿಗೂ ತಟ್ಟಿದ ಕರಾವಳಿ ಸೆಖೆ
ಕರಾವಳಿಯ ಸೆಖೆ ಮೋದಿ ಅವರಿಗೂ ತಟ್ಟಿತ್ತು. ವೇದಿಕೆಯ ಎರಡು ಬದಿಗಳಲ್ಲಿ ಕೂಲರ್‌ಗಳನ್ನು ಅಳವಡಿಸಲಾಗಿತ್ತಾದರೂ ಸೆಕೆಯ ತೀವ್ರತೆಯಿಂದಾಗಿ ಭಾಷಣದ ನಡುವೆ ಅವರು ಆಗಾಗ ಕರವಸ್ತ್ರದಿಂದ ಬೆವರು ಒರೆಸಿಕೊಳ್ಳುತ್ತಿದ್ದರು. ಪ್ರಧಾನಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಸಾದ
ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯು ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದು ಬರಲಿ ಎಂದು ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಸರ್ವ ಪೂಜೆ ಮಾಡಿಸಿದ್ದರು. ಆ ಪೂಜೆಯ ಪ್ರಸಾದ ಹಾಗೂ ಶಾಲನ್ನು ಪೂಂಜಾ ಅವರು ವೇದಿಕೆಯಲ್ಲೇ ಮೋದಿ ಅವರಿಗೆ ನೀಡಿದಾಗ ಅದನ್ನು ಭಕ್ತಿಯಿಂದ ಸ್ವೀಕರಿಸಿದರು. ಅಟ್ಟೆ ಕಿರೀಟ ಸ್ಮರಣಿಕೆ
ಭಾಷಣ ಆರಂಭಕ್ಕೆ ಮುನ್ನ ನರೇಂದ್ರ ಮೋದಿಯವರನ್ನು ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಸಮ್ಮಾನಿಸಲಾಯಿತು. ಈ ವೇಳೆ ಅವರಿಗೆ ಸ್ಮರಣಿಕೆಯಾಗಿ ಯಕ್ಷಗಾನದ ಅಟ್ಟೆ ಕಿರೀಟವನ್ನು ಗಾಜಿನ ಪೆಟ್ಟಿಗೆ ಒಳಗಿರಿಸಿ ನೀಡಲಾಯಿತು. ಮಂಗಳೂರಿನ ಮಹಾಲಸಾ ಕಲಾ ಶಾಲೆಯ ವಿದ್ಯಾರ್ಥಿನಿ ಸೌಮ್ಯಾ ಈ ಕಲಾಕೃತಿಯನ್ನು ರೂಪಿಸಿದ್ದರು. ಪ್ರಧಾನಿ ಅಟ್ಟೆ ಕಿರೀಟವನ್ನು ಆಸಕ್ತಿಯಿಂದ ವೀಕ್ಷಿಸಿದರು. ಅಲ್ಲದೆ ಮಂಗಳೂರು ಮಲ್ಲಿಗೆ ಹಾರ ಹಾಕಿ, ಮಂಗಳೂರು ಶೈಲಿಯ ಪೇಟಾ ತೊಡಿಸಿ ಸಮ್ಮಾನಿಸಲಾಯಿತು. ಅಡಿಕೆ ಬೆಳೆಗಾರರ ಪರವಾಗಿ ಅಡಿಕೆಯಿಂದಲೇ ಸಿದ್ಧªಪಡಿಸಿದ್ದ ಹಾರವನ್ನು ಕೂಡ ಹಾಕಿ ಗೌರವಿಸಲಾಯಿತು. ವರದಿಗಾರನಿಗೆ ಮುತ್ತಿಗೆ
ಕೇಂದ್ರ ಮೈದಾನಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಭಾಷಣವನ್ನು ವರದಿ ಮಾಡಲು ಬಂದಿದ್ದ ರಾಷ್ಟ್ರೀಯ ವಾಹಿನಿಯಾದ ಇಂಡಿಯಾ ಟುಡೆ ಚಾನೆಲ್‌ನ ರಾಜ್‌ದೀಪ್ ಸರ್ದೇಸಾಯಿ ಅವರನ್ನು ಬಿಜೆಪಿ ಕಾರ್ಯಕರ್ತರು ಸುತ್ತುವರಿದು ಮೋದಿ ಮೋದಿ ಎಂದು ಘೋಷಣೆ ಹಾಕಿದರು. ಸರ್ದೇಸಾಯಿ ಅವರು ಮೋದಿಯವರ ಭಾಷಣ ಕೊನೆಗೊಳ್ಳುತ್ತಿದ್ದಂತೆ ಸಭೆಯಿಂದ ನಿರ್ಗಮಿಸಿದ್ದು, ಈ ವೇಳೆಯಲ್ಲೂ ಕಾರ್ಯಕರ್ತರು ಮತ್ತೆ ಮೋದಿ ಮೋದಿ ಎಂದು ಅವರತ್ತ ನೋಡುತ್ತ ಘೋಷಣೆಗಳನ್ನು ಕೂಗಿದರು. ಸರ್ದೇಸಾಯಿ ಅವರು ಬಿಜೆಪಿ ಹಾಗೂ ಸಂಘ ಪರಿವಾರದ ಬಗ್ಗೆ ಅಕ್ಷೇಪಕಾರಿ ವರದಿಗಳನ್ನು ಬಿತ್ತರಿಸಿದ್ದಾರೆ ಎಂದು ಆರೋಪಿಸಿ ಕಾರ್ಯಕರ್ತರು ಸಮಾವೇಶದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯವೂ ಕಂಡುಬಂತು. ಮೋದಿ ಪರ ಎಲ್ಲೆಡೆ ಘೋಷಣೆ
ಮೋದಿ ಅವರು ಕೇಂದ್ರ ಮೈದಾನ ಪ್ರವೇಶಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಿಂದ ಮೋದಿ ಘೋಷಣೆ ಮೊಳಗತೊಡಗಿತು. ವೇದಿಕೆಯೇರಿ ನೆರೆದಿದ್ದ ಜನಸ್ತೋಮದ ಕೈಬೀಸುತ್ತಿದ್ದಂತೆ ಘೋಷಣೆ ತಾರಕಕ್ಕೇರಿತು. ಝೀರೋ ಟ್ರಾಫಿಕ್
ಮೋದಿ ಶಿವಮೊಗ್ಗದಿಂದ ಹೊರಟು ಸಂಜೆ 6 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ರಸ್ತೆ ಮೂಲಕ ನಗರದ ಕೇಂದ್ರ ಮೈದಾನಕ್ಕೆ ಆಗಮಿಸಿದರು. ಅವರ ಆಗಮನ ಹಾಗೂ ನಿರ್ಗಮನದ ಅವಧಿಯಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ಕೇಂದ್ರ ಮೈದಾನ ವರೆಗಿನ ರಸ್ತೆಯನ್ನು ಪೂರ್ಣ ಝೀರೋ ಟ್ರಾಫಿಕ್ ಮಾಡಲಾಗಿತ್ತು.