Advertisement

ಗಾಯಕಿ ಸಪ್ನಾ ಚೌಧರಿ ಬಿಜೆಪಿಗೆ

02:00 AM Jul 08, 2019 | Team Udayavani |

ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಭಾನುವಾರ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಖ್ಯಾತ ಗಾಯಕಿ ಹಾಗೂ ನೃತ್ಯಪಟು ಸಪ್ನಾ ಚೌಧರಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Advertisement

ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್‌ ತಿವಾರಿ, ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಸಮ್ಮುಖದಲ್ಲಿ ಸಪ್ನಾ ಅವರು ಪಕ್ಷ ಸೇರಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಸಪ್ನಾ ಅವರು ಬಿಜೆಪಿ ಪರ ವ್ಯಾಪಕ ಪ್ರಚಾರ ನಡೆಸಿದ್ದರು. ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳೂ ಎದ್ದಿದ್ದವು. ಆದರೆ, ಅವರು ಆ ಸಮಯದಲ್ಲಿ ಪಕ್ಷ ಸೇರಿರಲಿಲ್ಲ.

ಸಪ್ನಾ ಅವರಲ್ಲದೆ, ದಿವ್ಯಾಂಗ ಯುವಕ, ಮೊದಲ ಬಾರಿಯ ಮತದಾರ, ಸೇನೆಯ ನಿವೃತ್ತ ಅಧಿಕಾರಿಗಳು ಸೇರಿದಂತೆ ಇತರೆ 7 ಮಂದಿಯೂ ಭಾನುವಾರ ಬಿಜೆಪಿಗೆ ಸೇರಿದ್ದಾರೆ.

ತೆಲಂಗಾಣವೇ ಗುರಿ: ಈ ನಡುವೆ, ಬಿಜೆಪಿಯ 2030ರ ಮಿಷನ್‌ ಬಗ್ಗೆ ಬಾಯಿಬಿಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ನಮ್ಮ ಮುಂದಿನ ಗುರಿ ತೆಲಂಗಾಣ ಎಂದು ಹೇಳಿದ್ದಾರೆ. ತೆಲಂಗಾಣದ ಮೇಲ್ವರ್ಗದ ಜನ ಬಿಜೆಪಿಯತ್ತ ಒಲವು ತೋರಿರುವುದು ಸ್ಪಷ್ಟವಾಗಿದೆ. ಮೇಲ್ವರ್ಗದ ಪೈಕಿ ಬಿಜೆಪಿಯ ಮತ ಹಂಚಿಕೆ ಕೇವಲ 6 ತಿಂಗಳ ಅವಧಿಯಲ್ಲಿ ಶೇ.13ರಿಂದ ಒಮ್ಮೆಲೇ ಶೇ.41ಕ್ಕೇರಿದೆ. ಒಟ್ಟಾರೆ ಮತ ಹಂಚಿಕೆ ಪ್ರಮಾಣವು ಶೇ.7.5 ಇದ್ದಿದ್ದು ಶೇ.22ಕ್ಕೇರಿದೆ. ಹೀಗಾಗಿ, ಇಲ್ಲಿ ಪಕ್ಷದ ಬಲವರ್ಧನೆ ಮಾಡುವ ಮೂಲಕ ಬಿಜೆಪಿಯನ್ನು ತೆಲಂಗಾಣದಲ್ಲಿ ಅಧಿಕಾರಕ್ಕೇರಿಸಬೇಕಿದೆ. ಅದಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಬಿಜೆಪಿ ಸದಸ್ಯತ್ವ ನೀಡಿ ಎಂದು ಅಮಿತ್‌ ಶಾ ಅವರು ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next