Advertisement

ಸ್ಯಾಂಟ್ರೋ ರವಿ ಹಣ ಲೆಕ್ಕ ಮಾಡಿದ್ದು ಆರಗ ಮನೆಯಲ್ಲೇ: ಎಚ್‌. ಡಿ. ಕುಮಾರಸ್ವಾಮಿ

11:39 PM Jan 09, 2023 | Team Udayavani |

ಆಳಂದ: ಸ್ಯಾಂಟ್ರೋ ರವಿ ಜತೆಗೆ ಸಚಿವರು, ಬಿಜೆಪಿ ನಾಯಕರು ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಕಂತೆಕಂತೆ ನೋಟುಗಳ ಜತೆ ಸ್ಯಾಂಟ್ರೋ ರವಿ ಫೋಟೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಆರಗ ಮನೆಯಲ್ಲಿ ಹಣ ಲೆಕ್ಕ ಮಾಡುತ್ತಿರುವ ಫೋಟೋ ವೈರಲ್‌ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹೇಳಿದರು.

Advertisement

ಖಜೂರಿಯಲ್ಲಿ ಸೋಮವಾರ ಜರಗಿದ ಜೆಡಿಎಸ್‌ ಪಂಚರತ್ನ ರಥಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸೋಮಶೇಖರ್‌ ಜತೆ ಸ್ಯಾಂಟ್ರೋ ರವಿ ವರ್ಗಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಆ ವೀಡಿಯೋ ರೆಕಾರ್ಡ್‌ ನಾನು ಮಾಡಿಸಿದ್ದಲ್ಲ. ಇಂತಹ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವ ಕರ್ಮ ನನಗಿಲ್ಲ. ದಲ್ಲಾಳಿಗಳೇ ಆಡಳಿತ ನಡೆಸುವ ಸ್ಥಿತಿಯನ್ನು ಬೊಮ್ಮಾಯಿ ಸೃಷ್ಟಿ ಮಾಡಿ ಕೊಂಡಿದ್ದಾರೆ ಎಂದರು.

ನಿಮ್ಮ ತಂದೆ ಹೇಳಿಕೊಟ್ಟಿದ್ದು ಇದೇನಾ ಬೊಮ್ಮಾಯಿ ಅವರೇ? ಸಿಎಂ ಮನೆ ಕೂಗಳತೆ ದೂರ ದಲ್ಲಿ ಇದೆಲ್ಲ ಅಸಹ್ಯ ನಡೆದಿದೆ. ನಿಮ್ಮ ತಂದೆಯವರಿಂದ ನೀವು ಕಲಿತದ್ದು ಇದೇನಾ ಬೊಮ್ಮಾಯಿಯ ವರೇ ಎಂದು ಎಚ್‌ಡಿಕೆ ಪ್ರಶ್ನಿಸಿದರು.

ನನ್ನ ಮೇಲೆ ಮಾಡಿದ ಆರೋಪವನ್ನು ಎಚ್‌.ಡಿ. ಕುಮಾರಸ್ವಾಮಿ ಸಾಬೀತು ಮಾಡಬೇಕು. ನನ್ನ ಮನೆಯಲ್ಲಿ ಆತ ಹಣದ ಗಂಟನ್ನು ಬಿಚ್ಚಿದ್ದಾನೆ ಎಂದು ಸತ್ಯಕ್ಕೆ ಅಪಚಾರವಾಗುವಂಥ ಆಪಾದನೆ ಮಾಡಿದ್ದಾರೆ. ಯಾವ ಕಾರಣದಿಂದ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು
ತಿಳಿಯುತ್ತಿಲ್ಲ.
– ಆರಗ ಜ್ಞಾನೇಂದ್ರ, ಗೃಹ ಸಚಿವ

ಇನ್ನು ಮೂರು ತಿಂಗಳಲ್ಲಿ ನಾನೇ ಸಿಎಂ
ಮುಂದಿನ ಮೂರು ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ನಾನೇ ಮುಖ್ಯಮಂತ್ರಿಯಾಗಲಿದ್ದು, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ಖಜೂರಿ ಗ್ರಾಮದಲ್ಲಿ ಸೋಮವಾರ ನಡೆದ ಜೆಡಿಎಸ್‌ ಪಂಚರತ್ನ ರಥಯಾತ್ರೆಯ ರೋಡ್‌ ಶೋ ಕಾರ್ಯಕ್ರಮದಲ್ಲಿ ಅನೇಕ ರೈತರು ಸಾಲ ಮನ್ನಾ ಬಗ್ಗೆ ಅಳಲು ತೋಡಿಕೊಂಡರು. ಅದಕ್ಕೆ ಸ್ಪಂದಿಸಿ ಮಾತನಾಡಿದ ಅವರು, ನಾನು ಅಧಿಕಾರದಲ್ಲಿದ್ದಾಗ ಮನ್ನಾ ಮಾಡಿದ ರೈತರ ಸಾಲವನ್ನು ಈ ಸರಕಾರ ಪೂರ್ಣವಾಗಿ ಜಾರಿಗೆ ತರದೆ ಸಾಕಷ್ಟು ಸಮಸ್ಯೆಯಾಗಿದೆ. ಸಾಲದ 95ರ ಫಾರಂ ತಿರಸ್ಕೃತವಾದರೆ ಸಂಬಂ ಧಿತ ಅ ಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಕ್ರಮ ಕೈಗೊಳ್ಳಬೇಕಿತ್ತು. ಅಧಿ ಕಾರದಲ್ಲಿ 500 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೇನೆ. ಅದನ್ನು ರಾಜ್ಯ ಸರಕಾರ ಸಾಲ ಮನ್ನಾಕ್ಕೆ ಬಳಸದೆ ಬೇರೆ ಕಡೆ ವರ್ಗಾಯಿಸಿದೆ ಎಂದು ಆರೋಪಿಸಿದರು.

ಇನ್ನು ಮೂರು ತಿಂಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಸಾಲ ಮನ್ನಾ ಸಹಿತ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಪ್ರಧಾನಮಂತ್ರಿ ಬೆಳೆವಿಮೆ ಯೋಜನೆ ಮೋಸದ ಕಂಪೆನಿಯಾಗಿದೆ. ಸರಕಾರ ಅ ಧಿಕಾರಕ್ಕೆ ಬಂದರೆ ಮುಂದೆ ರೈತರಿಗೆ ಸರಕಾರದಿಂದಲೇ ಬೆಳೆ ವಿಮೆ ಜಾರಿಗೆ ತರುತ್ತೇನೆ ಎಂದು ಅವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next