ಹುಬ್ಬಳ್ಳಿ: ನಾವು ಚುನಾವಣಾ ಮುನ್ನ ನೀಡಿದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಕಡೆಗಳಲ್ಲಿ ಏಕಕಾಲಕ್ಕೆ ಇದಕ್ಕೆ ಚಾಲನೆ ಸಿಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಶಕ್ತಿ ಯೋಜನೆ ಬಗ್ಗೆ ಯಾರ್ಯಾರೋ ಏನೇನು ಹೇಳಿದ್ದಾರೋ ಗೊತ್ತಲ್ಲ. ಆದರೆ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಶಕ್ತಿ ಯೋಜನೆ ಚಾಲನೆ ಸಹ ಸಿಗಲಿದೆ. ಧಾರವಾಡದಲ್ಲಿ ಇಂದು ನಾನು ಸಹ ಚಾಲನೆ ನೀಡುವೆ. ಮುಂದಿನ ದಿನಗಳಲ್ಲಿ ಇನ್ನುಳಿದ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದರು.
ಕಾರ್ಮಿಕರ ಕಲ್ಯಾಣ ನಿಧಿ ಬಳಕೆಗೆ ಕ್ರಮ: ಕಾರ್ಮಿಕ ಇಲಾಖೆಯಲ್ಲಿ ಅನೇಕ ಯೋಜನೆ ಜಾರಿಗೆ ಚಿಂತನೆ ಇದ್ದು, ಮುಂದಿನ ಯೋಜನೆ ಜಾರಿ ಕುರಿತು ಮುಂದೆ ವಿಸ್ತಾರವಾಗಿ ತಿಳಿಸುವೆ ಎಂದರು.
ಇದನ್ನೂ ಓದಿ:ಪಟ್ಟು ಬಿಡದ ಪಾಕ್: ಹೈಬ್ರಿಡ್ ಮಾಡೆಲ್ ಗೆ ಒಪ್ಪಿದ ಎಸಿಸಿ; 2 ದೇಶದಲ್ಲಿ ನಡೆಯಲಿದೆ Asia cup
ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕರ ಕಲ್ಯಾಣ ನಿಧಿ ಹಣ ಬಳಕೆಗೆ ಕ್ರಮ ಕೈಗೊಳ್ಳಲು ಚಿಂತನೆ ಇದೆ. ಹಿಂದಿನ ಸರ್ಕಾರದಲ್ಲಿ ಇದರ ಬಳಕೆ ಕಡಿಮೆ ಆಗಿರಬಹುದು ನಿಜ. ಆದರೆ ನಾವು ಇದನ್ನು ಸರಿಯಾಗಿ ಬಳಕೆ ಮಾಡುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ. ಅಲ್ಲದೆ ನಮ್ಮ ಸರ್ಕಾರದಲ್ಲಿ ಯಾವುದೇ ರೀತಿಯ ದುರ್ಬಳಕೆಗೆ ಅವಕಾಶವಿಲ್ಲ ಎಂದರು.