Advertisement

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕೇರಳ ಮಾದರಿಯಲ್ಲಿ ವೇತನ ನೀಡಿ: ಸಂತೋಷ ಲಾಡ್ ಒತ್ತಾಯ

09:05 PM Dec 22, 2021 | Team Udayavani |

ಹರಪನಹಳ್ಳಿ: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕೇರಳ ರಾಜ್ಯದ ಮಾದರಿಯಲ್ಲಿ ವೇತನ ನೀಡಬೇಕೆಂದು ಮಾಜಿ ಸಚಿವ ಸಂತೋಷ ಲಾಡ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು

Advertisement

ಇಂದು ಸಂಜೆ ಪಟ್ಟಣದ ತರಳಬಾಳು ಕಲ್ಯಾಣ ಮಂಟಪದ ಆವರಣದಲ್ಲಿ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಹರಪನಹಳ್ಳಿ ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಪೌರಕಾಮಿ೯ಕರಿಗೆ ಏಪ೯ಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್ ಬಂದಂಥ ಸಂದರ್ಭದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಸಾವ೯ಜನಿಕರ ಜೀವ ಉಳಿಸಲು ಸಾಕಷ್ಟು ಶ್ರಮಿಸಿದ್ದೀರಿ ನಿಮ್ಮ ಸೇವೆಯನ್ನು ಭಾರತ ಎಂದು ಮರೆಯಲಿಕ್ಕೆ ಸಾದ್ಯವಿಲ್ಲ ನಿಮ್ಮನ್ನು ಗೌರವಿಸಿ ಸನ್ಮಾನಿಸಲು ನಮಗೆ ಅವಕಾಶ ಕೊಟ್ಟ ನಿಮ್ಮಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಿಂದ ಹಿಡಿದು ವೇತನ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ ಅಲ್ಲದೇ ನಾನು ಕಾಮಿ೯ಕ ಮಂತ್ರಿ ಇದ್ದಾಗ ಪೌರಕಾಮಿ೯ಕರಿಗೆ ವೇತನ ಹೆಚ್ಚಳ ಮಾಡಿದ್ದೇನೆ ಇವೆಲ್ಲಾ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದ್ದು ನಿವ್ಯಾರೂ ಕಾಂಗ್ರೆಸ್ ಪಕ್ಷವನ್ನು ಮರೆಯಬಾರದು ಎಂದು ಹೇಳಿದರು

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಬಹಿರಂಗವಾಗಿ ರಾಜಕೀಯದಲ್ಲಿ ಭಾಗವಹಿಸಬೇಕು ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನಮ್ಮ ಗಮನಕ್ಕೆ ತನ್ನಿ ಯಾರಿಗೂ ಹೆದರುವ ಪ್ರಶ್ನೆ ಬೇಡ ನಿಮ್ಮ ಸಮಸ್ಯೆಗೆ ಸ್ಪಂದಿಸುವ ರಾಜಕಾರಣಿಗಳನ್ನು ಗೆಲ್ಲಿಸಿ ಸ್ಪಂದಿಸದೇ ಇರುವವರನ್ನು ಸೋಲಿಸಿ ಎಂದು ಬಹಿರಂಗವಾಗಿ ಹೇಳಿದರು.

Advertisement

ಇದನ್ನೂ ಓದಿ : ರಾಜ್ಯದಲ್ಲಿ 321 ಪಾಸಿಟಿವ್‌ ಪ್ರಕರಣ ಪತ್ತೆ, 253 ಮಂದಿ ಆಸ್ಪತ್ರೆಯಿಂದ ಬಿಡುಗಡೆ, 4 ಸಾವು

ಎಐಸಿಸಿ ವಕ್ತಾರೆ ಕವಿತಾ ರೆಡ್ಡಿ ಮಾತನಾಡಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ಲಾಕ್ ಡೌನ್ ಸಮಯದಲ್ಲಿ ತಮ್ಮ ಕುಟುಂಬ ಮರೆತು
ಗಭಿ೯ಣಿ ಬಾಣಂತಿಯರ ಮನೆ ಮನೆಗೆ ತೆರಳಿ ಆರೋಗ್ಯ ಕಾಪಾಡುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೀರಿ ನಿಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು

ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸುವುದು ಬೇಡ ಎಂದು ಇಲ್ಲಿಯ ಶಾಸಕ ಕರುಣಾಕರ ರೆಡ್ಡಿಯವರು ಆದೇಶ ಮಾಡಿರುವುದು ಕೀಳು ಮಟ್ಟದ ರಾಜಕೀಯ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next