Advertisement

ಸ್ವಚ್ಛಗೊಂಡ ಸಂತೆಕಟ್ಟೆ ಉದ್ಯಾನವನ

11:34 AM Sep 06, 2022 | Team Udayavani |

ಉಡುಪಿ: ನಗರಸಭೆ ವ್ಯಾಪ್ತಿ ಸಂತೆಕಟ್ಟೆ, ಪುತ್ತೂರು ಗ್ರಾಮದ ಸರ್ವೇ ನಂಬರ್‌ 225/9ರಲ್ಲಿ ನಿರ್ಮಿಸಿದ ಉದ್ಯಾನವನ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಬಗ್ಗೆ ಉದಯವಾಣಿ ಸುದಿನ ಸೆ. 2ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ನಗರಸಭೆ ಸದಸ್ಯೆ ಮಂಜುಳಾ ನಾಯಕ್‌ ಅವರು, ಸ್ವಚ್ಛತ ಸಿಬಂದಿಗೆ ಸೂಚನೆ ನೀಡಿದ್ದು, ಅದರಂತೆ ವಾರಾಂತ್ಯದಲ್ಲಿ ಸ್ವಚ್ಛತ ಸಿಬಂದಿ ತಂಡವು ಯಂತ್ರದ ಮೂಲಕ ಉದ್ಯಾನವನದಲ್ಲಿ ಬೆಳೆದಿದ್ದ ಹುಲ್ಲು, ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ.

Advertisement

ಪಾರ್ಕ್‌ನಲ್ಲಿ ಅಪರಿಚಿತರು ಮದ್ಯಪಾನ, ಧೂಮಪಾನ ಮಾಡಿ ಎಸೆದಿರುವ ತ್ಯಾಜ್ಯಗಳು ಈ ಪಾರ್ಕ್‌ನ ಅಂದವನ್ನು ಕೆಡಿಸಿದ ಬಗ್ಗೆ, ಪಾರ್ಕ್‌ ನಲ್ಲಿ ಸುತ್ತಲು ಗಿಡಗಂಟಿಗಳು ಹುಲ್ಲುಗಳು ಬೆಳೆದಿರುವ ಹಿನ್ನೆಲೆಯಲ್ಲಿ ಸಂಜೆ ಮತ್ತು ಬೆಳಗ್ಗಿನ ವಿಹಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ವರದಿಯಲ್ಲಿ ಉಲ್ಲೇಖೀಸಲಾಗಿತ್ತು.

ವ್ಯವಸ್ಥಿತ ನಿರ್ವಹಣೆಗೆ ಕ್ರಮ: ನಿರ್ದಿಷ್ಟ ಸೂಚನೆಯಂತೆ ಪಾರ್ಕ್‌ ಸ್ವಚ್ಛ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯರು ವಿಹರಿಸಲು, ಮಕ್ಕಳು ಆಟವಾಡಲು ಪಾರ್ಕ್‌ ಅನ್ನು ವ್ಯವಸ್ಥಿತ ನಿರ್ವಹಣೆಗೆ ಕ್ರಮವಾಗಲಿದೆ. ಸಿಸಿಟಿವಿ ಅಳವಡಿಕೆ, ಸ್ಥಳೀಯರನ್ನು ಒಳಗೊಂಡ ಸಮಿತಿ ರಚನೆ ಬಗ್ಗೆಯೂ ಯೋಜನೆ ರೂಪಿಸಲಾಗಿದೆ. – ಮಂಜುಳಾ ನಾಯಕ್‌, ನಗರಸಭೆ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next