Advertisement

Udupi- ಸಂತೆಕಟ್ಟೆ ಓವರ್‌ಪಾಸ್‌ ಇಂದು ಸಂಚಾರಕ್ಕೆ ಮುಕ್ತ

12:32 PM Apr 17, 2024 | Team Udayavani |

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ವೆಹಿಕ್ಯೂಲರ್‌ ಓವರ್‌ಪಾಸ್‌ ಕಾಮಗಾರಿ
ಪ್ರಗತಿಯಲ್ಲಿದ್ದು, ಒಂದು ಬದಿಯ ರಸ್ತೆ ಡಾಮರು ಕಾಮಗಾರಿ ಪೂರ್ಣಗೊಂಡು ಎ. 17ರಂದು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ರಾ. ಹೆ. ಪ್ರಾಧಿಕಾರದ ಮೂಲಗಳು ತಿಳಿಸಿವೆ.

Advertisement

ಜನರ ಬಹುಕಾಲದ ಬೇಡಿಕೆಯಂತೆ 27.4 ಕೋ. ರೂ. ವೆಚ್ಚದಲ್ಲಿ 1 ಕಿ. ಮೀ. ಅಂತರದಲ್ಲಿ ಓವರ್‌ಪಾಸ್‌ ನಿರ್ಮಾಣ ವಾಗುತ್ತಿದೆ. 2023ರ ಜನವರಿಯಲ್ಲಿ ಆರಂಭಗೊಂಡಿದ್ದ ಕಾಮಗಾರಿಗೆ ತಾಂತ್ರಿಕ ಕಾರಣಕ್ಕೆ ವಿಳಂಬವಾಗಿತ್ತು. ಒಂದೆಡೆ ಮಳೆ, ಇನ್ನೊಂದೆಡೆ ಕಲ್ಲು ಬಂಡೆ ಮೊದಲಾದ ಕಾರಣದಿಂದ ಕಾಮಗಾರಿಗೆ ತೊಡಕುಂಟಾಗಿತ್ತು. ಮಳೆ ಅನಂತರ ವೇಗ ಪಡೆದ ಕಾಮಗಾರಿ ಇದೀಗ ಒಂದು ಬದಿಯಲ್ಲಿ 60 ಮೀ. ಅಗಲದ ರಸ್ತೆ ಪೂರ್ಣಗೊಳಿಸಲಾಗಿದೆ.

ಸದ್ಯಕ್ಕೆ ಪೂರ್ಣಗೊಂಡ ಹೊಸ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಓವರ್‌ಪಾಸ್‌ ರಸ್ತೆಯಲ್ಲಿ ಚರಂಡಿ ಕಾಮಗಾರಿಯೂ ಪೂರ್ಣಗೊಂಡಿದ್ದು, ಮಳೆ ನೀರು ಸರಾಗ ವಾಗಿ ಹರಿಯಲು ವ್ಯವಸ್ಥೆ ರೂಪಿಸಲಾಗಿದೆ. ಇನ್ನೊಂದು ಬದಿಯ ಕಾಮಗಾರಿ ಮತ್ತು ಸರ್ವಿಸ್‌ ರೂಟ್‌ ಡೈವರ್ಶನ್‌ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ಈ ಬಗ್ಗೆ ಮುಂದೆ ಸ್ಪಷ್ಟ ಮಾಹಿತಿ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next