Advertisement
ಶ್ರೀ ಸತ್ಯಸಾಯಿ ಸೇವಾ ಸಮಿತಿ ಹಾಗೂ ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್ ಸಹಯೋಗದಲ್ಲಿ ಸಾಂಸ್ಕೃತಿಕ ಸಂಜೆ- 2018 ಕಾರ್ಯಕ್ರಮ ನಡೆಯುತ್ತಿದೆ. ಪ್ರಥಮ ದಿನವಾದ ಶುಕ್ರವಾರ ನಡೆದ ಶಿಶುನಾಳ ಶರೀಫರ ಗೀತೆಗಳು ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ರಾಂತ ಉಪನ್ಯಾಸಕ ಪ್ರೊ| ವಿ.ಬಿ. ಅರ್ತಿಕಜೆ ಮಾತನಾಡಿ, ತತ್ತ್ವಪದಗಳು, ಸಾಹಿತ್ಯಗಳಲ್ಲಿ ಅನೇಕ ವಿಧಗಳಿವೆ. ಅದೆಲ್ಲವನ್ನೂ ಆಸ್ವಾದಿಸುವ ಮನಃಸ್ಥಿತಿ ಇರಬೇಕು. ಶಿಶುನಾಳ ಶರೀಫರ ತತ್ತ್ವಪದಗಳನ್ನು ಅರ್ಥೈಸಲು, ಅದರೊಳಗಿರುವ ತಿರುಳನ್ನು ಹುಡುಕಿ ಆಸ್ವಾ ದಿಸಲು ಅನುಭವಿ ವ್ಯಾಖ್ಯಾನಗಾರರ ಅಗತ್ಯವಿದೆ. ಕಾವ್ಯದ ಒಳತಿರುಳನ್ನು ವ್ಯಾಖ್ಯಾನಕಾರರು ಅರ್ಥೈಸುತ್ತಾರೆ. ಶ್ರವಣ, ಮನನಕ್ಕಿಂತ ವ್ಯಾಖ್ಯಾನ ಬಹಳ ಮುಖ್ಯ ಎಂದರು.
Advertisement
ಸಂತ ಶಿಶುನಾಳ ಶರೀಫರ ಗೀತೆಗಳ ಗಾಯನ, ವ್ಯಾಖ್ಯಾನ
03:37 PM Sep 17, 2018 | |
Advertisement
Udayavani is now on Telegram. Click here to join our channel and stay updated with the latest news.