Advertisement
ಸಂಸ್ಕೃತ ಭಾರತಿಯ ರಾಷ್ಟ್ರೀಯ ಅಧಿವೇಶನ ಪ್ರಯುಕ್ತ ಶನಿವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ “ಸಂಸ್ಕೃತ ಭಾರತಂ- ಸಮರ್ಥ ಭಾರತಂ’ ವಿಷಯದ ಕುರಿತು ಮಾತನಾಡಿದ ಅವರು, ಜನರಿಗೆ ಸಂಸ್ಕಾರ, ಸಂಸ್ಕೃತಿಧಿಯನ್ನು ಕೊಟ್ಟಾಗ ಮಾತ್ರ ಇದು ಸಾಧ್ಯ. ಸಂಸ್ಕೃತದ ಮೂಲಕ ಸಂಸ್ಕೃತಿಯನ್ನು ಕೊಡಬೇಕಾಗಿದೆ. ಜಾಗತಿಕ ತಾಪಮಾನದಿಂದ ಬಳಲುತ್ತಿರುವ ಜಗತ್ತಿನ ಜನರಿಗೆ ಭೂಮಿಯನ್ನು ತಾಯಿ ಸ್ವರೂಪದಲ್ಲಿ ಕಾಣುವ ಸಂಸ್ಕಾರವನ್ನು ಕಲಿಸಬೇಕಾಗಿದೆ ಎಂದರು.
ನವರಾಷ್ಟ್ರ, ಬಹುರಾಷ್ಟ್ರಗಳ ವಾದವನ್ನು ಹರಿದುಬಿಟ್ಟಿದ್ದಾರೆ. ಋಗ್ವೇದದಲ್ಲಿ ಹಿಮಾಲಯದಿಂದ ಸಮುದ್ರದವರೆಗೆ ಏಕರಾಷ್ಟ್ರವಾಗಿತ್ತು ಎಂಬ ಉಲ್ಲೇಖವಿದೆ. ಅಥರ್ವವೇದದ ಭೂಮಿಸೂಕ್ತದಲ್ಲಿ ಜ್ಞಾನ, ಕಲಾಕೌಶಲಗಳ ಮೂಲಕ ರಾಷ್ಟ್ರಭಕ್ತಿಯ ಪ್ರವಾಹ ಕಾಣುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆ ನಮ್ಮ ದೇಶದ ಹಿರಿಯರ ಬಗೆಗೆ ಕೀಳರಿಮೆ ಹುಟ್ಟಿಸುತ್ತಿದ್ದು ಇದನ್ನು ಸರಿಪಡಿಸಬೇಕಾಗಿದೆ. ನಮ್ಮಲ್ಲಿ ದೊಡ್ಡ ಜ್ಞಾನದ ಖಜಾನೆಯೇ ಇದೆ. ಇದನ್ನು ಹುಡುಕುವ ಕೆಲಸ ನಡೆಯಬೇಕಾಗಿದೆ ಎಂದರು. ಬಹುತ್ವ-ಏಕತ್ವ
ನಮ್ಮಲ್ಲಿ ಬಹುತ್ವದಲ್ಲಿ ಏಕತೆ ಇದೆ. ಬಹುತ್ವ ಇರುವುದು ಗುರುತಿಗಾಗಿ. ಇದು ಒಂದಕ್ಕೊಂದು ವಿರುದ್ಧವಲ್ಲ. ಇಡೀ ವ್ಯವಸ್ಥೆ ಒಂದೇ ನಿಯಮದಲ್ಲಿದೆ. ದೇಶದ ಮೇಲೆ ನಿರಂತರ ದಾಳಿ ನಡೆದ ಕಾರಣ ರಕ್ಷಣಾತ್ಮಕ ಪ್ರಜ್ಞೆ (ಡಿಫೆನ್ಸಿವ್ ಮೂಡ್) ಬೆಳೆದುಬಂದಿದೆ. ನಮ್ಮ ಪರಂಪರೆಯ ಬೇರು, ಇನ್ನೊಂದೆಡೆ ಆಕ್ರಮಣಕಾರರ ಪ್ರಭಾವ ಎರಡರ ನಡುವೆ ನಮ್ಮ ಜೀವನ ಸಾಗುತ್ತಿದೆ ಎಂದು ಸೋನಿ ಹೇಳಿದರು.
Related Articles
ಭ್ರಷ್ಟಾಚಾರ, ಅನಾಚಾರ, ಆತಂಕವಾದ, ವಿಘಟನೆಗಳಿದ್ದರೂ ದೇಶ ಉದ್ಧಾರ ಆಗುವುದು ಹೇಗೆ ಎಂದು ಡಾ| ಅಬ್ದುಲ್ ಕಲಾಂ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಸಾಮಾನ್ಯಜನರಿಗೆ ರಾಷ್ಟ್ರದ ಪ್ರಜ್ಞೆ ಮೂಡಿಸಿದರೆ, ಆತಂಕವಾದಿಗಳಿಗೆ ಸರಿಯಾದ ಧರ್ಮಪ್ರಜ್ಞೆ ಮೂಡಿಸಿದರೆ ಎಲ್ಲ ಸಮಸ್ಯೆಗಳಿಗೂ ಉತ್ತರ ಸಿಗುತ್ತದೆ ಎಂದಿದ್ದರು ಎಂಬುದನ್ನು ಸೋನಿ ಉದಾಹರಿಸಿದರು.
Advertisement
ಭಾರತದ ಧರ್ಮದ ಅನುಷ್ಠಾನವನ್ನು ಮಾಡಿದರೆ ಎಲ್ಲ ಸಮಸ್ಯೆಗಳೂ ನಿವಾಧಿರಣೆಧಿಯಾಗುತ್ತವೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಗೀತೆಧಿಯೊಂದೇ ಬಹುಸಮಸ್ಯೆಗಳಿಗೆ ಉತ್ತರ ನೀಡುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು. ಶ್ರೀಮಠದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲಾನಾಥ ಸ್ವಾಮೀಜಿ ಉಪಸ್ಥಿತರಿದ್ದರು. ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸ್ಕೃತ ಭಾರತಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಹಿಮಾಚಲಪ್ರದೇಶದ ಡಾ| ಭಕ್ತವತ್ಸಲಂ, ಸ್ವಾಗತ ಸಮಿತಿ ಕಾರ್ಯದರ್ಶಿ ಎಂ.ಬಿ. ಪುರಾಣಿಕ್ ಉಪಸ್ಥಿತರಿದ್ದರು. ಉತ್ತರ ಪ್ರದೇಶದ ಕ್ಷೇತ್ರೀಯ ಸಂಘಟನ ಕಾರ್ಯಧಿದರ್ಶಿ ಡಾ| ಸಂಜೀವಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಜಾವಡೇಕರ್ ಉಪನ್ಯಾಸಕೇಂದ್ರ ಮಾನವ ಸಂಪದ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಜ. 8ರ ಬೆಳಗ್ಗೆ 9ಕ್ಕೆ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡುವರು. ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀಶೈಲ ಪೀಠಾಧಿಪತಿ ಗಳು ಆಶೀರ್ವಚನ ನೀಡಲಿದ್ದು ಆರೆಸ್ಸೆಸ್ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಮಾರೋಪ ಭಾಷಣ ಮಾಡುವರು. ಸೇವಾ ಕೇಂದ್ರಿತ ರಾಜನೀತಿ, ಲೋಭರಹಿತ ಅರ್ಥನೀತಿ
ಸೇವಾ ಕೇಂದ್ರಿತ ರಾಜಕೀಯ ನೀತಿ ಮತ್ತು ಲೋಭರಹಿತ ಅರ್ಥ ನೀತಿ ಇಂದು ತುರ್ತಾಗಿ ಬೇಕಾಗಿದೆ. ಇದರಿಂದ ಮಾತ್ರ ದೇಶದ ಅಭಿವೃದ್ಧಿ, ಪರಿವರ್ತನೆ ಸಾಧ್ಯ ಎಂದು ಸುರೇಶ ಸೋನಿ ಹೇಳಿದರು. ವಿಮಾ ಕಂಪೆನಿಗಳ “ಯೋಗಕ್ಷೇಮಂ ವಹಾಮ್ಯಹಂ’, ಸಂಸತ್ತಿನಲ್ಲಿರುವ “ಸತ್ಯಮೇವ ಜಯತೇ’, “ಯೋಗ ಕರ್ಮಸು ಕೌಶಲಂ’ ಇತ್ಯಾದಿ ಘೋಷವಾಕ್ಯಗಳನ್ನು ಹೊತ್ತ ಅನೇಕ ಸಂಸ್ಥೆಗಳಿವೆ. ಇವುಗಳನ್ನು ಜಾರಿಗೊಳಿಸಿದರೆ ಸಾಕು. ಇಡೀ ಜಗತ್ತಿಗೆ ಬೇಕಾದಷ್ಟು ವಿಚಾರಗಳು ನಮ್ಮ ದೇಶವೊಂದರಲ್ಲಿಯೇ ಇವೆ ಎಂದು ಸೋನಿ ಹೇಳಿದರು.