Advertisement

ದೇಗುಲಗಳಲ್ಲಿ ಸಂಸ್ಕೃತ ಪಾಠ ಶಾಲೆ: ಪದ್ಮನಾಭ ಕೋಟ್ಯಾನ್‌

12:44 PM Nov 06, 2017 | Team Udayavani |

ಪಣಂಬೂರು: ದೇಗುಲಗಳಲ್ಲಿ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಗಳನ್ನು ತೆರೆಯಲು ಮುಜರಾಯಿ ಇಲಾಖೆ ಬದ್ಧವಾಗಿದ್ದು, ಈಗಾಗಲೇ ಸುಬ್ರಹ್ಮಣ್ಯ ಮತ್ತು ಕಟೀಲು ದೇಗುಲಗಳಲ್ಲಿ ಪ್ರಾರಂಭಿಸಲಾಗಿದೆ ಎಂದು ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಪದ್ಮನಾಭ ಕೋಟ್ಯಾನ್‌ ಅವರು ಹೇಳಿದರು.ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ನಿಸರ್ಗ ಮಿತ್ರರು ಆಯೋಜಿಸಿದ ಸಾಧಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಧಾರ್ಮಿಕ ಪರಿಷತ್‌ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯೂ ಒಂದಾಗಿದೆ. ಭಕ್ತರು ಸಹಕಾರ ನೀಡಿದಲ್ಲಿ ನಮ್ಮ ಧಾರ್ಮಿಕ ನಂಬಿಕೆ, ಪರಂಪರೆಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ಅವರು ತಿಳಿಸಿದರು.

ಸಮ್ಮಾನ
ಉಡುಪಿ ಜಿಲ್ಲೆಯಲ್ಲಿ ಆಹಾರ ನಿರೀಕ್ಷಕರಾಗಿ ಉತ್ತಮ ಸೇವಾ ಪ್ರಶಸ್ತಿ ಪಡೆದ ಪಾರ್ವತಿ, ಈ ಬಾರಿಯ ರಾಜ್ಯೋತ್ಸವ ಹೊಯ್ಸಳ ಚೆನ್ನಮ್ಮ ಪ್ರಶಸ್ತಿ ಪುರಸ್ಕತ ಅನನ್ಯಾ ಐತಾಳ್‌ ಅವರನ್ನು ಸಮ್ಮಾನಿಸಲಾಯಿತು.

ದೇಗುಲದ ಕಾರ್ಯನಿರ್ವಹಣಾಧಿಕಾರಿ ಸದಾನಂದ ಜಿ., ಆಡಳಿತಾಧಿಕಾರಿ ಗಣೇಶ್‌ಕೆ., ವಿದುಷಿ ಸುಮಂಗಲಾ ರತ್ನಾಕರ್‌, ನಿಸರ್ಗ ಮಿತ್ರರು ಸಂಘದ ಅಧ್ಯಕ್ಷ ಹರಿಕೃಷ್ಣ ಐತಾಳ್‌, ಅನಂತ ಐತಾಳ್‌, ಯಾಜ್ಞೆಶ್ ಐತಾಳ್‌, ಶಿವರಾಮ್‌ ಪಣಂಬೂರು, ವೀಣಾ ಸತ್ಯಮೂರ್ತಿ ಐತಾಳ್‌ ಮತ್ತಿತರರು ಉಪಸ್ಥಿತರಿದ್ದರು. ಸಂತೋಷ್‌ ಐತಾಳ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next