ಬೆಳ್ತಂಗಡಿ : ಜಗತ್ತಿನ ಸಹಸ್ರಾರು ಭಾಷೆಗಳಿಗೆ ಸಂಸ್ಕೃತ ಭಾಷೆಯನ್ನು ಹೋಲಿಸಲು ಸಾಧ್ಯವೇ ಇಲ್ಲ ಈ ಭಾಷೆ ಎಲ್ಲ ಭಾಷೆಗಳಿಗಿಂತ ಹೆಚ್ಚಿನ ಮಟ್ಟದಲ್ಲಿದೆ ಎಂದು ಮಾಕ್ಸ್‌ಮುಲ್ಲರ್ ಕೃತಿಗಳಿಂದ ಅರಿಯಬಹುದಾಗಿದೆ. ನಮ್ಮ ದೇಶದ ಋಷಿಮುನಿಗಳಿಂದ ಆದ ಈ ಜ್ಞಾನರಾಶಿ ಯಾವುದೇ ಚ್ಯುತಿಯಿಲ್ಲದೆ ಇಲ್ಲಿಯೇ ಭದ್ರಬುನಾದಿಯಾಗುವಂತೆ ಮಾಡಿದೆ. ಈ ಮೂಲಕ ನಮ್ಮ ಸಂಸ್ಕೃತಿ ಅಚ್ಚಳಿಯದೇ ಬೆಳಗಲು ಸಹಾಯಕವಾಗಿದೆ. ಇನ್ನೂ ಕೂಡ ಭಾರತ ದೇಶದ ಜ್ಞಾನದ ಅಧ್ಯಯನ ಆಗಬೇಕಾಗಿದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಹೇಳಿದರು.
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ.ಪೂ. ಕಾಲೇಜಿನ ಸಂಸ್ಕೃತ ವಿಭಾಗದ ಸಂಸ್ಕೃತ ಸಂಘ ಏರ್ಪಡಿಸಿದ ಸಂಸ್ಕೃತೋತ್ಸವ ಕಾರ್ಯಕ್ರಮದ ಪ್ರಧಾನ ಅಭ್ಯಾಗತರಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಎನ್. ದಿನೇಶ್ ಚೌಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕೃತ ಭಾಷೆ ಕೇವಲ ಧಾರ್ಮಿಕ ವಿಷಯಗಳಿಗೆ ಮೀಸಲಾಗಿಲ್ಲ. ಇದರಲ್ಲಿ ವಿಜ್ಞಾನದ ಅದೆಷ್ಟೋ ವಿಷಯಗಳಿವೆ. ವೇದಗಳಲ್ಲಿ ತತ್ವಶಾಸ್ತ್ರವನ್ನು ನಾವು ನೋಡಬಹುದಾಗಿದೆ. ಸುಶ್ರುತ, ಚರಕರಂತಹ ವೈದ್ಯರು ವಿಶೇಷವಾದ ಸಾಧನೆಗಳನ್ನು ಮಾಡಿದ್ದಾರೆ ಇವೆಲ್ಲವೂ ಸಂಸ್ಕೃತಕ್ಕೆ ಹೆಮ್ಮೆಯ ವಿಷಯ ಎಂದರು.
ಶೆ„ಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಣವ ಭಟ್, ಭಾರ್ಗವಿ ಶೇಟ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ಇಶಾ ಶರ್ಮಾ ಅವರಿಗೆ ಸಂಸ್ಕೃತ ಸಂಘದಿಂದ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಣವ ಭಟ್ ಹಾಗೂ ಶ್ರೀಶ ಹೆಬ್ಟಾರ್ ಅವರಿಗೆ ದಿ| ಕೋಟೇಶ್ವರ ಕೃಷ್ಣ ಐತಾಳ್ ಸ್ಮಾರಕ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸುಮಾರು ಎಂಭತ್ತು ಭಿತ್ತಿಪತ್ರಿಕೆಗಳನ್ನು ಹಾಗೂ ಸಂಸ್ಕೃತ ಸಂಘದ ವಾರ್ಷಿಕ ಚಟುವಟಿಕೆಗಳ ವರದಿ ಪುಸ್ತಕವನ್ನು ಡಾ| ಬಿ. ಯಶೋವರ್ಮ ಹಾಗೂ ಪ್ರೊ| ಎನ್. ದಿನೇಶ್ ಚೌಟ ಅನಾವರಣಗೊಳಿಸಿದರು.
ಉಜಿರೆಯ ಶ್ರೀ ಧ.ಮಂ. ಪದವಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ| ಶ್ರೀಧರ ಭಟ್ ಶುಭಾಶಂಸನೆಗೈದರು. ಪುರಸ್ಕೃತರ ಪರವಾಗಿ ಪ್ರಣವ ಭಟ್ ಅನಿಸಿಕೆ ವ್ಯಕ್ತಪಡಿಸಿದರು.
ಅಮƒತ್ ಹಾಗೂ ತಂಡ ಮತ್ತು ಭಾರ್ಗವಿ ಅವರ ತಂಡಗಳಿಂದ ಸಂಸ್ಕೃತ ಸಮೂಹ ಗಾಯನ ನಡೆಯಿತು.
ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ| ಪ್ರಸನ್ನ ಕುಮಾರ್ ಐತಾಳ್ ಸ್ವಾಗತಿಸಿ, ಪ್ರಸ್ತಾವಿಸಿದರು. ಪೂರ್ಣಿಮಾ ಹೆಗಡೆ,
ರಚನಾ, ಕೀರ್ತನ್ ಶಬರಾಯ ಪರಿಚಯಿಸಿದರು. ಸಂಸ್ಕೃತ ಸಂಘದ ಅಧ್ಯಕ್ಷ ಪ್ರಜೀತ್ ರೈ ವಂದಿಸಿದರು. ಚಿಂತನಾ ಯಾಜಿ ಕಾರ್ಯಕ್ರಮ ನಿರೂಪಿಸಿದರು.