Advertisement

ಉತ್ತರಾಖಂಡ ರಾಜ್ಯಾದ್ಯಂತ ಸಂಸ್ಕೃತ ಗ್ರಾಮ ನಿರ್ಮಾಣ!

12:57 AM Sep 10, 2020 | mahesh |

ಡೆಹ್ರಾಡೂನ್‌: ಎರಡು ಜಿಲ್ಲೆಗಳಲ್ಲಿ ಸಂಸ್ಕೃತವನ್ನು ಜನಬಳಕೆಯ ಭಾಷೆಯಾಗಿ ಪರಿವರ್ತಿಸಲು ಮಾಡಿದ ಪ್ರಾಯೋಗಿಕ ಯೋಜನೆ ಉತ್ತರಾಖಂಡದಲ್ಲಿ ಯಶಸ್ವಿಯಾಗಿದೆ. ಇದರಿಂದ ಸ್ಫೂರ್ತಗೊಂಡಿರುವ ಅಲ್ಲಿನ ಸರ್ಕಾರ, ಇಡೀ ರಾಜ್ಯದಲ್ಲಿ ಯೋಜನೆಯನ್ನು ಜಾರಿ ಮಾಡಿ, ಸಂಸ್ಕೃತ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಗುರಿ ಹಾಕಿಕೊಂಡಿದೆ. ಅಂದರೆ ಇಲ್ಲಿ ಸಂಸ್ಕೃತವೇ ಆಡುಭಾಷೆ!

Advertisement

ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರು ಉತ್ತರಾಖಂಡದ ಸಂಸ್ಕೃತ ಅಕಾಡೆಮಿಯೊಂದಿಗೆ ಸಭೆ ನಡೆಸಿ ಈ ನಿರ್ಧಾರ ಪ್ರಕಟಿಸಿದರು. ಆರಂಭದಲ್ಲಿ ಪ್ರತೀ ಜಿಲ್ಲೆಯಲ್ಲಿ ಒಂದು ಗ್ರಾಮವನ್ನು ಹೀಗೆ ಅಭಿವೃದ್ಧಿಪಡಿ ಸುವುದು, ಅನಂತರ ಬ್ಲಾಕ್‌ ಹಂತಕ್ಕೆ ಅದನ್ನು ವಿಸ್ತರಿಸಲಾಗುತ್ತದೆ.

ಪ್ರತೀ ಜಿಲ್ಲೆಯಲ್ಲಿ ಎಲ್ಲಿ ಸಂಸ್ಕೃತ ಶಾಲೆ ಇದೆಯೋ, ಅಂತಹ ಹಳ್ಳಿಯನ್ನು ಯೋಜನೆಗೆ ಆಯ್ದುಕೊಳ್ಳಲಾಗುತ್ತದೆ. ಸಂಸ್ಕೃತ ಎಲ್ಲ ಭಾಷೆಗಳ ತಾಯಿಯಾಗಿದೆ. ಪುರಾತನ ಸಂಸ್ಕೃತಿ ಉಳಿಸಲು ಈ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ರಾವತ್‌ ಹೇಳಿದ್ದಾರೆ. ಇದಕ್ಕೂ ಮುನ್ನ ಪ್ರಾಯೋಗಿಕವಾಗಿ ಚಮೋಲಿ ಜಿಲ್ಲೆಯ ಕಿಮೊಥ ಮತ್ತು ಭಾಗೇಶ್ವರಿ ಜಿಲ್ಲೆಯ ಭಂಟೊಲ ಹಳ್ಳಿಗಳಲ್ಲಿ ಸಂಸ್ಕೃತವನ್ನು ಕಲಿಸಲಾಗಿತ್ತು. ಅಲ್ಲಿನ ಗ್ರಾಮಸ್ಥರು, ಜನಪದಗೀತೆಗಳನ್ನು ಸಂಸ್ಕೃತದಲ್ಲೇ ಹಾಡುವಷ್ಟು ಭಾಷೆಯಲ್ಲಿ ಹಿಡಿತ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next