Advertisement
ಯಕ್ಷಗಾನ ಕಲಾವಿದ ಮೂಡುಬಿದಿರೆ ಮಾಧವ ಶೆಟ್ಟಿ ಅವರ ಸಂಸ್ಮರಣೆ,ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಧವ ಶೆಟ್ಟಿ ಅವರಂತಹ ಹಿರಿಯ ಕಲಾವಿದರ ಕಲಾ ಸಾಧನೆ ಇಂದಿನ ಕಲಾವಿದರಿಗೆ ಮಾದರಿ ಎಂದರು.
ಇರುವೈಲು ಮೇಳದ ಮಾಜಿ ಸಂಚಾಲಕ, ನಿವೃತ್ತ ಬ್ಯಾಂಕ್ ಅಧಿಕಾರಿ ಐ. ಕುಮಾರ ಶೆಟ್ಟಿ ಅವರು ತಮ್ಮ ಅಭಿನಂದನ ಭಾಷಣದಲ್ಲಿ “ರಂಗಸ್ಥಳದ ಗುರಿಕಾರ, ಅಭಿನವ ಕೋಟಿ ಬಿರುದಾಂಕಿತ ದಾಸಪ್ಪ ರೈ ಅವರು ವಹಿಸಿದ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಅಪರೂಪದ ಕಲಾವಿದರಲ್ಲಿ ಓರ್ವರು; ಯಕ್ಷಗಾನ ಕಲಾವಿದ, ಮೇಳಗಳ ಯಜಮಾನರಾಗಿ ಅನುಭವಿ’ ಎಂದು ಕೊಂಡಾಡಿದರು.
Related Articles
ಸಮ್ಮಾನಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ದಾಸಪ್ಪ ರೈ ಅವರು, ಯಕ್ಷರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ತಮಗೆ ಯಕ್ಷಗಾನ ಬಯಲಾಟ ಅಕಾಡೆಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳೊಂದಿಗೆ ಪ್ರತಿಷ್ಠಿತ ಬೋಳಾರ ನಾರಾಯಣ ಶೆಟ್ಟಿ , ಅಳಿಕೆ ರಾಮಯ್ಯ ರೈ, ಪುಳಿಂಚ ರಾಮಯ್ಯ ರೈ, ಕರ್ನೂರು ಕೊರಗಪ್ಪ ರೈ ಇವರ ಹೆಸರಿನ ಪ್ರಶಸ್ತಿಗಳು ಲಭಿಸಿದ್ದು ಈಗ ತಮ್ಮ ಒಡನಾಡಿ ಹಿರಿಯ ಕಲಾವಿದ ಮಾಧವ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಒಲಿದು ಬಂದಿರುವುದು ತಮ್ಮ ಕಲಾಜೀವನದ ಸಂತೃಪ್ತಿಯ ಸಂಗತಿ ಎಂದು ಉದ್ಗರಿಸಿದರು.
Advertisement
ಮುಖ್ಯ ಅತಿಥಿಗಳಾಗಿ ಉದ್ಯಮಿ ದಿವಾಕರ ಶೆಟ್ಟಿ ಭಾಗವಹಿಸಿದ್ದರು.ಮಾಧವ ಶೆಟ್ಟಿ ಅವರ ಪತ್ನಿ ಗುಲಾಬಿ ಶೆಟ್ಟಿ, ಮಕ್ಕಳಾದ ಜಯರಾಮ ಶೆಟ್ಟಿ,ಶಾರದಾ ಶೆಟ್ಟಿ, ವೇದಾವತಿ ಶೆಟ್ಟಿ, ಅಳಿಯ ನೀಲೇಶ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು. ಮಾಧವ ಶೆಟ್ಟಿ ಅವರ ಮೊಮ್ಮಗ ವೇಣುಗೋಪಾಲ ಶೆಟ್ಟಿ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿ, ಸಮ್ಮಾನ ಪತ್ರ ವಾಚಿಸಿ ದರು. ಪ್ರೊ| ಸದಾಶಿವ ಶೆಟ್ಟಿಗಾರ್ ಕಾರ್ಯ ಕ್ರಮ ನಿರೂಪಿಸಿ ದರು. ವಿನೋದ್‌ಕುಮಾರ್ ಶೆಟ್ಟಿ ವಂದಿಸಿದರು.ಬಳಿಕ, ಬೆಳ್ಮಣ್ಣು ಬಲ್ಲಿರೇನಯ್ಯ ಮಿತ್ರ ಮೇಳದಿಂದ
“ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನವಿತ್ತು. ಪ್ರಶಸ್ತಿ ಪ್ರದಾನ
ಮೂಡುಬಿದಿರೆ ಮಾಧವ ಶೆಟ್ಟಿ ಸಂಸ್ಮರಣೆ ವೇದಿಕೆ, ಶಿಮಂತೂರು ಸಂಘಟ ನೆಯು ಯಕ್ಷ ಸಂಗಮದ ಆಶ್ರಯದಲ್ಲಿ, ಕಲಾವಿದ, “ಬಲ್ಲಿರೇನಯ್ಯ’ ಯಕ್ಷ ಮಾಸಿಕ ಸಂಪಾದಕ ತಾರಾನಾಥ ವರ್ಕಾಡಿ ಅವರ ವಿಶೇಷ ಸಹಕಾರದೊಂದಿಗೆ ಉದ್ಯಮಿ ಕೆ. ಶ್ರೀಪತಿ ಭಟ್ ಅವರ ಅಧ್ಯ ಕ್ಷತೆಯಲ್ಲಿ ಸಮಾಜ ಮಂದಿರದಲ್ಲಿ ಮಂಗಳವಾರ ಸಂಜೆ ಏರ್ಪಡಿಸಲಾದ ಈ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೆ. ಎಚ್. ದಾಸಪ್ಪ ರೈ ಅವರಿಗೆ “ಮಾಧವ ಶೆಟ್ಟಿ ಪ್ರಶಸ್ತಿ’ ನೀಡಿ ಸಮ್ಮಾನಿಸಲಾಯಿತು.