Advertisement

ವಿಜ್ಞಾನಕ್ಕೆ ಸಂಸ್ಕೃತದ ಕೊಡುಗೆ ಅಪಾರ

05:53 AM Dec 29, 2018 | |

ಮೈಸೂರು: ವಿಶ್ವದಾದ್ಯಂತ ಜನರ ಬಳಕೆಯಲ್ಲಿರುವ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಸಂಸ್ಕೃತ ಭಾಷೆಯು ಕ್ರಿಸ್ತಪೂರ್ವದಿಂದಲೂ ತನ್ನಸ್ಥಾನ ಮಾನ ಉಳಿಸಿಕೊಂಡು ಬಂದಿದೆ ಎಂದು ಮಹಾರಾಣಿ ವಿಜ್ಞಾನ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕಿ ಡಾ.ಡಿ. ಶೀಲಾಕುಮಾರಿ ಹೇಳಿದರು.

Advertisement

ಮೈಸೂರಿನ ಬಿ.ಎನ್‌.ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಆಯೋಜಿಸಿದ್ದ ಸಂಸ್ಕೃತೋತ್ಸವದಲ್ಲಿ ಅವರು ಸಂಸ್ಕೃತದಲ್ಲಿ ವಿಜ್ಞಾನ ವಿಷಯ ಕುರಿತು ಮಾತನಾಡಿದರು.

ವಿಜ್ಞಾನ ಎಂದರೆ ವಿಶೇಷ -ವಿಜ್ಞಾನ. ವಿಜ್ಞಾನವು ವೇದಗಳ ಕಾಲದಿಂದಲೂ ಬಳಕೆಯಲ್ಲಿದೆ. ಪಾಣಿನಿಯ ವ್ಯಾಕರಣ ಸೂತ್ರಗಳು ಹೇಗೆ ಉಲ್ಲೇಖವಾಗಿದೆಯೋ ಹಾಗೆ ಯಥಾವತ್ತಾಗಿ ಇಂದಿಗೂ ಬಳಕೆಯಲ್ಲಿವೆ. ತರ್ಕಶಾಸ್ತ್ರದ ಪಿತಾಮಹ ಕಣಾದ ಮಹರ್ಷಿ ವ್ಯಾಕರಣ ಹಾಗೂ ತರ್ಕಶಾಸ್ತ್ರವು ಎಲ್ಲಾ ಶಾಸ್ತ್ರಗಳಿಗೂ ಉಪಕಾರಕಗಳಾಗಿವೆ ಎಂದು ಹೇಳಿದ್ದಾನೆ.

ಋಗ್ವೇದದಲ್ಲಿ ನಮ್ಮ ಪ್ರಾಚೀನರು ಸೌರಮಂಡಲದಲ್ಲಿರುವ ಗ್ರಹಗಳ ಉಲ್ಲೇಖ, ಭೂಮಿಯ ಗುರುತ್ವಾಕರ್ಷಣ ಬಲ ಇತ್ಯಾದಿಗಳ ಬಗ್ಗೆ ನಿಖರವಾಗಿ ತಿಳಿಸಿದ್ದಾರೆ. ನಮ್ಮ ಪ್ರಾಚೀನರು ಸಸ್ಯ ಹಾಗೂ ಪ್ರಾಣಿಗಳನ್ನು ಅವುಗಳ ಗುಣವನ್ನಾವಲಂಬಿಸಿ ವರ್ಗೀಕರಣ ಮಾಡಿ ಅದಕ್ಕಾಗಿಯೇ ಅಶ್ವಶಾಸ್ತ್ರ, ಗಜಶಾಸ್ತ್ರ, ವೃûಾಯುರ್ವೇದಃ ಎಂಬ ಗ್ರಂಥವನ್ನು ರಚಿಸಿದ್ದಾರೆ.

ಇವುಗಳೆಲ್ಲವು ಸಂಸ್ಕೃತ ಭಾಷೆಯಲ್ಲಿದ್ದು, ವಿಜ್ಞಾನಕ್ಕೆ ಕೊಡುಗೆಯಾಗಿವೆ ಎಂದು ತಿಳಿಸಿದರು. ಪಿಯು ಕಾಲೇಜಿನ ಪ್ರಾಂಶುಪಾಲ ಎಸ್‌.ಸೋಮಶೇಖರ್‌ ಮಾತನಾಡಿ, ಸಂಸ್ಕೃತ ಎಂದರೆ ವಿಜ್ಞಾನ. ಸಂಸ್ಕೃತ ಭಾಷೆಯಲ್ಲಿ ಎಲ್ಲ ವಿಷಯಗಳು ಅಡಕವಾಗಿವೆ ಎಂದು ಹೇಳಿದರು.

Advertisement

ಅಧ್ಯಕ್ಷತೆವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ ಮಾತನಾಡಿ, ಸಂಸ್ಕೃತ ಭಾಷೆಯು ವ್ಯವಹಾರಿಕ ಭಾಷೆಯಾಗಿ ಬಳಕೆಯಾಗಬೇಕು. ಅದರ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಸಂಸ್ಕೃತ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ವಿದ್ಯಾರ್ಥಿಗಳು ಸಂಸ್ಕೃತ ಅಧ್ಯಯನಕ್ಕೆ ಒತ್ತು ಕೊಟ್ಟು, ನಿತ್ಯೋಪಯೋಗಿ ಭಾಷೆಯನ್ನಾಗಿ ಬಳಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next