Advertisement

ಸಂಕ್ರಾಂತಿ ಹಬ್ಬಕ್ಕೆ ಕೋವಿಡ್ ಕರಿನೆರಳು :ವೈಕುಂಠ ಏಕಾದಶಿಗೂ ನಿರ್ಬಂಧಿಸಿ ಡೀಸಿ ಆದೇಶ

07:40 PM Jan 13, 2022 | Team Udayavani |

ಮಂಡ್ಯ: ವರ್ಷದ ಮೊದಲ ಹಬ್ಬವಾಗಿರುವ ಸಂಕ್ರಾಂತಿ ಹಬ್ಬಕ್ಕೆ ಕೊರೊನಾ ಕರಿನೆರಳು ಬಿದ್ದಿದ್ದು, ಸಂಕ್ರಾಂತಿ ಸಂಭ್ರಮದಲ್ಲಿ ದನಗಳ ಕಿಚಾಯಿಸಲು ಸಿದ್ಧತೆ ಮಾಡಿ ಕೊಂಡಿದ್ದ ರೈತರು, ಯುವಕರಿಗೆ ನಿರಾಸೆ ತಂದಿದೆ. ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ತಂದಿದೆ. ಇದರ ಜತೆಗೆ ರೂಪಾಂತರಿ ತಳಿ ಓಮಿಕ್ರಾನ್‌ ಭೀತಿಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ಭೀತಿಯಿಂದ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಕೋವಿಡ್‌ ಪರೀಕ್ಷೆಗೆ ಮುಗಿ ಬೀಳುತ್ತಿದ್ದಾರೆ. ಕೋವಿಡ್‌ ಪರೀಕ್ಷಾ ಕೇಂದ್ರಗಳಲ್ಲಿ
ದಿನನಿತ್ಯ ಸರತಿ ಸಾಲುಗಳ ದೃಶ್ಯ ಕಂಡು ಬರುತ್ತಿದೆ.

Advertisement

ಸಂಕ್ರಾಂತಿಗೆ ಸಿದ್ಧತೆ: ಶನಿವಾರ ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ ಅಂದೇ ವಾರಾಂತ್ಯ ಕರ್ಫ್ಯೂ ಕೂಡ ಜಾರಿಯಲ್ಲಿದೆ. ಇದು ಹಬ್ಬದ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಹಬ್ಬಕ್ಕೆ ತಯಾರಿ ನಡೆದಿದೆ. ಮಂಡ್ಯ ನಗರ ಸೇರಿದಂತೆ ಏಳು ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಭಾಗದಲ್ಲೂ ದನಗಳ ಕಿಚಾಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿರಾಸೆ: ಮಂಡ್ಯ ನಗರದ ಹೊಸಹಳ್ಳಿ, ಕಲ್ಲಹಳ್ಳಿ, ಹೌಸಿಂಗ್‌ ಬೋರ್ಡ್‌, ಪೇಟೆಬೀದಿ ಸೇರಿದಂತೆ ನಗರದ ಪ್ರಮುಖ ಬಡಾವಣೆಗಳಲ್ಲಿ ಯುವಕರು ಈಗಾಗಲೇ ಹೋರಿ, ದನಗಳನ್ನು ಕರೆತಂದು ಸಂಕ್ರಾಂತಿ ಹಬ್ಬಕ್ಕೆ ಕಿಚ್ಚಾಯಿಸಲು ಸಿದ್ಧತೆ ನಡೆಸಿದ್ದಾರೆ. ಪ್ರತೀ ವರ್ಷ ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ದೊಡ್ಡಮಟ್ಟದಲ್ಲಿ ದನ ಕಿಚಾಯಿಸುವ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ನಗರದ ಎಲ್ಲ ಭಾಗಗಳಿಂದಲೂ ಜಾನುವಾರುಗಳು ಬಂದು ಸೇರುತ್ತಿದ್ದವು. ಆದರೆ ಈ ಬಾರಿ ಜಿಲ್ಲಾಧಿಕಾರಿ ಆದೇಶದಿಂದ ನಿರಾಸೆ ತಂದಿದೆ ಎಂದು ಕೆಲ ಯುವಕರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಆದೇಶ: ಮಕರ ಸಂಕ್ರಾಂತಿ ಹಾಗೂ ವೈಕುಂಠ ಏಕಾದಶಿ ದಿನಗಳಂದು ಗುಂಪು ಸೇರಿ ಯಾವುದೇ ಧಾರ್ಮಿಕ ಆಚರಣೆ, ಸಂಭ್ರಮಾಚರಣೆ ಮಾಡದಂತೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಆದೇಶ ನೀಡಿದ್ದಾರೆ. ಈಗಾಗಲೇ ಜ.19ರವರೆಗೆ ವಾರಾಂತ್ಯ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಗುಂಪು ಸೇರಿ ನಡೆಸುವ ಮದುವೆ, ನಿಶ್ಚಿತಾರ್ಥ,
ಬೀಗರ ಔತಣಕೂಟ, ಅಂತ್ಯಸಂಸ್ಕಾರ, ತಿಥಿ, ಶ್ರಾದ್ಧ, ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳಿಗೆ ಜನರ ಸೀಮಿತಗೊಳಿಸಲಾಗಿದೆ.

ವಿಶೇಷ ದಿನಗಳು, ಧಾರ್ಮಿಕ ಆಚರಣೆಗಳು, ರಾಜಕೀಯ ಸಭೆ, ಸಮಾರಂಭ, ರ್ಯಾಲಿ, ಜಾತ್ರೆಗಳು, ಉತ್ಸವಗಳು, ದೇವಾಲಯಕ್ಕೆ ಭಕ್ತಾ ದಿಗಳ ಪ್ರವೇಶ, ಧರಣಿ, ಮುಷ್ಕರಗಳನ್ನು ನಿರ್ಬಂಧಿ ಸಲಾಗಿದೆ. ಅದರಂತೆ ಜ.13ರ ವೈಕುಂಠ ಏಕಾದಶಿ ಹಾಗೂ ಜ.15ರ ಮಕರ ಸಂಕ್ರಾಂತಿ ಹಬ್ಬವನ್ನು ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿ ರುವುದರಿಂದ ದನ ಕಿಚಾಯಿಸುವುದು, ಮನೆ ಮನೆಗೆ
ತೆರಳಿ ಗುಂಪು ಗುಂಪಾಗಿ ಹಬ್ಬ ಆಚರಿಸುವುದನ್ನು ನಿರ್ಬಂಧಿ ಸುವುದು ಸೂಕ್ತ ಎಂದು ನಿರ್ಧರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next