Advertisement
ರಾಜ್ಯದ 17 ಥಿಯೇಟರ್‌ನಲ್ಲಿ ಮೊದಲ ದಿನ 23 ಶೋ ಕಂಡಿದೆ. ಕರಾವಳಿ ಭಾಗದ ಪೈಕಿ ಮಂಗಳೂರು, ಉಡುಪಿ, ಸುರತ್ಕಲ್, ಮಣಿಪಾಲ, ಪಡುಬಿದ್ರಿಯಲ್ಲಿ ಸಿನೆಮಾ ಪ್ರದರ್ಶನ ಕಂಡಿದ್ದು, ಮೊದಲ ದಿನವೇ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.
Related Articles
ತನ್ನ ಜೀವನವು ಮದುವೆ ಆಗಿ ಮಕ್ಕಳನ್ನು ಹೊಂದಿದಾಗ ಮಾತ್ರ ಪೂರ್ಣವಾಗುತ್ತದೆ ಎಂದು ಒಬ್ಬ ಯುವಕ ನಂಬಿರುತ್ತಾನೆ. ಆದರೆ ಮದುವೆಯ ಕೆಲವು ವರ್ಷಗಳ ಬಳಿಕ ಮಕ್ಕಳನ್ನು ಹೊಂದುವ ಯಾವುದೇ ವಿಧಾನ ಫಲ ನೀಡದಾಗ ತಲ್ಲಣಗೊಂಡ ವ್ಯಕ್ತಿ ಅಸಾಂಪ್ರದಾಯಿಕ ವಿಧಾನ ಪರಿಶೀಲಿಸಲು ಹೊರಡುತ್ತಾನೆ. ತನ್ನ ಸುತ್ತಲಿನ ಪ್ರತಿಯೊಬ್ಬರ ಜೀವನವನ್ನೂ ಯಾವ ರೀತಿ ಅಪಾಯಕ್ಕೆ ಸಿಲುಕಿಸುತ್ತಾನೆ ಎಂಬುದನ್ನು ಆಧಾರವಾಗಿಸಿ ಸಿನೆಮಾ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕಿ ಜ್ಯೋತ್ಸ್ನಾ ಕೆ. ರಾಜ್.
Advertisement
“ಜ್ಯೋತ್ಸ್ನಾ ಕೆ.ರಾಜ್ ಅವರು ಸಂಕಲನ ಕಾರ ಹಾಗೂ ಧ್ವನಿ ವಿನ್ಯಾಸಕಿ ಯಾಗಿದ್ದು, ಕೇರಳದ ಕುಂಬಳೆಯವರು. 2018ರಲ್ಲಿ ನಾಟಕ ತಂಡವನ್ನು ಕಟ್ಟುವ ಪ್ರಯತ್ನ ನಡೆಸಿದ್ದರು. ಸಿನೆಮಾ ಕುರಿತಾದ ವಿಶೇಷ ಅನುಭವ ಪಡೆದಿದ್ದಾರೆ.
ರಾಜ್ ಕಾರ್ತಿಕ್ ಅವರು “ಸಾಂಕೇತ್’ನ ಸಿನೆಮಾಟೊಗ್ರಫಿ ನಡೆಸಿದ್ದಾರೆ. ಪ್ರಕಾಶ್ ವಿ.ರಾವ್ ಸಾಹಿತ್ಯ ಬರೆದಿದ್ದು, ವಿವಿಧ ಯುವ ತಂಡವೇ ಸಿನೆಮಾ ಮಾಡಿದ್ದೇವೆ. ಪ್ರೇಕ್ಷಕರ ಸ್ಪಂದನೆ ಖುಷಿ ನೀಡಿದೆ’ ಎನ್ನುತ್ತಾರೆ ನಟಿ ಚೈತ್ರಾ ಶೆಟ್ಟಿ