ಸಂಕೇಶ್ವರ: ಇಂದಿನ ದಿನಗಳಲ್ಲಿ ಮಹಿಳೆಯರು ಯಾವ ಕೆಲಸ ಕಾರ್ಯಗಳಲ್ಲಿ ಕಡಿಮೆ ಇಲ್ಲ ಎಂಬುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಬ್ಬ ಬಡ ಮಹಿಳೆ ಹೊಟ್ಟೆಪಾಡಿಗಾಗಿ ದಿನನಿತ್ಯ 15 ಮೇ. ಟನ್ ಕಬ್ಬು ಕಾರ್ಖನೆಗೆ ಸಾಗಿಸುವ ಮೂಲಕ ಎಲ್ಲರ ಮೆಚ್ವುಗೆಗೆ ಪಾತ್ರವಾಗಿದ್ದಾರೆ.
ಹೌದು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಿಂಧಿಹಟ್ಟಿಯ ಮಹಾದೇವಿ ಎಮ್ಮೆಗೋಳ ಎನ್ನುವ 42 ವಯಸ್ಸಿನ ಮಹಿಳೆ ಕಳೆದ ಮೂರು ದಿನಗಳಿಂದ ದಿನನಿತ್ಯ ಟ್ರ್ಯಾಕ್ಟರ್ ನಲ್ಲಿ ಸುಮಾರು 15 ಮೇಟ್ರಿಕ್ ಟನ್ ಕಬ್ಬನ್ನು ಜಮೀನುಗಳಿಂದ ತುಂಬಿಸಿ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ತರುತ್ತಿದ್ದಾರೆ.
ದಿನನಿತ್ಯ ಸುಮಾರು 4 0ರಿಂದ 50 ಕಿಲೋಮೀಟರ್ ವರೆಗೆ 15 ಮೆಟ್ರಿಕ್ ಟನ್ ಕಬ್ಬು ತುಂಬಿದ ಟ್ರ್ಯಾಕ್ಟರ್ ನಡೆಸಿಕೊಂಡು ಬರುವ ಈ ಮಹಿಳೆಯ ಸಾಹಸಕ್ಕೆ ಎಲ್ಲೆಡೆ ಮೆಚ್ವುಗೆ ವ್ಯಕ್ತವಾಗುತ್ತಿದ್ದು, ಮಹಿಳೆಯು ಟ್ರ್ಯಾಕ್ಟರ್ ನಲ್ಲಿ ಟನ್ ಗಂಟ್ಟಲೆ ಕಬ್ಬು ಸಾಗಿಸುವ ಈ ಕಾರ್ಯಕ್ಕೆ ಪುರುಷರೆ ನಿಬ್ಬೆರಗಾಗಿ ನೋಡುತ್ತ ನಿಲ್ಲುವಂತೆ ಮಾಡಿದ್ದಾರೆ.
ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ರಂಗದಲ್ಲಿ ಕೆಲಸ ಮಾಡುತ್ತಿದ್ದು, ನಾವು ದಿನನಿತ್ಯ ಪೆಟ್ರೋಲ್ ಬಂಕ್ ಗಳಲ್ಲಿ, ಅಟೋ ರಿಕ್ಷಾ,ಕಾರು ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಕೆಲಸ ಮಾಡುವುದನ್ನು ನೋಡುತ್ತಿದ್ದೇವೆ. ಆದರೆ ಸ್ವತಃ ಮಹಿಳೆ ಕಬ್ಬು ತುಂಬಿದ ಟ್ರ್ಯಾಕ್ಟರ್ ನ್ನು ಚಲಾಯಿಸಿಕೊಂಡು ಬಂದು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಮಾಡುತ್ತಿರುವ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಕುರಿತು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದ ಮಹಿಳೆ ಮಹಾದೇವಿ, ನಾನು ಬಡ ಕುಟುಂಬದವಳಾಗಿದ್ದು, ನನ್ನ ಉಪಜೀವನಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ ಮೂರು ದಿನಗಳಿಂದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ದಿನನಿತ್ಯ 15 ಟನ್ ಕಬ್ಬು ಟ್ರ್ಯಾಕ್ಟರ್ ಮೂಲಕ ಕಬ್ಬು ಪೂರೈಸುತ್ತಿದ್ದೇನೆ ಎಂದು ಹೇಳಿದ್ದಾರೆ.