ಸಂಕೇಶ್ವರ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನವಾದ ಬರುವ ಆ.15ರಂದು ಸಂಕೇಶ್ವರ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲಿದೆ ಎಂದು ಹಾಲಮತ ಸಮಾಜದ ಅಧ್ಯಕ್ಷ ಗಜಾನನ ಕ್ವಳ್ಳಿ ಹೇಳಿದ್ದಾರೆ.
ಪಟ್ಟಣದಲ್ಲಿ ಗುರುವಾರ ಸಂಜೆ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಮೆ ಲೋಕಾರ್ಪಣೆ ಅಂಗವಾಗಿ ಕುಂಭಮೇಳ, ನಮ್ಮ ಸಮಾಜದ ಪಾರಂಪರಿಕವಾದ ಡೊಳ್ಳು ವಾದ್ಯ, ಜಟ್ಟಿಕುಣಿತ ಹೀಗೆ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಆ 15ರಂದು ಸೋಮವಾರ ಬೆಳಗ್ಗೆ 8 ಗಂಟೆಗೆ ಧಾರ್ಮಿಕವಾಗಿ ಅಭಿಷೇಕ, ಪೂಜಾ ಕಾರ್ಯಕ್ರಮ, ಜ್ಯೋತಿ ಮೆರವಣಿಗೆ ನಡೆಯಲಿದೆ. ನಿಡಸೋಸಿ ಮಠದ ಶಿವಲಿಂಗೇಶ್ವರ ಶ್ರೀಗಳು, ಶಂಕರಾಚಾರ್ಯರ ಮಠದ ವಿದ್ಯಾನರಸಿಂಹ ಭಾರತಿ ಮಹಾಸ್ವಾಮಿಗಳು, ಕೌಲಗುಡ್ಡದ ಅಮರೇಶ್ವರ ಮಹಾರಾಜರ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 11.30 ಗಂಟೆಗೆ ಪ್ರತಿಮೆ ಲೋಕಾರ್ಪಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾಡಲಿದ್ದಾರೆ. ಸಮಾರಂಭಕ್ಕೆ ಅತಿಥಿ ಯಾಗಿ ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಆಗಮಿಸುವರು ಎಂದರು.
ಬಳಿಕ ಎಪಿಎಮ್ ಸಿ ಆವರಣದಲ್ಲಿ ವೇದಿಕೆ ಸಮಾರಂಭ ನಡೆಯಲಿದೆ. ಇದರ ಅಧ್ಯಕ್ಷ ತೆಯನ್ನು ಉದ್ಯಮಿ ಅಪ್ಪಾಸಾಹೇಬ ಶಿರಕೋಳಿ ಹಾಗೂ ಮುಖ್ಯ ಅತಿಥಿಯಾಗಿ ಮಾಜಿ ಸಂಸದ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಸಂಗಮ ಕಾರ್ಖಾನೆ ಯ ಅಧ್ಯಕ್ಷ ರಾಜೇಂದ್ರ ಪಾಟೀಲ, ಅಮರ ನಲವಡೆ, ಸುನಿಲ್ ಪರ್ವತರಾವ್, ಶ್ರೀಕಾಂತ ಹತನೂರೆ, ಕುನಾಲ್ ಪಾಟೀಲ, ಸಂತೋಷ ಮುಡಸಿ, ಪ್ರಮೋದ ಹೊಸಮನಿ, ಮಹೇಶ ಹಟ್ಟಿಹೊಳಿ, ದಿಲೀಪ್ ಹೊಸಮನಿ ಇವರು ಅತಿಥಿ ಗಳಾಗಿ ಆಗಮಿಸಲಿದ್ದಾರೆ.
ಹಾಲಮತ ಸಮಾಜ ಬೀರದೇವ ಯುವಕ ಸಂಘ, ಕನ್ನಡಪರ ಸಂಘಟನೆಗಳ ಅವರ ಸಹಕಾರದಿಂದ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ನಮ್ಮ ಸಮಾಜ ಅಲ್ಪಮತದ ಸಮಾಜ ಇದ್ದರು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಅದ್ದೂರಿ ಕಾರ್ಯಕ್ರಮ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸುಮಾರು ಐದು ಪ್ರತಿಮೆ ಗಳನ್ನು ರಾಜೇಶ್ವರಿ ವಿಶ್ವನಾಥ ಕತ್ತಿ ಅವರ ಚಾರ್ಟೇಬಲ್ ಟ್ರಸ್ಟ್ ನಿಂದ ದಾನ ರೂಪದಲ್ಲಿ ನೀಡಿದ್ದಾರೆ. ಪ್ರ ವಿಧಾನ ಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪ್ರತಿಮೆ ಲೋಕಾರ್ಪಣೆ ವಿಳಂಬವಾಯಿತು. ಅದರಿಂದ ಸಮಾಜದ ಜನರು ನೀತಿ ಸಂಹಿತೆ ಮುಗಿದ ಬಳಿಕ ತಡವಾಗಿ ಲೋಕಾರ್ಪಣೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ಡಾ. ಜಯಪ್ರಕಾಶ ಕರಜಗಿ, ಭೀಮರಾಯ ಮಲ್ಹಾರಿಗೋಳ, ಗಣಪತಿ ಹೆಗಡೆ, ಬೀರಪ್ಪ ಮುಸಾಯಿ, ಸಿದ್ದಗೌಡಾ ಢವಳೇಶ್ವರ, ಸಿದ್ದರಾಮ ಕೇರಿಮನಿ, ಶಂಕರ ಕೇರಿಮನಿ, ಸಿದ್ದಗೌಡಾ ಹೆಗಡೆ, ಭರಮಾ ಪೂಜಾರಿ, ಅರ್ಜುನ ಕರಜಗಿ, ಮೂರಾರಿ ಹೆಗಡೆ, ಚಂದ್ರಕಾಂತ ಹೆಗಡೆ ಉಪಸ್ಥಿತರಿದ್ದರು.