Advertisement
ಆಚಾರ್ಯರ ಪ್ರಯತ್ನಅಂದಿನ ಗೃಹ ಸಚಿವ ಡಾ| ವಿ.ಎಸ್.ಆಚಾರ್ಯರು ಹೋರಾಟ ತಿಳಿದು ಕುಂದಾಪುರ ನಿರೀಕ್ಷಣಾ ಬಂಗಲೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ,ಡಿಸಿ, ಸಿ.ಇ.ಒ. ಸಮ್ಮುಖ ಮಾಹಿತಿ ಕಲೆ ಹಾಕಿ ಎಲ್ಲ ಗ್ರಾ.ಪಂ.ಗಳು ನಿರ್ಣಯಿಸಿದರೆ ಕೂಡಲೇ ವಿಶೇಷ ತಹಶೀಲ್ದಾರ್ ನೇಮಿಸುವ ಭರವಸೆ ನೀಡಿದ್ದರು. ಸಮಿತಿಯು ಎಲ್ಲ ಗ್ರಾಮಗಳ ಪಂಚಾಯತ್ ನಿರ್ಣಯ ತಯಾರು ಮಾಡುವಾಗಲೇ ಡಾ| ವಿ.ಎಸ್. ಆಚಾರ್ಯರು ಅಕಾಲಿಕ ನಿಧನ ಹೊಂದಿದ್ದು ತಾಲೂಕು ರಚನೆಗೆ ಹಿನ್ನಡೆಯಾಯಿತು.
ವಿಧಾನ ಪರಿಷತ್ ಸದಸ್ಯಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರು ಅರ್ಜಿ ಸಮಿತಿಯಲ್ಲಿ ತಾಲೂಕು ರಚನೆ ಕುರಿತು ಅಹವಾಲು ಮಂಡಿಸಿ ಆಗ ಪ್ರಶ್ನೆ ಕೇಳುತ್ತಾ ಹೊಸ ತಾಲೂಕಿನ ಕನಸನ್ನು ಊರ್ಜಿತದಲ್ಲಿಟ್ಟಿದ್ದಾರೆ ಉಡುಪಿ ಜಿಲ್ಲಾಡಳಿತ ಸಮಗ್ರ ವರದಿ ತಯಾರಿಸಿ 2014, ಡಿ 22 ಎಡಿಎಂಸಿಆರ್: 74/ 2014 -15 ರಂದು ಶಂಕರನಾರಾಯಣಕ್ಕೆ ತಾಲೂಕಿನ ಅಗತ್ಯದ ಕುರಿತು ವರದಿಯನ್ನು ಸರಕಾರಕ್ಕೆ ಕಳುಹಿಸಿದೆ. ವರದಿ ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿ ಕೊಠಡಿಯಲ್ಲಿ ಬಾಕಿಯಾಗಿದೆ. ಕಾರ್ಡ್ ಚಳವಳಿ
ಎರಡು ವರ್ಷಗಳ ಹಿಂದೆ 5,000 ಅಂಚೆಕಾರ್ಡ್‌ಗಳನ್ನು ವಿವಿಧ ಗ್ರಾಮಗಳಿಂದ ಜನರಿಂದ ಬರೆಸಿ ಅಂಚೆ ಕಾರ್ಡ್ ಚಳವಳಿ ಮಾಡಿ ಸರಕಾರಕ್ಕೆ ಕಳುಹಿಸುವಲ್ಲಿ ಸಮಿತಿ ಶ್ರಮಿಸಿತ್ತು. ಜಿಲ್ಲಾಡಳಿತದ ವರದಿಯೊಳಗೆ ಇರುವ ಮಡಾಮಕ್ಕಿ, ಶೇಡಿಮನೆ, ಬೆಳ್ವೆ, ಅಲಾºಡಿ ಗ್ರಾಮಗಳು ನೂತನ ಹೆಬ್ರಿ ತಾಲೂಕಿಗೆ ಹೋಗಿ, ಹಳ್ಳಿಹೊಳೆ ಬೈಂದೂರು ತಾಲೂಕಿಗೆ ಸೇರಿತು.
ಹೊಸ ತಾಲೂಕಿಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕಂದಾಯ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮಿತಿ ಮನವಿ ಸಲ್ಲಿಸಿದೆ. ಈ ಸಾಲಿನ ಬಜೆಟ್‌ಗಾಗಿ ಕಾದು ನೋಡ ಬೇಕೆಂದು ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಹೇಳಿದ್ದಾರೆ.
Related Articles
ಶಂಕರನಾರಾಯಣವು 1972ರವರೆಗೆ ಬೈಂದೂರು ಕ್ಷೇತ್ರ, 1973ರಿಂದ 2008ರ ವರೆಗೆ ಕುಂದಾಪುರ ಕ್ಷೇತ್ರ, 2008 ರಿಂದ ಪುನಃ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿದೆ. ಹೀಗಾಗಿ ಜನಪ್ರತಿನಿಧಿಗಳೂ ಬದಲಾಗುತ್ತಿದ್ದು ಈ ಬಾರಿಯಾದರೂ ಹೊಸ ತಾಲೂಕು ಘೋಷಣೆಯಾಗುವುದೇ ಎಂಬ ನಿರೀಕ್ಷೆಯಲ್ಲಿದ್ದೇವೆ.
– ನ್ಯಾಯವಾದಿ ಎ. ರತ್ನಾಕರ ಶೆಟ್ಟಿ ಹೋರಾಟ ಸಮಿತಿ ಅಧ್ಯಕ್ಷರು
Advertisement