Advertisement
ರಿಕ್ಷಾಗಳೇ ವರದಾನಎಂತಹ ಕಷ್ಟದ ಪರಿಸ್ಥಿತಿಯಲ್ಲೂ ತಮ್ಮ ಮನೆಮಠಗಳನ್ನು ಬಿಟ್ಟು ದುಡಿಮೆಯ ಜತೆಗೆ ಮಾನವೀಯ ಮೌಲ್ಯಗಳೊಂದಿಗೆ ಜನಸೇವೆಯಲ್ಲಿ ತೊಡಗಿರುವವರು ರಿಕ್ಷಾ ಚಾಲಕರು. ಹಳ್ಳಿ ಹಳ್ಳಿಗಳಲ್ಲೂ ತಮ್ಮ ದುಡಿಮೆ ಬಾಡಿಗೆ ಜತೆಗೆ ಸ್ನೇಹ ಹಸ್ತವನ್ನು ಚಾಚುತ್ತಾ ಆಬಾಲ ವೃದ್ಧರು, ಶಾಲಾ ಮಕ್ಕಳು, ರೋಗಿಗಳು, ಅಂಗವಿಕಲರು, ಮಧ್ಯಮ ವರ್ಗ ದವರಿಗೆ ಇಂದು ರಿಕ್ಷಾಗಳೇ ವರದಾನ.
ಜಿಲ್ಲೆಯ ಎಲ್ಲಾ ಕಡೆಯೂ ಜನಪ್ರತಿನಿಧಿಗಳ ಅನುದಾನದೊಂದಿಗೆ ಸುಸಜ್ಜಿತ ರಿಕ್ಷಾ ನಿಲ್ದಾಣವನ್ನು ಅಲ್ಲಲ್ಲಿ ನೋಡಿದರೆ, ಶಂಕರನಾರಾಯಣ ರಿಕ್ಷಾ ಚಾಲಕರಿಗೆ ಇನ್ನೂ ರಿಕ್ಷಾ ನಿಲ್ದಾಣದ ಭಾಗ್ಯ ಸಿಕ್ಕಿಲ್ಲ. ಬಿಸಿಲು, ಮಳೆ, ಸಿಡಿಲು ಬಂದಾಗ ಎಲ್ಲಾದರೂ ಮರಗಳ ನೆರಳು, ಮರದ ಗೆಲ್ಲಿನ ಅಡಿಯಲ್ಲಿ ನಿಂತು ಅಪಾಯದೊಂದಿಗೆ ಜೀವ ಹಾಗೂ ರಿಕ್ಷಾದ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಪರಿಸ್ಥಿತಿಯಲ್ಲಿದ್ದಾರೆ. ಶಂಕರನಾರಾಯಣದಲ್ಲಿ 32ಕ್ಕೂ ಹೆಚ್ಚು ಮಂದಿ ರಿಕ್ಷಾ ಚಾಲಕರಿದ್ದೇವೆ. ಇದರಲ್ಲಿ ಹೆಚ್ಚಿನವರು ಸಾಲ ಮಾಡಿ ಸ್ವಂತ ರಿಕ್ಷಾ ಹೊಂದಿದ್ದೇವೆ. ಇಲ್ಲಿಯವರೆಗೆ ನಮಗೆ ಯಾವುದೇ ಸೂರು (ನಿಲ್ದಾಣ) ಅನುದಾನ ಸರಕಾರದಿಂದ ಬಂದಿಲ್ಲ. ಪ್ರತಿ ರಿಕ್ಷಾದಿಂದ 15 ರೂ. ಶುಲ್ಕ ಗ್ರಾಮ ಪಂಚಾಯತ್‌ಗೆ ಸಲ್ಲಿಕೆ ಆಗು ತ್ತದೆ. ಚುನಾವಣೆ ಹತ್ತಿರ ಬಂದಾಗ ರಾಜಕೀಯ ಸೋಗಿನ ಕೆಲವು ಮಂದಿ ಮೀಟರ್ ಟೇಪ್ ತೆಗೆದು ಬಂದು ಅನು
ದಾನ ಬಂದಿದೆ, ಕೂಡಲೇ ರಿಕ್ಷಾನಿಲ್ದಾಣ ಆಗುತ್ತದೆ ಎಂದು ವಿವಿಧ ಕಡೆಗಳಲ್ಲಿ ಅಳತೆ ಮಾಡಿ ಮುಂದೆ ಮಾಯ ವಾಗುತ್ತಾರೆ ಎನ್ನುತ್ತಾರೆ ಇಲ್ಲಿನ ಚಾಲಕರು.
Related Articles
ಜಿಲ್ಲೆಯ ಎಲ್ಲ ಕಡೆ ಜನಪ್ರತಿನಿಧಿ ಗಳ ಅನುದಾನದೊಂದಿಗೆ ಜನಸೇವೆ ಮಾಡುವ “ಆಟೋ ರಾಜ’ ರಿಕ್ಷಾ ಚಾಲಕರಿಗೆ ನಿಲ್ದಾಣದ ಭಾಗ್ಯ ಇದೆ. ಶಂಕರನಾರಾಯಣಕ್ಕೆ ಅನುದಾನ ಯಾಕೆ ಬಂದಿಲ್ಲವೆಂದು ತಿಳಿದು ಬಂದಿಲ್ಲ. ಜಿಲ್ಲಾಡಳಿತ ಹಾಗೂ ಶಾಸಕರ ಗಮನಕ್ಕೆ ಶೀಘ್ರ ತರಲಾಗುವುದು ಎನ್ನುತ್ತಾರೆ ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಅವರು.
Advertisement
ನಮ್ಮ ಗೋಳು ಕೇಳುವವರಿಲ್ಲಹಲವು ವರ್ಷಗಳಿಂದ 32 ಮಂದಿ ರಿಕ್ಷಾ ಚಾಲಕ – ಮಾಲಕರು ಶಂಕರನಾರಾಯಣ ಬಸ್ ನಿಲ್ದಾಣದ ಸಮೀಪ ಜೀವನೋಪಾಯಕ್ಕಾಗಿ ರಿಕ್ಷಾ ಇಟ್ಟು ಕೊಂಡಿದ್ದೇವೆ. ಪರ ಊರಿಗೆ ಹೋಗುವ , ಬರುವ ಪ್ರಯಾಣಿಕರ ಹಿತಾಸಕ್ತಿ ಎಷ್ಟೇ ರಾತ್ರಿಯಾದರೂ ಗಮನಿಸಲೇ ಬೇಕು. ಬಸ್ ನಿಲ್ದಾಣದ ಒಳಗೆ ನಮಗೆ ಪ್ರವೇಶವಿಲ್ಲ, ಹೊರಗಡೆ ಸೂಕ್ತ ಸೂರು ಇಲ್ಲ, ಬಸ್ ನಿಲ್ದಾಣದ ಹತ್ತಿರ ನಮಗೆ ಸೂರಿನ ವ್ಯವಸ್ಥೆ ಮಾಡಬೇಕು. ನಮ್ಮ ಗೋಳು ಕೇಳುವವರಿಲ್ಲವಾಗಿದೆ-ಶಂಕರ ಶೆಟ್ಟಿಗಾರ, ಅಧ್ಯಕ್ಷ, ರಿಕ್ಷಾ ಚಾಲಕ – ಮಾಲಕರ ಸಂಘ, ಶಂಕರನಾರಾಯಣ. ನಿಲ್ದಾಣ ಕಲ್ಪಿಸಲಿ
ಬಿಸಿಲಿಗೆ ಮೈಯೊಡ್ಡಿ ಮಳೆಗಾಲದಲ್ಲಿ ಹಲವು ವರ್ಷಗಳಿಂದ ನೆನೆಯುತ್ತಿದ್ದೇವೆ. ಬಸ್ ನಿಲ್ದಾಣದ ಪಕ್ಕ ಶ್ರೀಕೃಷ್ಣ ಕಾಂಪ್ಲೆಕ್ಸ್ , ಸದಾಶಿವ ನಾಯಕ್ ಅಂಗಡಿ ಮಧ್ಯ 6 – 7 ರಿಕ್ಷಾ ನಿಲ್ಲಲು ಅನುಕೂಲವಿದೆ. ಸ್ಥಳೀಯ ಆಡಳಿತ ಪ್ರಯಾಣಿಕರ ಅನುಕೂಲ ಕೋಸ್ಕರ ನಮಗೆ ಸೂರು ಕಲ್ಪಿಸಿದರೆ ಬಸ್ಸಿನಿಂದ ಇಳಿಯುವ ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ.ಈ ಬಗ್ಗೆ ಸ್ಥಳೀಯಾಡಳಿತ ಗಮನ ಹರಿಸಬೇಕು.
– ಮಹಾಬಲ ಕುಲಾಲ, ಗೌರವ ಅಧ್ಯಕ್ಷ
ರಿಕ್ಷಾ ಚಾಲಕ – ಮಾಲಕರ ಸಂಘ, ಶಂಕರನಾರಾಯಣ ಜಿಲ್ಲೆಯ ಎಲ್ಲಾ ಕಡೆ ಜನಪ್ರತಿನಿಧಿಗಳ ಸಹಾಯದಿಂದ ಸುಸಜ್ಜಿತ ರಿಕ್ಷಾ ನಿಲ್ದಾಣ ಸ್ಥಾಪನೆಯಾಗಿದೆ. ಆದರೆ ಶಂಕರನಾರಾಯಣ ರಿಕ್ಷಾ ಚಾಲಕರಿಗೆ ಮಾತ್ರ ಈ ಭಾಗ್ಯವಿಲ್ಲ. ಇವರು ಮಳೆ, ಬಿಸಿಲಿಗೆ ಮರಗಳ ನೆರಳು, ಮರದ ಗೆಲ್ಲಿನ ಅಡಿಯಲ್ಲಿ ನಿಂತು ಅಪಾಯಕಾರಿಯಾಗಿ ತಮ್ಮ ಜೀವ ಮತ್ತು ರಿಕ್ಷಾವನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ಇಲ್ಲಿಯ ರಿಕ್ಷಾ ಚಾಲಕರಿಗೆ ಒಂದು ಸುಸಜ್ಜಿತ ರಿಕ್ಷಾ ನಿಲ್ದಾಣ ಕಲ್ಪಿಸಿಕೊಡುವುದು ಅಗತ್ಯ.