Advertisement

ಶಂಕರನಾರಾಯಣ ಮೈರ್ಪಾಡಿ ಅವರಿಗೆ ಗುರುನಮನ

02:50 AM Jul 19, 2017 | Team Udayavani |

ಪಣಂಬೂರು: ಯಕ್ಷಗಾನ ಗುರು, ಅಂಧ ಮಕ್ಕಳಿಗೆ ಯಕ್ಷಗಾನ ಕಲಿಸಿದ ಕೀರ್ತಿಗೆ ಪಾತ್ರರಾದ ಶಂಕರ ನಾರಾಯಣ ಮೈರ್ಪಾಡಿ ಅವರಿಗೆ ಗುರುನಮನ ನಡೆಯಿತು.

Advertisement

ಯಕ್ಷಗಾನ ನಾಟಕ ಕಲಾ ಪೋಷಕರ ಸಂಘ ಪಣಂಬೂರು, ಪಣಂಬೂರು ವೆಂಕಟ್ರಾಯ ಐತಾಳ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷಗಾನ ಕಲಾ ಮಂಡಳಿ ಎನ್‌ಎಂಪಿಟಿ ಮತ್ತು ಪಣಂಬೂರು ನಂದನೇಶ್ವರ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಪಣಂಬೂರು  ಶ್ರೀ ನಂದನೇಶ್ವರ ದೇವಸ್ಥಾನದ ರಜತಾಂಗಣ ದಲ್ಲಿ ಕಾರ್ಯಕ್ರಮ ಜರಗಿತು.
ಶೈಲಜಾ ಶಂಕರನಾರಾ ಯಣ ಮೈರ್ಪಾಡಿ ಅವರಿಗೆ  ಗೌರವಾರ್ಪಣೆ, ಯಕ್ಷಗಾನ ರಂಗದಲ್ಲಿ ಸಾಧನೆ ಗೈದ ಸುಷ್ಮಾ ಮೈರ್ಪಾಡಿ, ಶರತcಂದ್ರ ಪಣಂಬೂರು ಅವರಿಗೆ ಸಮ್ಮಾನ ಜರಗಿತು.

ಕಣಿಪುರ ಯಕ್ಷಗಾನ ಮಾಸಿಕ ಸಂಪಾದಕ ನಾರಾಯಣ ಚಂಬಲ್ತಿಮಾರ್‌ ಮಾತನಾಡಿ, ಯಕ್ಷಗಾನ ರಂಗಕ್ಕೆ ಉತ್ತಮ ವಿಮರ್ಶಕ ಪ್ರೇಕ್ಷಕ ವರ್ಗವನ್ನು ಸೃಷ್ಟಿ ಮಾಡುವ ಆವಶ್ಯಕತೆಯಿದೆ ಎಂದರು. ಯಕ್ಷಗುರು ಶಂಕರನಾರಾಯಣ ಮೈರ್ಪಾಡಿ ಅವರಲ್ಲಿ ಅಪಾರ ಪ್ರತಿಭೆ ಯಿದ್ದು ಮಕ್ಕಳಿಗೆ ಕಲಿಸಿ ಯಕ್ಷಗಾನ ಕಲೆಯನ್ನು ಪಸರಿಸುತ್ತಿದ್ದಾರೆ ಎಂದರು.
ಬಲ್ಲಿರೇನಯ್ಯ ಯಕ್ಷಗಾನ ಮಾಸಿಕ ಸಂಪಾದಕ ತಾರಾನಾಥ ಬಲ್ಯಾಯ ಶುಭ ಹಾರೈಸಿದರು.

ಕಲೆಯನ್ನು ಬೆಳೆಸಬೇಕು
ಗುರುನಮನ ಸ್ವೀಕರಿಸಿದ ಶಂಕರ ನಾರಾಯಣ ಮೈರ್ಪಾಡಿ ಮಾತನಾಡಿ, ಗುರುನಮನ ಸಂಸ್ಕೃತಿ ನಮ್ಮ ಪರಂಪರೆಯ ಪ್ರತೀಕವಾಗಿದೆ. ಯಾವುದೇ ಕಲೆಯಿರಲಿ ಅದನ್ನು ಮತ್ತಷ್ಟು ಕಲಿತು ಕಲೆಯನ್ನು ಬೆಳೆಸಬೇಕು ಎಂದರು. ಸಾರಿಗೆ ಅಧಿಕಾರಿ ರವಿಶಂಕರ್‌ ಕಾರಂತ್‌ ಅಭಿನಂದನಾ ಭಾಷಣ ಮಾಡಿದರು.

ಉದ್ಯಮಿ ಜಗದೀಶ್‌ ರಾವ್‌ ಗುರುನಮನ ನಡೆಸಿದರು. ಯಕ್ಷಗಾನ ಕಲಾವಿದ ಸೇರಾಜೆ ಸೀತಾರಾಮ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಿಯ ಹರಿವಾಣ ಸಹಿತ ಶಾಲು ಹೊದೆಸಿ ಪೋಷಕರ ಪರವಾಗಿ ಪಿ. ಸದಾಶಿವ ಐತಾಳ್‌ ಗೌರವಿಸಿದರು. ಕರ್ಣಾಟಕ ಬ್ಯಾಂಕ್‌ ನಿವೃತ್ತ ಪ್ರಬಂಧಕ ಎಂ. ಸದಾಶಿವ, ದೇವಳದ ಮ್ಯಾನೇಜರ್‌ ವೆಂಕಟೇಶ್‌ ರಾವ್‌ ಉಪಸ್ಥಿತರಿದ್ದರು.

Advertisement

ಯಕ್ಷಗಾನ ಕಲಾ ಮಂಡಳಿ ಎನ್‌ಎಂಪಿಟಿ ಸದಸ್ಯ ಪಿ.ಸುಧಾಕರ್‌ ಕಾಮತ್‌ ಸ್ವಾಗತಿಸಿದರು. ಸುಬ್ರಹ್ಮಣ್ಯ ವಿಜಯಲಕ್ಷ್ಮೀ ಹೆಬ್ಟಾರ್‌ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಣಂಬೂರು ವೆಂಕಟ್ರಾಯ ಐತಾಳ ಯಕ್ಷಗಾನ ಅಧ್ಯಯನ ಕೇಂದ್ರದ ಮಕ್ಕಳಿಂದ ಯಕ್ಷಗಾನ ಬಯಲಾಟ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next