ಹರಾರೆ: ಜಿಂಬಾಬ್ವೆ ಎದುರಿನ ಮೂರು ಪಂದ್ಯಗಳ ಸರಣಿಯ 2 ನೇ ಏಕದಿನ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಸಂಜು ಸ್ಯಾಮ್ಸನ್ ಸೊಗಸಾದ ಆಟ ವನ್ನು ಆಡಿದ್ದು ಮಾತ್ರವಲ್ಲದೆ ಇನ್ನೊಂದು ವಿಚಾರಕ್ಕೆ ಭಾರಿ ಪ್ರಶಂಸೆಗೊಳಗಾಗಿದ್ದಾರೆ.
ಸಂಜು ಸ್ಯಾಮ್ಸನ್ 2ನೇ ಏಕದಿನ ಪಂದ್ಯದಲ್ಲಿ 39 ಎಸೆತಗಳಲ್ಲಿ 43 ರನ್ ಗಳಿಸಿ ಭಾರತಕ್ಕೆ ಸಾಕಷ್ಟು ಓವರ್‌ಗಳು ಬಾಕಿ ಇರುವಾಗ ಗುರಿಯನ್ನು ಸಾಧಿಸಲು ಕಾರಣವಾದರು ಮಾತ್ರವಲ್ಲದೆ ಸ್ಟಂಪ್ ಹಿಂದೆ 3 ಕ್ಯಾಚ್‌ಗಳನ್ನು ಹಿಡಿದದ್ದು ಮತ್ತು ಜಿಂಬಾಬ್ವೆ ಬ್ಯಾಟ್ಸ್ ಮ್ಯಾನ್ ರನ್ ಔಟ್‌ನಲ್ಲಿ ಭಾಗಿಯಾಗಿದ್ದರು.
ಪಂದ್ಯ ವೀಕ್ಷಿಸಲು ಬಂದ ಸ್ಥಳೀಯ ಮಗುವನ್ನು ಭೇಟಿಯಾದ ಸಂಜು ಅವರು ದಯಾಮಯಿಯಾಗಿ ತಮ್ಮ ಅಭಿಮಾನಿಗಳ ಹೃದಯವನ್ನು ಗೆದ್ದರು. ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಆರು ವರ್ಷದ ಕ್ರಿಕೆಟ್ ಅಭಿಮಾನಿಗಾಗಿ ಸಂಜು ಮ್ಯಾಚ್ ಬಾಲ್‌ಗೆ ಸಹಿ ಮಾಡಿದ್ದಾರೆ. ಚೆಂಡನ್ನು ಚುಂಬಿಸಿ ಮಗುವಿಗೆ ಕ್ರಿಕೆಟ್ ಬಾಲ್‌ಗೆ ಸಹಿ ಮಾಡಿರುವುದು ಸಂತೋಷ ತಂದಿದೆ ಎಂದು ಸಂಜು ನಂತರ ಹೇಳಿದರು.
ಸಂಜು ಅವರ ಈ ನಡೆಗೆ ಸಾವಿರಾರು ಮಂದಿ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಪ್ರಶಂಸೆಯ ಮಾಹಾಪೂರವನ್ನೇ ಹರಿದು ಬಿಟ್ಟಿದ್ದಾರೆ.
ಕೇರಳದ 27 ವರ್ಷದ ಕ್ರಿಕೆಟಿಗ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಭಾರತೀಯ ತಂಡದಲ್ಲಿ ಅನಿಯಮಿತವಾಗಿ ಆಡುತ್ತಿದ್ದಾರೆ.