ಪುಣೆ: ಪ್ರವಾಸಿ ಶ್ರೀಲಂಕಾ ವಿರುದ್ಧದ ಅಂತಿಮ ಟಿ ಟ್ವೆಂಟಿ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಆಡಿದ್ದರೂ, ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಅಭಿಮಾನಿಗಳು ಪ್ರಶ್ನೆ ಎತ್ತಿದ್ದಾರೆ.
ಪುಣೆಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿದ್ದರು. ಸುಮಾರು ಐದು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯವಾಡಿದ ಸಂಜು ಅದ್ಭುತವಾಗಿಯೇ ಸಿಕ್ಸರ್ ನಿಂದ ಆರಂಭಿಸಿದ್ದರು. ಆದರೆ ಮುಂದಿನ ಎಸೆತದಲ್ಲೇ ಔಟಾಗಿ ಪೆವಿಲಿಯನ್ ಗೆ ನಡೆದಿದ್ದರು.
ಮೂರನೇ ಪಂದ್ಯವನ್ನೂ ಜಯಿಸುವುದರ ಮೂಲಕ ವಿರಾಟ್ ಪಡೆ 2-0 ಅಂತರದಿಂದ ಭರ್ಜರಿಯಾಗಿ ಸರಣಿ ವಶಪಡಿಸಿತ್ತು. ನಂತರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಂಜು ಸ್ಯಾಮ್ಸನ್ ಕಾಣಿಸಿಕೊಂಡಿರಲಿಲ್ಲ. ಗ್ರೂಪ್ ಫೋಟೋದಲ್ಲೂ ಸಂಜು ಪತ್ತೆಯಿರಲಿಲ್ಲ. ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದರು.
Related Articles
ಆದರೆ ಅಸಲಿ ವಿಷಯವೆಂದರೆ, ನ್ಯೂಜಿಲ್ಯಾಂಡ್ ಎ ತಂಡದ ವಿರುದ್ಧದ ಪಂದ್ಯಕ್ಕಾಗಿ ಭಾರತ ಎ ತಂಡ ಅಂದೇ ಪ್ರಯಾಣ ಬೆಳೆಸಬೇಕಿತ್ತು. ಸಂಜು ಸ್ಯಾಮ್ಸನ್ ಕೂಡಾ ಆ ತಂಡದಲ್ಲಿದ್ದರು. ಹಾಗಾಗಿ ಸಂಜು ಪ್ರಶಸ್ತಿ ವಿತರಣೆಗೂ ಮೊದಲೇ ‘ಎ’ ತಂಡ ವನ್ನು ಸೇರಿಕೊಳ್ಳಲು ಹೋಗಿದ್ದರು. ಮಯಾಂಕ್ ಅಗರ್ವಾಲ್ ಹಾಕಿರುವ ಟ್ವೀಟ್ ನಲ್ಲಿ ಇದು ಸಾಬೀತಾಗಿದೆ.