Advertisement

ಸಂಜು ಆಟಕ್ಕೆ ಆರ್‌ಸಿಬಿ ದಂಗು

06:35 AM Apr 16, 2018 | Team Udayavani |

ಬೆಂಗಳೂರು: ದುಬಾರಿಯಾದ ಬೌಲರ್‌ಗಳು ಮತ್ತು ತಾರಾ ಬ್ಯಾಟ್ಸ್‌ ಮನ್‌ಗಳ ವೈಫ‌ಲ್ಯದಿಂದ ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡ ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ರಾಜಸ್ಥಾನ್‌ ವಿರುದ್ಧ 19 ರನ್‌ನಿಂದ ಸೋಲುಂಡಿದೆ. ಮತ್ತೂಂದೆಡೆ ಸಂಜು ಸ್ಯಾಮ್ಸನ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ಕೂಟದಲ್ಲಿ ಸತತ 2ನೇ ಗೆಲುವು ಪಡೆಯಿತು.

Advertisement

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ 4 ವಿಕೆಟ್‌ಗೆ 217 ರನ್‌ ಮಾಡಿತ್ತು.ಇದಕ್ಕೆ ಉತ್ತರವಾಗಿ ಆರ್‌ಸಿಬಿ 20 ಓವರ್‌ಗೆ 6 ವಿಕೆಟ್‌ ಕಳೆದುಕೊಂಡು 198 ರನ್‌ ಬಾರಿಸಿ ಸೋಲುಂಡಿದೆ.

26 ಎಸೆತಕ್ಕೆ ಕೊಹ್ಲಿ ಅರ್ಧಶತಕ: ದೊಡ್ಡ ಮೊತ್ತ ಬೆನ್ನುಹತ್ತಿದ್ದ ಆರ್‌ಸಿಬಿ ಆರಂಭದಲ್ಲಿಯೇ ಸ್ಫೋಟಕ ಬ್ಯಾಟ್ಸ್‌ಮನ್‌ ಮೆಕಲಂ ವಿಕೆಟ್‌ ಕಳೆದುಕೊಂಡಿತು. ಕಾಕ್‌ (26 ರನ್‌) ಹೆಚ್ಚುಹೊತ್ತು ನಿಲ್ಲಲಿಲ್ಲ. ಆದರೆ ನಾಯಕ ವಿರಾಟ್‌ ಕೊಹ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿ ಆರಂಭಿಕ ವೈಫ‌ಲ್ಯದಿಂದ ತಂಡ ಹೊರಬರುವಂತೆ ಮಾಡಿದರು. ಕೇವಲ 26 ಎಸೆತದಲ್ಲಿಯೇ ಅರ್ಧಶತಕ ಸಿಡಿಸಿ “ಕಪ್‌ ನಮೆªà ಚೇಸ್‌ ಮಾಡ್ತೀವಿ’ ಎಂಬ ಭರವಸೆ ಮೂಡಿಸಿದರು. ದುರಾ ದೃಷ್ಟವಶಾತ್‌ ಈ ಆಸೆಗೆ ತಣ್ಣೀರು ಬಿತ್ತು. ತಂಡದ ಮೊತ್ತ 101 ಆಗಿರುವಾಗ ಶಾರ್ಟ್‌ ಎಸೆತದಲ್ಲಿ ಕೊಹ್ಲಿ ಶ್ರೇಯಸ್‌ಗೆ ಕ್ಯಾಚ್‌ ನೀಡಿದರು. ಕೊಹ್ಲಿ 30 ಎಸೆತದಲ್ಲಿ 7 ಬೌಂಡರಿ, 2 ಸಿಕ್ಸರ್‌ ಸೇರಿದಂತೆ 57 ರನ್‌ ಬಾರಿಸಿದರು. ಕೊಹ್ಲಿ ಹಿಂದೆಯೇ ಎಬಿಡಿ: ಕೊಹ್ಲಿ ಔಟ್‌ ಆದರೂ ಕ್ರೀಸ್‌ನಲ್ಲಿ ಎಬಿ ಡಿವಿಲಿಯರ್ ಇರುವುದರಿಂದ ಅಭಿಮಾನಿಗಳಿಗೆ ಆರ್‌ಸಿಬಿ ಗೆಲ್ಲುವ ಭರವಸೆ ಇತ್ತು. ಆದರೆ ಶ್ರೇಯಸ್‌ ಎಸೆತದಲ್ಲಿ ಎಬಿಡಿ (20 ರನ್‌) ಉನಾಡ್ಕತ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಮನ್‌ದೀಪ್‌, ಸುಂದರ್‌ ಅಮೋಘ ಆಟ: 6ನೇ ವಿಕೆಟ್‌ಗೆ ಜತೆಯಾದ ಮನ್‌ದೀಪ್‌ ಸಿಂಗ್‌ ( 47 ರನ್‌) ಮತ್ತು ವಾಷಿಂಗ್ಟನ್‌ ಸುಂದರ್‌ (35 ರನ್‌)ಅಮೋಘ ಪ್ರದರ್ಶನದಿಂದ ಆರ್‌ಸಿಬಿಗೆ ಎದುರಾಗಬೇಕಿದ್ದ ದೊಡ್ಡ ಅಂತರದ ಸೋಲು ತಪ್ಪಿಸಿದರು.

ರಾಜಸ್ಥಾನ್‌ಗೆ ಸಂಜು ಆಟವೇ ಆನೆ ಬಲ: ಇದಕ್ಕೂ ಮುನ್ನಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ತಂಡಕ್ಕೆ ಆರಂಭಿಕರಾದ ನಾಯಕ ಅಜಿಂಕ್ಯ ರಹನೆ ಮತ್ತು ಅರ್ಕಿ ಶಾರ್ಟ್‌ 49 ರನ್‌ ಜತೆಯಾಟ ನೀಡಿ ಭದ್ರ ಅಡಿಪಾಯ ನಿರ್ಮಿಸಿದರು. ಆದರೆ, ಕ್ರಿಸ್‌ ವೋಕ್ಸ್‌ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 20 ಎಸೆತದಲ್ಲಿ 36 ರನ್‌ ಬಾರಿಸಿದ ರಹಾನೆ ಪೆವಿಲಿಯನ್‌ ಸೇರಿದರು.

Advertisement

ಶಾರ್ಟ್‌ ಕೂಡ ರಹಾನೆ ಹಿಂದೆಯೇ ವಿಕೆಟ್‌ ಕಳೆದುಕೊಂಡರು.ಈ ಹಂತದಲ್ಲಿ ಕ್ರೀಸ್‌ಗೆ ಬಂದ ಸಂಜು ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದರು. ಅಂತಿಮವಾಗಿ ಸಂಜು 45 ಎಸೆತದಲ್ಲಿ ಅಜೇಯ 92 ರನ್‌ ಬಾರಿಸಿದರು. ಅವರ ಆಟದಲ್ಲಿ 2 ಬೌಂಡರಿ, 10 ಸಿಕ್ಸರ್‌ ಸೇರಿತ್ತು. ಉಳಿದಂತೆ ಸ್ಟೋಕ್ಸ್‌(27 ರನ್‌), ಬಟ್ಲರ್‌ (23 ರನ್‌) ಅಲ್ಪ ಕಾಣಿಕೆ ನೀಡಿದರು.

ಗ್ರೀನ್‌ ಜೆರ್ಸಿಯಲ್ಲಿ ಆರ್‌ಸಿಬಿ
2011 ರಿಂದ ಆರ್‌ಸಿಬಿ ಪ್ರತಿ ಆವೃತ್ತಿಯಲ್ಲಿ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತದೆ. ಹಸಿರನ್ನು ಉಳಿಸಿ, ಬೆಳೆಸಿ ಎಂಬ ಸಂದೇಶವನ್ನು ಸಮಾಜಕ್ಕೆ,ಕ್ರೀಡಾಭಿಮಾನಿಗಳಿಗೆ ನೀಡುವ ಉದ್ದೇಶದಿಂದ ಗೋ ಗ್ರೀನ್‌ ಪಂದ್ಯ ಆಡಲಾಗುತ್ತದೆ. ಪ್ರಸಕ್ತ ಆವೃತ್ತಿಯಲ್ಲಿ ರಾಜಸ್ಥಾನ್‌ ವಿರುದ್ಧ ಗೋ ಗ್ರೀನ್‌ ಪಂದ್ಯ ಆಡಿದೆ.

ಪಂದ್ಯದ ತಿರುವು
10.2ನೇ ಎಸೆತದಲ್ಲಿ ವಿರಾಟ್‌ ಕೊಹ್ಲಿ, 12.3ನೇ ಎಸೆತದಲ್ಲಿ ಡಿವಿಲಿಯರ್ ಔಟ್‌ ಆಗಿದ್ದು, ಆರ್‌ಬಿಸಿಯ ಚೇಸಿಂಗ್‌ ಸಾಮರ್ಥ್ಯ ಕುಗ್ಗುವಂತೆ ಮಾಡಿತು. ನಂತರ ಪಂದ್ಯ ಆರ್‌ಸಿಬಿ ಕೈಗೆ ಸಿಗಲಿಲ್ಲ.

ಸ್ಕೋರ್‌ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌

ಅಜಿಂಕ್ಯ ರಹಾನೆ    ಸಿ ಯಾದವ್‌ ಬಿ ವೋಕ್ಸ್‌    36
ಡಿ’ಆರ್ಸಿ ಶಾರ್ಟ್‌    ಸಿ ಡಿ ಕಾಕ್‌ ಬಿ ಚಾಹಲ್‌    11
ಸಂಜು ಸ್ಯಾಮ್ಸನ್‌    ಔಟಾಗದೆ    92
ಬೆನ್‌ ಸ್ಟೋಕ್ಸ್‌    ಬಿ ಚಾಹಲ್‌    27
ಜಾಸ್‌ ಬಟ್ಲರ್‌    ಸಿ ಕೊಹ್ಲಿ ಬಿ ವೋಕ್ಸ್‌    23
ರಾಹುಲ್‌ ತ್ರಿಪಾಠಿ    ಔಟಾಗದೆ    14
ಇತರ        14
ಒಟ್ಟು  (20 ಓವರ್‌ಗಳಲ್ಲಿಮ 4 ವಿಕೆಟಿಗೆ)        217
ವಿಕೆಟ್‌ ಪತನ: 1-49, 2-53, 3-102, 4-175.
ಬೌಲಿಂಗ್‌:
ವಾಷಿಂಗ್ಟನ್‌ ಸುಂದರ್‌        4-0-30-0
ಕ್ರಿಸ್‌ ವೋಕ್ಸ್‌        4-0-47-2
ಉಮೇಶ್‌ ಯಾದವ್‌        4-0-59-0
ಯಜುವೇಂದ್ರ ಚಾಹಲ್‌        4-0-22-2
ಕುಲವಂತ್‌ ಖೆಜೊÅàಲಿಯ        3-0-40-0
ಪವನ್‌ ನೇಗಿ        1-0-13-0
ರಾಯಲ್‌ ಚಾಲೆಂಜರ್ ಬೆಂಗಳೂರು
ಬ್ರೆಂಡನ್‌ ಮೆಕಲಮ್‌    ಸಿ ಸ್ಟೋಕ್ಸ್‌ ಬಿ ಗೌತಮ್‌    4
ಕ್ವಿಂಟನ್‌ ಡಿ ಕಾಕ್‌    ಸಿ ಉನಾದ್ಕತ್‌ ಬಿ ಶಾರ್ಟ್‌    26
ವಿರಾಟ್‌ ಕೊಹ್ಲಿ    ಸಿ ಶಾರ್ಟ್‌ ಬಿ ಗೋಪಾಲ್‌    57
ಎಬಿ ಡಿ ವಿಲಿಯರ್    ಸಿ ಉನಾದ್ಕತ್‌ ಬಿ ಗೋಪಾಲ್‌    20
ಮನ್‌ದೀಪ್‌ ಸಿಂಗ್‌    ಔಟಾಗದೆ    47
ಪವನ್‌ ನೇಗಿ    ಸಿ ಬಟ್ಲರ್‌ ಬಿ ಲವಿÉನ್‌    3
ವಾಷಿಂಗ್ಟನ್‌ ಸುಂದರ್‌    ಬಿ ಸ್ಟೋಕ್ಸ್‌    35
ಕ್ರಿಸ್‌ ವೋಕ್ಸ್‌    ಔಟಾಗದೆ    0
ಇತರ        6
ಒಟ್ಟು  (20 ಓವರ್‌ಗಳಲ್ಲಿ 6 ವಿಕೆಟಿಗೆ)        198
ವಿಕೆಟ್‌ ಪತನ: 1-4, 2-81, 3-101, 4-114, 5-126, 6-182.
ಬೌಲಿಂಗ್‌:
ಕೃಷ್ಣಪ್ಪ ಗೌತಮ್‌        4-0-36-1
ಧವಳ್‌ ಕುಲಕರ್ಣಿ        1-0-14-0
ಜೈದೇವ್‌ ಉನಾದ್ಕತ್‌        3-0-35-0
ಬೆನ್‌ ಸ್ಟೋಕ್ಸ್‌        3-0-32-1
ಶ್ರೇಯಸ್‌ ಗೋಪಾಲ್‌        4-0-22-2
ಡಿ’ಆರ್ಸಿ ಶಾರ್ಟ್‌        1-0-10-1
ಬೆನ್‌ ಲವಿನ್‌        4-0-46-1

ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್‌

– ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next