ಮುಂಬೈ: ಈ ಬಾರಿಯ ಐಪಿಎಲ್ ನ 18ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರು ವಿಕೆಟ್ ಜಯ ಸಾಧಿಸಿದೆ. ಸತತ ಸೋಲನುಭವಿಸಿದ್ದ ರಾಜಸ್ಥಾನ್ ತಂಡ ಮತ್ತೆ ಗೆಲುವಿನ ನಗೆ ಬೀರಿದರೆ, ಕೆಕೆಆರ್ ತಂಡ ನಾಲ್ಕನೇ ಸೋಲನುಭವಿಸಿದೆ.
ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 42 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಕಡಿಮೆ ಮೊತ್ತ ಬೆನ‍್ನಟ್ಟಿತ್ತಿದ್ದರೂ ಕಡೆಯವರೆಗೆ ಕ್ರೀಸ್ ನಲ್ಲಿದ್ದು ತಂಡವನ್ನು ಗೆಲ್ಲಿಸಿದರು.
ಇದನ್ನೂ ಓದಿ:ಕೊಹ್ಲಿ- ಧೋನಿ ತಂಡಗಳ ಹೈ ವೋಲ್ಟೇಜ್ ಮ್ಯಾಚ್
ಈ ಸೀಸನ್ ನ ಮೊದಲ ಪಂದ್ಯದಲ್ಲೇ ಸಂಜು ಸ್ಯಾಮ‍್ಸನ್ ಭರ್ಜರಿ ಶತಕ ಬಾರಿಸಿದರೂ ನಂತರ ಅಗ್ಗಕ್ಕೆ ವಿಕೆಟ್ ಒಪ್ಪಿಸಿ ಟೀಕೆಗೆ ಒಳಗಾಗಿದ್ದರು. ನಂತರ ಮೂರು ಪಂದ್ಯಗಳಲ್ಲಿ ರಾಜಸ್ಥಾನ್ ಕ್ಯಾಪ್ಟನ್ ಕ್ರಮವಾಗಿ 4,1, 21 ರನ್ ಮಾತ್ರ ಗಳಿಸಿದ್ದರು.
ಕೆಕೆಆರ್ ವಿರುದ್ದದ ಪಂದ್ಯದ ನಂತರ ಈ ಕುರಿತಂತೆ ಸಂಜು ಮಾತನಾಡಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಆಡುವುದನ್ನು ನಾನು ಕಲಿತಿದ್ದೇನೆ. ಪಂದ್ಯದ ಪರಿಸ್ಥಿತಿ ಏನನ್ನು ಬಯಸುತ್ತದೆಯೋ ಅದರಂತೆ ಆಡುವುದನ್ನು ನಾನು ಇಷ್ಟು ವರ್ಷಗಳ ಅನುಭವದಿಂದ ಕಲಿತಿದ್ದೇನೆ ಎಂದು ಸಂಜು ಹೇಳಿದ್ದಾರೆ.