Advertisement

Predicted 11; ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಗೆ ಅವಕಾಶ ಸಿಗುವುದು ಕಷ್ಟ

05:21 PM Jul 29, 2023 | Team Udayavani |

ಬಾರ್ಬಡೋಸ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಗೆದ್ದ ಭಾರತ ತಂಡವು ಇಂದು ಎರಡನೇ ಮುಖಾಮುಖಿಗೆ ಸಜ್ಜಾಗಿದೆ. ಬಾರ್ಬಡೋಸ್ ನ ಕೆನ್ನಿಂಗ್ಸ್ಟನ್ ಓವಲ್ ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ತಂಡದ ಆಡುವ ಬಳಗದಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ.

Advertisement

ಮೊದಲ ಪಂದ್ಯದಲ್ಲೇ ಭಾರತ ಹಲವು ಪ್ರಯೋಗಗಳನ್ನು ನಡೆಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ಅಲ್ಪ ಮೊತ್ತಕ್ಕೆ ಆಲೌಟಾದ ಪರಿಣಾಮ ಭಾರತ ತಂಡವು ಬ್ಯಾಟಿಂಗ್ ಕ್ರಮಾಂಕದಲ್ಲಿ ಹೊಸ ಪ್ರಯೋಗ ನಡೆಸಿತ್ತು. ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಿದ್ದರು. ಎರಡನೇ ಪಂದ್ಯದಲ್ಲಿಯೂ ಇದು ಮುಂದುವರಿಯುವ ಸಾಧ್ಯತೆಯಿದೆ.

ಇಶಾನ್ ಕಿಶನ್ ಅವರು ಅರ್ಧಶತಕ ಬಾರಿಸಿ ಮಿಂಚಿದರೆ, ಗಿಲ್, ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ವಿಫಲರಾಗಿದ್ದಾರೆ. ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಗಿಲ್ ಅವರು ಆಡುವ ಬಳಗದಲ್ಲಿ ಮುಂದುವರಿಯುವುದ ನಿಶ್ಚಿತ. ಉಪ ನಾಯಕ ಹಾರ್ದಿಕ್ ಅವರನ್ನೂ ಕೈಬಿಡುವಂತಿಲ್ಲ. ಹೀಗಾಗಿ ಏಕದಿನ ಮಾದರಿಯಲ್ಲಿ ಇನ್ನೂ ಮಿಂಚದ ಸೂರ್ಯಕುಮಾರ್ ಯಾದವ್ ಅವರು ತಮ್ಮ ಸ್ಥಾನ ತೊರೆಯಬೇಕಾದೀತು.

ಒಂದು ವೇಳೆ ಎರಡನೇ ಪಂದ್ಯದಲ್ಲಿ ಸೂರ್ಯ ಸ್ಥಾನ ಪಡೆಯದಿದ್ದರೆ, ಅವರ ಜಾಗದಲ್ಲಿ ಸಂಜು ಸ್ಯಾಮ್ಸನ್ ಅವಕಾಶ ಪಡೆಯಬಹುದು. ಏಕದಿನ ಮಾದರಿಯಲ್ಲಿ 66ರ ಸರಾಸರಿ ಹೊಂದಿರುವ ಸಂಜು ಸತತ ಅವಕಾಶ ಪಡೆಯುತ್ತಿಲ್ಲ. ಇಂದಿನ ಪಂದ್ಯದಲ್ಲಿ ಅವಕಾಶ ಸಿಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next