Advertisement

13 ಲಕ್ಷ ಮಾಸ್ಕ್ ಪೂರೈಸಿದ ಸಂಜೀವಿನಿ ತಂಡ

12:35 PM Apr 23, 2020 | mahesh |

ಬೆಂಗಳೂರು: ಮಾಸ್ಕ್ ಗಳ ಕೊರತೆ ನೀಗಿಸಲು ಸಂಜೀವಿನಿ ಸ್ವ ಸಹಾಯ ಗುಂಪುಗಳ ಮಹಿಳೆಯರು ಈವರೆಗೆ 13 ಲಕ್ಷ ಮಾಸ್ಕ್ ಗಳನ್ನು ತಯಾರಿಸಿರುವ ಕಾರ್ಯ ಶ್ಲಾಘನೀಯ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದರು. ಬುಧವಾರ ಸಂಜೀವಿನಿ ಸ್ವ ಸಹಾಯ ಗುಂಪುಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಮಾಸ್ಕ್ ತಯಾರಿಸಲು ಸಂಜೀವಿನಿ ತಂಡಕ್ಕೆ 174.97 ಕೋಟಿ ರೂ. ಸಮುದಾಯ ಬಂಡವಾಳ ನಿಧಿಯನ್ನು ನೀಡಲಾಗಿದೆ.

Advertisement

ಸ್ವಸಹಾಯ ಸಂಘಗಳ ಮಹಿಳೆಯರ ಜತೆ ವಿಡಿಯೋ ಸಂವಾದ ನಡೆಸಿದ್ದೇನೆ ಎಂದರು. ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ – ಸಂಜೀವಿನಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 1,147 ಸ್ವ ಸಹಾಯ ಗುಂಪುಗಳ 3,168 ಮಹಿಳೆಯರು ಕಳೆದ 25 ದಿನಗಳಲ್ಲಿ 13 ಲಕ್ಷ ಮೂರು ಪದರುಗಳ ಉತ್ತಮ ಗುಣಮಟ್ಟದ ಮಾಸ್ಕ್ ಗಳನ್ನು ತಯಾರಿಸಿ ಆಯಾಜಿಲ್ಲಾಡಳಿತ, ಸ್ಥಳೀಯ ಮೆಡಿಕಲ್‌ ಶಾಪ್‌ಗ್ಳು, ಸಂಘ-ಸಂಸ್ಥೆಗಳಿಗೆ ಪ್ರತಿ ಮಾಸ್ಕಿನ ಬೆಲೆ 10ರಿಂದ 22 ರೂ. ಕಡಿಮೆ ಬೆಲೆಗೆ ಪೂರೈಕೆ ಮಾಡಿದ್ದಾರೆ ಎಂದರು. 4,000ಕ್ಕೂ ಹೆಚ್ಚು ಸಂಜೀವಿನಿ ಮಹಿಳೆಯರು ಆಯಾಯ ಜಿಲ್ಲೆಗಳಲ್ಲಿ ಕೋವಿಡ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 13 ಕಡೆ ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಿ ಜಿಲ್ಲಾಡಳಿತಗಳ ನೆರವಿನಿಂದ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ 6.81 ಕೋಟಿ ರೂ. ದುರ್ಬಲ ನಿರ್ಮೂಲನ ನಿಧಿಯನ್ನು ಒದಗಿಸಲಾಗಿದೆ ಎಂದರು.  ತುಮಕೂರು, ಉಡುಪಿಯಲ್ಲಿನ ಸ್ವ ಸಹಾಯ ಗುಂಪುಗಳು ವೈಯಕ್ತಿಕ ರಕ್ಷಣಾ ನಿಲುವಂಗಿಗಳು (ಪಿಪಿಇ) ಮತ್ತು ಹೆಡ್‌ ಗೈ ಗಳನ್ನು ಉತ್ಪಾದಿಸುತ್ತಿವೆ ಎಂದರು.

30 ಸಾವಿರ ವೆಂಟಿಲೇಟರ್‌: “ಕೋವಿಡ್ ಸಂಕಷ್ಟದ ವಿರುದ್ಧದ ಹೋರಾಟದಲ್ಲಿ ವೆಂಟಿಲೇಟರ್ ಗಳ ಕೊರತೆ ಆಗದಂತೆ ಎಚ್ಚರವಹಿಸಿರುವ ಕೇಂದ್ರ ಸರ್ಕಾರ 30 ಸಾವಿರ ವೆಂಟಿಲೇಟರ್‌ ತಯಾರು ಮಾಡಲು ಭಾರತ್‌ ಎಲೆಕ್ಟ್ರಾನಿಕ್ಸ್‌ ಸಂಸ್ಥೆ ಆದೇಶ ನೀಡಿದೆ. ವೆಂಟಿಲೇಟರ್‌ ತಯಾರು ಮಾಡಲು ಅಂದಾಜು 200 ಬಿಡಿ  ಭಾಗಗಳು ಬೇಕಾಗುತ್ತದೆ. ಈ ಪೈಕಿ ಏರ್‌ ಫ್ಲೋ ರೆಗ್ಯುಲೇಟ್‌ ಪ್ರಮುಖ ಭಾಗವಾಗಿದ್ದು, ಒಂದಕ್ಕೆ 20 ಸಾವಿರ ರೂ. ಆಗುತ್ತದೆ. ಈ ಮೊದಲ ಇಂಥ ಬಿಡಿ ಭಾಗಗಳು ಜರ್ಮಿನಿಯಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ತಯಾರಿಸಲು ಆರ್ಡರ್‌ ಬಂದಿದೆ. ಹಲವಾರು ಸಂಸ್ಥೆಗಳು ಈ ಕಾರ್ಯದಲ್ಲಿ ನೆರವಾಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next