Advertisement
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಈ ಯೋಜನೆ 2013ರಲ್ಲೇ ಆರಂಭವಾಯಿತು. 2018ರಲ್ಲಿ ರಾಯಚೂರು ಜಿಲ್ಲೆ ಆಯ್ಕೆಯಾದ ನಂತರ ಸಂಜೀವಿನಿ ಗ್ರಾಪಂ ಒಕ್ಕೂಟ ಯೋಜನೆ ತಾಲೂಕಿನಲ್ಲಿ ಆರಂಭವಾಗಿದೆ. ತಾಲೂಕಿನಲ್ಲಿ ಕರಡಿಗುಡ್ಡ, ಕರಿಗುಡ್ಡ, ಗಬ್ಬೂರು, ಜಾಲಹಳ್ಳಿ, ಅರಕೇರಾ ಸೇರಿದಂತೆ 23 ಸ್ವಸಹಾಯ ಗುಂಪುಗಳು ವಲಯ ಮಟ್ಟದಲ್ಲಿ ಒಕ್ಕೂಟಗಳೆಂದು ಸ್ಥಾಪಿಸಿ ಕಾರ್ಯ ನಿರ್ವಹಿಸುತ್ತಿವೆ. 6 ಸ್ವ ಸಹಾಯ ಗುಂಪುಗಳಿಗೆ 75 ಸಾವಿರ, ಒಂದೂವರೆ ಲಕ್ಷದಂತೆ ಸಾಲ ಸೌಲಭ್ಯ ನೀಡಿದೆ. ಇನ್ನೂ 15 ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ನೀಡುವ ಉದ್ದೇಶದಿಂದ ಪ್ರಸ್ತಾವನೆ ಕಳಿಸಲಾಗಿದೆ.
Related Articles
Advertisement
ಸಂಜೀವಿನಿ ಗ್ರಾಪಂ ಒಕ್ಕೂಟದಲ್ಲಿ ನೋಂದಣಿ ಯಾಗುವ ಸ್ವಸಹಾಯ ಗುಂಪುಗಳು ಮಾತ್ರ ಸಾಲ ಪಡೆಯಲು ಅರ್ಹ. 10 ಜನ ಸದಸ್ಯರಲ್ಲಿ ಒಬ್ಬರು ಅಧ್ಯಕ್ಷೆ, ಒಬ್ಬರು ಕಾರ್ಯದರ್ಶಿ ಎಂದು ರಚನೆ ಮಾಡಿದ ನಂತರ ವಲಯ ಮಟ್ಟದ ಬ್ಯಾಂಕ್‌ನಲ್ಲಿ ಹೊಸದಾಗಿ ಬ್ಯಾಂಕ್ ಖಾತೆ ತೆಗೆಯಬೇಕು. ಆ ಬ್ಯಾಂಕ್‌ನ ಮೂರು ಚೆಕ್ ಹಾಗೂ ಬಾಂಡ್ ಸೇರಿದಂತೆ ಇತರೆ ದಾಖಲಾತಿ ನೀಡಿದರೆ ಮಾತ್ರ ಸಾಲ ನೀಡಲಾಗುತ್ತದೆ. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಅಧ್ಯಕ್ಷ-ಕಾರ್ಯದರ್ಶಿ ಸೇರಿ ಬಾಕಿ ಕಂತನ್ನು ವಾರ, ತಿಂಗಳ ರೂಪದಲ್ಲಿ ಪಾವತಿಸಬೇಕು.
ಸಂಜೀವಿನಿ ಗ್ರಾಪಂ ಒಕ್ಕೂಟ ಯೋಜನೆ ಮೂಲಕ 6 ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ. 15 ಗುಂಪುಗಳಿಗೆ ಸಾಲ ನೀಡಲು ಪ್ರಸ್ತಾವನೆ ಕಳಿಸಲಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಈ ಯೋಜನೆಯ ಉದ್ದೇಶವಾಗಿದೆ. -ಶಂಕರ್, ಎನ್‌ಆರ್‌ಎಲ್‌ಎಂ, ವ್ಯವಸ್ಥಾಪಕರು
ಮಹಿಳೆಯರು ಸಾವಲಂಬಿಯಾಗಿ ಬದುಕು ನಿರ್ವಹಿಸಲು ಸಾಲ ನೀಡುವ ಮೂಲಕ ಜೀವನ ರೂಪಿಸಲಾಗುತ್ತಿದೆ. ಈ ಯೋಜನೆ ಸದುಪಯೋಗ ಪಡೆಯಲು ಮಹಿಳೆಯರು ಮುಂದೆ ಬರಬೇಕು. -ದೇವಮ್ಮ, ಸ್ವಸಹಾಯ ಗುಂಪುಗಳ ಕರಡಿಗುಡ್ಡ ವಲಯ ಒಕ್ಕೂಟ ಅಧ್ಯಕ್ಷೆನಾಗರಾಜ ತೇಲ್ಕರ್