Advertisement

ದೇಶ ವಿರೋಧಿ ಹೇಳಿಕೆ ನೀಡುವವರು ದೇಶಪ್ರೇಮಿಗಳೇ: ಶಾಸಕ ಮಠಂದೂರು

12:10 AM Sep 10, 2019 | Sriram |

ಮಂಗಳೂರು: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ರಾಮಮಂದಿರ ನಿರ್ಮಾಣ ವಿರೋಧಿಸಿ ತಾನು ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಶಶಿಕಾಂತ್‌ ಸೆಂಥಿಲ್‌ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ರೀತಿಯ ದೇಶ ವಿರೋಧಿ ಹೇಳಿಕೆ ನೀಡುತ್ತಿರುವವರನ್ನು ದೇಶಪ್ರೇಮಿಗಳೆಂದು ಕರೆಯಲು ಸಾಧ್ಯವೇ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

Advertisement

ರಾಜಕೀಯ ಪ್ರೇರಿತ ಸಿದ್ಧಾಂತದ ವ್ಯಕ್ತಿ ಅಧಿಕಾರಿ ಹುದ್ದೆಯಲ್ಲಿ ಇರುವುದು ಪ್ರಜಾಪ್ರಭುತ್ವಕ್ಕೂ ಅಪಾಯಕಾರಿ. ಅವರು ಅಧಿಕಾರದ ಅವಧಿ ಯಲ್ಲಿ ಯಾವೆಲ್ಲ ಸಂಘಟನೆಗಳ ಜತೆ ಸಂಪರ್ಕ ಇರಿಸಿಕೊಂಡಿದ್ದರು ಎನ್ನುವ ಬಗ್ಗೆಯೂ ತನಿಖೆಯಾಗಬೇಕಾಗಿದೆ ಎಂದರು.

ಸೆಂಥಿಲ್‌ ರಾಜೀನಾಮೆ ಪ್ರಕರಣ ದಲ್ಲಿ ಕಾಂಗ್ರೆಸ್‌ ನಾಯಕರ ಪ್ರತಿಭಟನೆ ಹಾಸ್ಯಾಸ್ಪದ ಎಂದರು.

ಡಿಕೆಶಿ ಪ್ರಕರಣ
ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಅವರು ಆರ್ಥಿಕ ಅಪರಾಧ ಎಸಗಿದ ಪ್ರಕರಣ ಸಂಬಂಧಿಸಿ ತನಿಖೆ ಎದುರಿಸುತ್ತಿದ್ದಾರೆ. ಇದರಲ್ಲಿ ರಾಜಕೀಯ ದ್ವೇಷವಿದೆ ಎನ್ನುವುದು ಅರ್ಥಹೀನ. ಕಾಂಗ್ರೆಸ್‌ ಇದನ್ನು ರಾಜಕೀಯಗೊಳಿಸುತ್ತಿದೆ. ಕಾಂಗ್ರೆಸ್‌ ಸರಕಾರ ಇರುವಾಗಲೂ ಇಂತಹ ತನಿಖೆ ನಡೆದಿದೆ. ಆಗ ರಾಜಕೀಯ ದ್ವೇಷದಿಂದ ಪ್ರಕರಣ ದಾಖಲು ಮಾಡಲಾಗಿದೆಯೇ? ಎನ್ನುವ ಬಗ್ಗೆ ಕಾಂಗ್ರೆಸ್‌ ನಾಯಕರು ಉತ್ತರ ನೀಡಬೇಕಾಗಿದೆ ಎಂದರು.

ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಪ್ರಧಾನಿ ಮೋದಿ ಅವರನ್ನು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಹೋಲಿಸಿರುವ ಮಾಜಿ ಸಚಿವ ರಮಾನಾಥ ರೈ ಅವರ ಹೇಳಿಕೆಗೆ ನಮ್ಮ ಜಿಲ್ಲೆಗೆ ಮಾಡಿರುವ ಅವಮಾನ ಎಂದರು.

Advertisement

ಶಾಸಕ ಡಾ| ಭರತ್‌ ಶೆಟ್ಟಿ, ಪದಾಧಿಕಾರಿಗಳಾದ ರವಿಶಂಕರ್‌ ಮಿಜಾರ್‌, ಕಿಶೋರ್‌ ರೈ, ಸತೀಶ್‌ ಪ್ರಭು ಉಪಸ್ಥಿತರಿದ್ದರು.

ರೈ ಆತ್ಮಾವಲೋಕನ ಮಾಡಿಕೊಳ್ಳಲಿ
ಪ್ರಧಾನಿ ಮೋದಿ ಅವರ ಬಗ್ಗೆ ಕಾಂಗ್ರೆಸ್‌ ನಾಯಕ ರಮಾನಾಥ ರೈ ಕೀಳು ಅಭಿರುಚಿಯ ಹೇಳಿಕೆ ನೀಡಿರುವುದು ಖಂಡನೀಯ. ಚುನಾವಣೆಯಲ್ಲಿ ಸೋತಿದ್ದರೂ ಆ ಪಕ್ಷದ ನಾಯಕರು ಪಾಠ ಕಲಿತಿಲ್ಲ ಎನ್ನುವುದಕ್ಕೆ ಇದು ನಿದರ್ಶನವಾಗಿದೆ. ಮೋದಿ ಬಗ್ಗೆ ಇಂತಹ ಕೀಳು ಹೇಳಿಕೆ ಎಷ್ಟು ಸರಿ ಎನ್ನುವ ಬಗ್ಗೆ ರೈ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಂಜೀವ ಮಠಂದೂರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next