Advertisement

ಹುದ್ದೆಗೆ ಆಸೆಪಟ್ಟಿಲ್ಲ, ಕಾರ್ಯಕರ್ತರೇ ಪಕ್ಷದ ಆಸ್ತಿ: ಸಂಜೀವ ಮಠಂದೂರು

08:20 AM Apr 18, 2018 | Team Udayavani |

ಹಿರೇಬಂಡಾಡಿ: ಕಾರ್ಯಕರ್ತರೇ ಪಕ್ಷದ ಆಸ್ತಿ. ನಾನು ವೈಯಕ್ತಿಕವಾಗಿ ಯಾವುದೇ ಹುದ್ದೆಗೆ ಆಸೆ ಪಟ್ಟವನಲ್ಲ, ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗೆ ನೀವೆಲ್ಲರೂ ಆಶೀರ್ವಾದಿಸಬೇಕೆಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಹೇಳಿದರು. ಮಂಗಳವಾರ ಬೆಳಗ್ಗೆ ತಮ್ಮ ಮನೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. 30 ವರ್ಷಗಳಿಂದ ಪಕ್ಷದಲ್ಲಿ ಕಾರ್ಯಕರ್ತನಾಗಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಗುರುಹಿರಿಯರ ಮಾರ್ಗದರ್ಶನ, ಪಕ್ಷದ ತತ್ವ- ಸಿದ್ಧಾಂತದಂತೆ ಮುನ್ನಡೆದಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ದುಡಿಯಬೇಕು. ಈ ಬಾರಿ ನಮ್ಮದೇ ಗೆಲುವು ಎಂದರು.

Advertisement

ಶ್ರಮಕ್ಕೆ ತಕ್ಕ ಪ್ರತಿಫ‌ಲ
ಜಿ.ಪಂ. ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು ಮಾತನಾಡಿ, ಸಂಜೀವ ಮಠಂದೂರು ಮೂರು ದಶಕಗಳಿಂದ ಪಕ್ಷದಲ್ಲಿದ್ದಾರೆ. ಪಕ್ಷ ಜಿಲ್ಲೆಯಲ್ಲಿ ಈ ಮಟ್ಟಕ್ಕೆ ಬೆಳೆಯಲು ಅವರ ಶ್ರಮವೂ ಇದೆ. ಪಕ್ಷದಲ್ಲಿನ ಅವರ ಪ್ರಾಮಾಣಿಕತೆ ಹಾಗೂ ಶ್ರಮಕ್ಕೆ ಪ್ರತಿಫ‌ಲವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗುವ ಅವಕಾಶ ದೊರೆತಿದೆ. ಅವರನ್ನು ಗೆಲ್ಲಿಸಿ, ಪುತ್ತೂರಿನಲ್ಲಿ ಕಮಲ ಅರಳಿಸಬೇಕಿದೆ ಎಂದರು.

ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಶಯನಾ
ಜಿ.ಪಂ. ಸದಸ್ಯೆ ಶಯನಾ ಜಯಾನಂದ ಮಾತನಾಡಿ, ಪಕ್ಷದ ಕಾರ್ಯಕರ್ತರು ಅಪಪ್ರಚಾರಗಳಿಗೆ ಕಿವಿಗೊಡದೇ ಅಭ್ಯರ್ಥಿ ಮಠಂದೂರು ಅವರನ್ನು ಗೆಲ್ಲಿಸಬೇಕಿದೆ. ಪುತ್ತೂರಿನಲ್ಲಿ ಮತ್ತೆ ಬಿಜೆಪಿ ಶಾಸಕರು, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು. ತಾ.ಪಂ. ಸದಸ್ಯ ಮುಕುಂದ ಗೌಡ ಮಾತನಾಡಿ, ಸಂಜೀವ ಮಠಂದೂರು ನಿಷ್ಠಾವಂತ ಕಾರ್ಯಕರ್ತರು. ಈ ಬಾರಿ ಅವರ ಗೆಲವು ಖಚಿತವಾಗಿದೆ. ಮನೆ ಮನೆ ಭೇಟಿ ನೀಡಿ ಕೇಂದ್ರ ಬಿಜೆಪಿ ಸರಕಾರ ಹಾಗೂ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರದ ಸಾಧನೆಗಳನ್ನು ತಿಳಿಸುವ ಮೂಲಕ ಅಭ್ಯರ್ಥಿ ಗೆಲುವಿಗೆ ಪ್ರಯತ್ನಿಸಬೇಕು ಎಂದರು. ಉಪ್ಪಿನಂಗಡಿಯ ಉದ್ಯಮಿ ಸಚಿನ್‌ ಸುಂದರ ಗೌಡ ಮಾತನಾಡಿ, ಸಂಜೀವ ಮಠಂದೂರು ಪ್ರಚಾರ ಬಯಸದೆ ಜವಾಬ್ದಾರಿ ನಿಭಾಯಿಸುತ್ತಾರೆ ಎಂದರು.

ಸಭೆಯಲ್ಲಿ ತಾ.ಪಂ. ಸದಸ್ಯರಾದ ಜಯಂತಿ ಆರ್‌. ಗೌಡ, ತೇಜಸ್ವಿನಿ ಶೇಖರ ಗೌಡ, ಸುಜಾತಾ ಆಚಾರ್ಯ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮಾಜಿ ಸದಸ್ಯ ಉಮೇಶ್‌ ಶೆಣೈ ಉಪ್ಪಿನಂಗಡಿ, ಹಿರೇಬಂಡಾಡಿ ಗ್ರಾ.ಪಂ. ಸದಸ್ಯ ನಿತಿನ್‌, ಸದಾನಂದ ಶೆಟ್ಟಿ, ಚಂದ್ರಾವತಿ, ವಿಶ್ವನಾಥ, ಮುದ್ದ, ಹಿರೇಬಂಡಾಡಿ ಬಿಜೆಪಿ ಗ್ರಾ.ಪಂ. ಸಮಿತಿ ಅಧ್ಯಕ್ಷ ದಯಾನಂದ ಸರೋಳಿ, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್‌ ಕುಮಾರ್‌ ಪಂರ್ದಾಜೆ, ಬಿಜೆಪಿ ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮಪಾಲ ರಾವ್‌ ಕಜೆ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಸುರೇಶ್‌ ಅತ್ರಮಜಲು, ಚಂದ್ರಶೇಖರ ಮಡಿವಾಳ, ರಮೇಶ್‌ ಭಂಡಾರಿ, ಮಾಜಿ ಸದಸ್ಯ ರಾಮಚಂದ್ರ ಮಣಿಯಾಣಿ, ಕೊçಲ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುನೀಲ್‌ ದಡ್ಡು, ನಡ³ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಲೋಕೇಶ್‌ ಗೌಡ, ಕಾರ್ಯದರ್ಶಿ ಶ್ರೀಧರ ಗೌಡ ನಡ³, ಎಪಿಎಂಸಿ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ಬಿಜೆಪಿ ಮುಖಂಡರಾದ ಮನೋಹರ ಗೌಡ ಡಿ.ವಿ., ರಾಮಣ್ಣ ಗೌಡ ಗುಂಡೋಳೆ, ಗಣೇಶ್‌ ಕುಲಾಲ್‌ ಬಜತ್ತೂರು, ಉಮೇಶ್‌ ಓಡ್ರಪಾಲು, ಲಕ್ಷ್ಮೀ ನಾರಾಯಣ ರಾವ್‌ ಆತೂರು, ಕಿಶೋರ್‌ ಹರಿನಗರ, ಉಮೇಶ್‌ ಸಿದ್ಯೊಟ್ಟು, ಹರೀಶ್‌ ಪಲ್ಲೆಜಾಲು, ಖಾದರ್‌ ಬಂಡಾಡಿ, ಚಂದ್ರಶೇಖರ ನಂದಿನಿನಗರ, ಗುರುನಾಥ ಕೆಮ್ಮಾರ ಉಪಸ್ಥಿತರಿದ್ದರು. ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಹಮ್ಮಬ್ಬ ಶೌಕತ್‌ ಆಲಿ ಸ್ವಾಗತಿಸಿ, ಗ್ರಾ.ಪಂ. ಸದಸ್ಯ ಸೋಮೇಶ್‌ ವಂದಿಸಿದರು. ಕಾರ್ಯಕರ್ತರ ಸಭೆಯ ಬಳಿಕ ಹಿರೇಬಂಡಾಡಿ ಉಳ್ಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಸಂಜೀವ ಮಠಂದೂರು ಅವರ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಮಾಧವ ಗೌಡ ರಾಜಕೀಯ ಗುರು 
ನಾನು ಪಕ್ಷದಲ್ಲಿ ಈ ಮಟ್ಟಕ್ಕೆ ಬೆಳೆಯಲು ನನ್ನ ರಾಜಕೀಯ ಗುರು ದಿ| ಮಾಧವ ಗೌಡ ಶಾಂತಿತ್ತಡ್ಡ ಅವರೇ ಪ್ರಮುಖ ಕಾರಣ. ಅವರ ಮಾರ್ಗದರ್ಶನ, ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಸಂಜೀವ ಮಠಂದೂರು ಭಾವುಕರಾಗಿ ನುಡಿದರು. ಇತ್ತೀಚೆಗೆ ನಿಧನರಾದ ತಮ್ಮ ತಾಯಿಯನ್ನೂ ನೆನಪಿಸಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next