Advertisement

BJP ಬೆಂಬಲ ಕಂಡು ಲಕ್ಷ್ಮೀ ಹೆಬ್ಬಾಳ್ಕರ್ ಎಕ್ಸಟ್ರಾ ಪೆಗ್ ಹಾಕಿ ಮಲಗಬೇಕು: ಸಂಜಯ ಪಾಟೀಲ

06:31 PM Apr 13, 2024 | Team Udayavani |

ಬೆಳಗಾವಿ: ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲ ನೋಡಿ ಇಂದು ರಾತ್ರಿ ಲಕ್ಷ್ಮಿ ಹೆಬ್ಬಾಳಕರಗೆ ನಿದ್ದೆ ಬರುವುದಿಲ್ಲ. ಮಾತ್ರೆ ತೆಗೆದುಕೊಂಡು ಮಲಗಬೇಕು. ಸಾಧ್ಯವಾದರೆ ಎಕ್ಸಟ್ರಾ ಪೆಗ್ ತೆಗೆದುಕೊಂಡು ನಿದ್ದೆ ಮಾಡಬೇಕು ಎಂದು ಮಾಜಿ ಶಾಸಕ ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಶನಿವಾರ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಕಾಲಿಡುತ್ತಿದ್ದಂತೆ ಹೆಬ್ಬಾಳಕರ ಅವರ ನಿದ್ದೆ ಹಾರಿ ಹೋಗಿದೆ. ಹೀಗಾಗಿ ಎಕ್ಸಟ್ರಾ ಪೆಗ್ ತೆಗೆದುಕೊಂಡು ನಿದ್ದೆ ಮಾಡಬೇಕು ಎಂದರು.

ಬೆಳಗಾವಿ ಲೋಕಸಭೆ ಕ್ಷೇತ್ರದ ಎಲ್ಲಾ ಕಡೆಗೆ ನಾನು ಪ್ರಚಾರ ಭಾಷಣ ಮಾಡುತ್ತಿದ್ದೇನೆ. ಗೋಕಾಕ, ಅರಭಾವಿ ವಿಧಾನಸಭಾ ಕ್ಷೇತ್ರಕ್ಕಿಂತಲೂ ಬೆಳಗಾವಿ ಗ್ರಾಮೀಣದಲ್ಲಿ ಅತಿ ಹೆಚ್ಚು ಮಹಿಳೆಯರು ಸೇರಿರುವ ಮೊದಲನೇ ಸಭೆ ಇದಾಗಿದೆ. ಹೀಗಾಗಿ ಹೆಬ್ಬಾಳಕರರಿಗೆ ನಿದ್ದೆ ಬರುವುದಿಲ್ಲ ಎಂದರು.

ಬಿಜೆಪಿ ಸಭೆಗೆ ಮಹಿಳೆಯರು ಹೋದರೆ ನಿಮ್ಮ 2 ಸಾವಿರ ರೂ., ಉಚಿತ ಬಸ್ ಪ್ರಯಾಣ, ಉಚಿತ ಕರೆಂಟ್ ಸ್ಥಗಿತಗೊಳ್ಳಲಿದೆ ಎಂದು ಸಚಿವೆ ಹೆಬ್ಬಾಳಕರ ಬೆದರಿಕೆ ಹಾಕುತ್ತಿರುವ ಬಗ್ಗೆ ಕೆಲ ಕಾರ್ಯಕರ್ತರು ಮೆಸೇಜ್ ಮಾಡಿದ್ದಾರೆ. ಸರ್ಕಾರದ ಯೋಜನೆಗಳು ಬಂದ್ ಮಾಡಲು ಇವರಪ್ಪನ ಮನೆಯದ್ದಾ? ಯೋಜನೆಗಳನ್ನು ಯಾವ ಜನಪ್ರತಿನಿಧಿಗಳು ಎಂದು ಖಾರವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next