Advertisement

ನೂತನ ರಾಷ್ಟ್ರಪತಿ ಕಾರ್ಯದರ್ಶಿಯಾಗಿ ಸಂಜಯ್‌ ಕೊಠಾರಿ ನೇಮಕ

12:17 PM Jul 22, 2017 | Team Udayavani |

ಹೊಸದಿಲ್ಲಿ : ನೂತನ ರಾಷ್ಟ್ರಪತಿಯಾಗಿ ಚುನಾಯಿತರಾಗಿರುವ ರಾಮನಾಥ್‌ ಕೋವಿಂದ್‌ ಅವರ ಕಾರ್ಯದರ್ಶಿಯಾಗಿ ಸಂಜಯ್‌ ಕೊಠಾರಿ ಹಾಗೂ ಪತ್ರಿಕಾ ಕಾರ್ಯದರ್ಶಿಯಾಗಿ ಅಶೋಕ್‌ ಮಲ್ಲಿಕ್‌ ಅವರನ್ನು ನೇಮಕ ಮಾಡಲಾಗಿದೆ. 

Advertisement

ಸಂಜಯ್‌ ಕೊಠಾರಿ ಅವರು ಪ್ರಕೃತ ಸಾರ್ವಜನಿಕ ಉದ್ದಿಮೆಗಳ ಆಯ್ಕೆ ಮಂಡಳಿ ಅಧ್ಯಕ್ಷರಾಗಿರುವರು; ಅಶೋಕ್‌ ಮಲ್ಲಿಕ್‌  ಹಿರಿಯ ಪತ್ರಕರ್ತರು. 

ಗುಜರಾತ್‌ ಕೇಡರ್‌ನ ಹಿರಿಯ ಅರಣ್ಯ ಸೇವಾ ಅಧಿಕಾರಿಯಾಗಿರುವ ಭರತ್‌ ಲಾಲ್‌ ಅವರನ್ನು ಕೋವಿಂದ್‌ ಅವರ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿಯು, ಎರಡು ವರ್ಷಗಳ ಆರಂಭಿಕ ಅವಧಿಯ ಮಟ್ಟಿಗೆ ಈ ನೇಮಕಾತಿಗಳಿಗೆ ಅನುಮೋದನೆ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next