ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆ ಹಾಗೂ ಶಿಸ್ತು ಉಲ್ಲಂಘಿಸಿದ ಆರೋಪದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಂಜಯ್ ಜಾ ಅವರನ್ನು ಮಂಗಳವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಇದಕ್ಕೂ ಮುನ್ನ ಜಾ ಅವರನ್ನು ವಕ್ತಾರ ಹುದ್ದೆಯಿಂದ ವಜಾಗೊಳಿಸಲಾಗಿತ್ತು.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಾಗೂ ಶಿಸ್ತು ಉಲ್ಲಂಘಿಸಿದ ಸಂಜಯ್ ಜಾ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿರುದ್ಧ ಬಂಡಾಯ ಎದ್ದಿದ್ದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಹಾಗೂ ಪಿಸಿಸಿ ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಜಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ವರದಿ ಹೇಳಿದೆ.
“ಸುಮಾರು ಐದು ವರ್ಷಗಳ ಕಾಲ ಸಚಿನ್ ಪೈಲಟ್ ರಕ್ತ, ಕಣ್ಣೀರು ಹಾಗೂ ಕಠಿಣ ಶ್ರಮದಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದರು. ಇದರ ಫಲವಾಗಿಯೇ 21 ಸ್ಥಾನ ಗಳಿಸಿದ್ದ ಪಕ್ಷ 100 ಸ್ಥಾನ ಪಡೆಯುವಂತಾಗಿತ್ತು. ನಾವು ಅವರ ಶ್ರಮಕ್ಕಾದರೂ ಬೆಲೆ ಕೊಡಬೇಕು. ನಾವು ಪಾರದರ್ಶಕವಾಗಿರಬೇಕು” ಎಂದು ಜಾ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ನಾನು ಚುನಾವಣೆ ಗೆಲ್ಲಿಸಿಕೊಟ್ಟೆ, ಗೆಹ್ಲೋಟ್ ಸಿಎಂ ಆದರು! ಬೇಜಾರಿದೆ ಆದರೆ ಬಿಜೆಪಿ ಸೇರಲ್ಲ
ಕುತೂಹಲದ ಸಂಗತಿ ಎಂದರೆ ಮೊದಲು ಜ್ಯೋತಿರಾದಿತ್ಯ ಸಿಂದ್ಯಾ, ಈಗ ಸಚಿನ್ ಪೈಲಟ್…ನೋಡುತ್ತಿರಿ ಮುಂದೆ ಯಾರು ಅಂತ ಎಂಬುದಾಗಿ ಜಾ ಟ್ವೀಟ್ ಮಾಡಿದ್ದು,..ಆ ಸ್ಥಾನಕ್ಕೆ ಜಾ ಅವರನ್ನು ಸೇರಿಸಿದಂತಾಗಿದೆ!