Advertisement

ಶಿವಣ್ಣ ತ್ರಿವಿಕ್ರಮನಿಗೆ ಸಂಜಯ್‌ ದತ್‌ ವಿಲನ್‌?

11:33 AM Apr 01, 2018 | Team Udayavani |

ನಿರ್ದೇಶಕನ ಓಂ ಪ್ರಕಾಶ್‌ ರಾವ್‌, ಶಿವರಾಜಕುಮಾರ್‌ ಅವರಿಗೆ “ತ್ರಿವಿಕ್ರಮ’ ಎಂಬ ಸಿನಿಮಾ ಮಾಡುತ್ತಾರೆಂಬ ಸುದ್ದಿ ಒಂದೆರಡು ವರ್ಷಗಳಿಂದ ಓಡಾಡುತ್ತಲೇ ಇದೆ. ಆದರೆ, ಯಾವಾಗ ಮಾಡುತ್ತಾರೆಂಬ ಪ್ರಶ್ನೆ ಮಾತ್ರ ಹಾಗೆಯೇ ಇದೆ. ಈಗ ಮತ್ತೂಮ್ಮೆ “ತ್ರಿವಿಕ್ರಮ’ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಓಂ ಪ್ರಕಾಶ್‌ ರಾವ್‌ ಹೇಳಿದ ಹೆಸರು.

Advertisement

“ತ್ರಿವಿಕ್ರಮ’ ಚಿತ್ರದಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌ ವಿಲನ್‌ ಆಗಿ ನಟಿಸುತ್ತಾರಂತೆ. ಈ ಮಾತನ್ನು ಸ್ವತಃ ಓಂ ಪ್ರಕಾಶ್‌ ರಾವ್‌ ಹೇಳಿದ್ದು, ಈಗಾಗಲೇ ಸಂಜಯ್‌ ದತ್‌ ಜೊತೆ ಮಾತುಕತೆಯಾಗಿದೆಯಂತೆ. “ತ್ರಿವಿಕ್ರಮ’ ಐದು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಕನ್ನಡದಲ್ಲಿ ಶಿವಣ್ಣ ಹಾಗೂ ಇತರ ಭಾಷೆಗಳಲ್ಲಿ ಬೇರೆ ನಾಯಕರು ಇರಲಿದ್ದಾರಂತೆ.

ಆದರೆ, ಐದು ಭಾಷೆಗಳಲ್ಲೂ ಸಂಜಯ್‌ ದತ್‌ ಅವರೇ ವಿಲನ್‌ ಆಗಿ ನಟಿಸಲಿದ್ದಾರಂತೆ. ಅಂದಹಾಗೆ, ಇದು ಓಂ ಪ್ರಕಾಶ್‌ ರಾವ್‌ ಅವರ 50ನೇ ಚಿತ್ರವಾಗಲಿದೆಯಂತೆ. ಅಂದಹಾಗೆ, ಚಿತ್ರ ಮುಂದಿನ ವರ್ಷ ಆರಂಭವಾಗುವ ಸಾಧ್ಯತೆ ಇದೆ. ಓಂ ಪ್ರಕಾಶ್‌ ರಾವ್‌ ನಿರ್ದೇಶನದ “ಹುಚ್ಚ-2′ ಚಿತ್ರ ಏಪ್ರಿಲ್‌ 6 ರಂದು ಬಿಡುಗಡೆಯಾಗುತ್ತಿದ್ದು, “ಮದರಂಗಿ’ ಕೃಷ್ಣ ಈ ಚಿತ್ರದ ಹೀರೋ.

Advertisement

Udayavani is now on Telegram. Click here to join our channel and stay updated with the latest news.

Next