‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಸಂಜನಾ ಆನಂದ್ ಈಗ ಎಕ್ಸೆ„ಟ್ ಆಗಿದ್ದಾರೆ. ಅದಕ್ಕೆ ಕಾರಣ “ಸಲಗ’.
ದುನಿಯಾ ವಿಜಯ್ ನಾಯಕರಾಗಿರುವ “ಸಲಗ’ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಸಂಜನಾ ಕೂಡಾ ದೊಡ್ಡ ಮಟ್ಟದಲ್ಲಿ ರೀಲಾಂಚ್ ಆಗುತ್ತಿದ್ದಾರೆ ಎಂದರೆ ತಪ್ಪಲ್ಲ.
“ಸಲಗ’ ಚಿತ್ರ ಹಾಗೂ ಪಾತ್ರದ ಬಗ್ಗೆ ಮಾತನಾಡುವ ಸಂಜನಾ, “ಸಲಗ’ ಔಟ್ ಆ್ಯಂಡ್ ಔಟ್ ಮಾಸ್ ಸಿನಿಮಾ. ದುನಿಯಾ ವಿಜಯ್ ಮಾಸ್ ಹೀರೋ ಆಗಿರೋದ್ರಿಂದ, “ಸಲಗ’ದ ಸಬೆjಕ್ಟ್ ಕೂಡ ಮಾಸ್ ಆಗಿಯೇ ಇದೆ. ಇನ್ನು ನನ್ನ ಕ್ಯಾರೆಕ್ಟರ್ ಕೂಡ ಮಾಸ್ ಆಗಿಯೇ ಇದೆ. “ಸಲಗ’ದಲ್ಲಿ ನನ್ನದು ಒಂಥರಾ ಬಜಾರಿ ಥರದ ಕ್ಯಾರೆಕ್ಟರ್. ಆದ್ರೆ ರಿಯಾಲಿಟಿಗೆ ತುಂಬ ಹತ್ತಿರವಿದೆ. ಆಡಿಯನ್ಸ್‌ಗೆ ನನ್ನ ಕ್ಯಾರೆಕ್ಟರ್ ಇಷ್ಟವಾಗುತ್ತೆ ಅನ್ನೋ ನಂಬಿಕೆ ಇದೆ. “ಸಲಗ’ದ ಮೂಲಕ ಮಾಸ್ ಹೀರೋಯಿನ್ ಆಗ್ತಿರೋದಕ್ಕೆ ಖುಷಿಯಾಗ್ತಿದೆ’ ಎನ್ನುತ್ತಾರೆ.
ಇದನ್ನೂ ಓದಿ:ಕಿರುತೆರೆ ಬೆಡಗಿ Surbhi Chandna ಹಾಟ್ & ಗ್ಲಾಮರಸ್ ಫೋಟೋಸ್
ಸಂಜನಾ ಅವರಿಗೆ ಜನರ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರ ಮಾಡುವ ಆಸೆ ಇದೆ. “ನನ್ನ ಪ್ರಕಾರ, ಪ್ರತಿ ಕ್ಯಾರೆಕ್ಟರ್‌ಗೂ ಅದರದ್ದೇ ಆದ ಇಂಪಾರ್ಟೆನ್ಸ್ ಇದ್ದೇ ಇರುತ್ತದೆ. ಆದ್ರೆ ಆ ಕ್ಯಾರೆಕ್ಟರ್ ಎಷ್ಟರ ಮಟ್ಟಿಗೆ ಆಡಿಯನ್ಸ್ ಮನಸ್ಸಿನಲ್ಲಿ ಉಳಿಯುತ್ತದೆ ಅನ್ನೋದು ಸಿನಿಮಾದಲ್ಲಿ ಮುಖ್ಯವಾಗುತ್ತದೆ. ಹತ್ತಾರು ಸಿನಿಮಾಗಳನ್ನು ಮಾಡಿದ್ರೂ, ಅದರಲ್ಲಿ ಯಾವ ಕ್ಯಾರೆಕ್ಟರ್ ಕೂಡ ನೋಡುವವರ ಮನಸ್ಸಿನಲ್ಲಿ ಉಳಿಯದಿದ್ದರೆ, ಅದ್ರಿಂದ ಏನು ಪ್ರಯೋಜನ? ನಾಲ್ಕೇ ಸಿನಿಮಾಗಳನ್ನು ಮಾಡಿದ್ರೂ, ನಾನು ಮಾಡಿದ ಕ್ಯಾರೆಕ್ಟರ್ ನೋಡುವವರ ಮನಸ್ಸಿನಲ್ಲಿ ಉಳಿದ್ರೆ ಅಷ್ಟೇ ಸಾಕು’ ಎನ್ನುವುದು ಸಂಜನಾ ಮಾತು.
ಸದ್ಯ ಸಂಜನಾ ಆನಂದ್, ದುನಿಯಾ ವಿಜಯ್ ಅಭಿನಯದ “ಸಲಗ’, ಅಜೇಯ್ ರಾವ್ ಅಭಿನಯದ “ಶೋಕಿವಾಲಾ’, ನಿರೂಪ್ ಭಂಡಾರಿ ಅಭಿನಯದ “ವಿಂಡೋಸೀಟ್’, ವಿರಾಟ್ ಅಭಿನಯದ “ಅದ್ಧೂರಿ ಲವರ್’ ಹೀಗೆ ಸಾಲು ಸಾಲು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.