Advertisement
Related Articles
Advertisement
ವೈರಸ್ ಕಡಿಮೆಯಾಗುತ್ತೆ …: ಸೂರ್ಯ ಕಿರಣಗಳು ಇಡೀ ಕೋಣೆಯನ್ನು ಬೆಳಗಬೇಕು ಎಂದೇನೂ ಇಲ್ಲ, ಮನೆಯ ಒಂದು ಭಾಗದಲ್ಲಿ ಒಂದಷ್ಟು ಕ್ರಿಮಿಗಳು ನಾಶವಾದರೂ, ಒಟ್ಟಾರೆಯಾಗಿ ಅವುಗಳ ಸಂಖ್ಯೆ ಕಡಿಮೆ ಆಗಿ, ನಮ್ಮ ದೇಹಕ್ಕೆ ಕಡಿಮೆ ಕ್ರಿಮಿಗಳ ಜೊತೆ ಕಾದಾಡುವಂತೆ ಆಗುತ್ತದೆ! ಅಂದರೆ ವೈರಸ್- ಬ್ಯಾಕ್ಟೀರಿಯಾಗಳ “ಲೋಡ್’- ಒಂದು ಹಂತಕ್ಕೆ ಕಡಿಮೆ ಆದಂತೆ ಆಗುತ್ತದೆ. ಮನೆಯವರು ಯಾರಾದರೂ ಕೆಮ್ಮಿದರೆ, ಸೀನಿದರೆ, ನೂರಾರು ಕಣಗಳು ಗಾಳಿಯಲ್ಲಿ ಸೇರಿ, ತೇಲಾಡಲು ಶುರು ಆಗುತ್ತದೆ. ನೇರವಾಗಿ ಬೀಳುವ ಸೂರ್ಯ ಕಿರಣಗಳು ಹೆಚ್ಚು ತಾಪಮಾನ ಹೊಂದಿರುವುದರಿಂದ, ಗಾಳಿಯಲ್ಲಿ ಅಡಗಿರುವ ಈ ಕ್ರಿಮಿಗಳೂ ಒಂದು ಹಂತಕ್ಕೆ ನಿರ್ಮೂಲ ಆಗುತ್ತವೆ. ಮನೆಯೊಳಗೆ ಕಿರಣಗಳ ತೀಕ್ಷ್ಣತೆ ಹೆಚ್ಚೆನಿಸಿದಾಗ, ಬೇಕೆಂದರೆ ಪರದೆ ಎಳೆದು ಅದನ್ನು ನಿಯಂತ್ರಿಸಬಹುದು. ಕ್ರಿಮಿನಾಶಕಗಳನ್ನು ಸಿಂಪಡಿಸಿದರೆ, ಅದು ನಮ್ಮ ಮೇಲೆಯೂ ಅಡ್ಡಪರಿಣಾಮ ಬೀರುತ್ತದೆ.
ಸೂರ್ಯ ಒಳಗೆ ಬರಲು : ಮನೆ ದಕ್ಷಿಣದಲ್ಲಿದ್ದರೆ ಚೆನ್ನ ಸೂರ್ಯನ ಕಿರಣಗಳು ಬೆಳಗ್ಗೆಯೇ ಒಂದು ರೀತಿ, ಸಂಜೆ ಇನ್ನೊಂದು ರೀತಿ ಇರುತ್ತವೆ ಎಂದೇನೂ ಇಲ್ಲ! ನಮಗೆ ಬೆಳಗ್ಗೆ ಆಗಿದ್ದಾಗ, ಅದೇ ದಿಕ್ಕು ಅಮೆರಿಕದವರಿಗೆ ಪಶ್ಚಿಮವಾಗಿರುತ್ತದೆ! ನಮ್ಮಲ್ಲಿ ಸೂರ್ಯ ಏಳುತ್ತಿದ್ದಂತೆ ಅಮೆರಿಕದಲ್ಲಿ ಮುಳುಗುತ್ತಿರುತ್ತಾನೆ. ನಿಮ್ಮ ಮನೆಗೆ ಪೂರ್ವದಿಂದ ಬರುವ ಕಿರಣಗಳು ಏನೆಲ್ಲ ಉಪಯುಕ್ತ ಕಾರ್ಯ ಮಾಡಬಲ್ಲವೋ, ಅವೆಲ್ಲವನ್ನೂ ಪಶ್ಚಿಮದ ಸಂಜೆ ಸೂರ್ಯನ ಕಿರಣಗಳೂ ಮಾಡಬಲ್ಲವು. ನಿಮ್ಮ ನಿವೇಶನದ ದಿಕ್ಕು ಪೂರ್ವವಿರಲಿ, ಪಶ್ಚಿಮವಿರಲಿ, ದಕ್ಷಿಣವಿದ್ದರೆ ಮತ್ತೂ ಚೆನ್ನ, ಕಿಟಕಿ ಬಾಗಿಲುಗಳನ್ನು ಈ ದಿಕ್ಕಿನಲ್ಲಿ ಇಟ್ಟರೆ ಸೂರ್ಯ ಕಿರಣಗಳು ಕೋಣೆಯ ಒಂದು ಭಾಗವನ್ನಾದರೂ ಪ್ರವೇಶಿಸುವಂತೆ ಮಾಡಬಹುದು.
–ಆರ್ಕಿಟೆಕ್ಟ್ ಕೆ. ಜಯರಾಮ್